ಬೆಂಗಳೂರು: ಬಾಂಬ್ ಬ್ಲಾಸ್ಟ್ ಬಳಿಕ ಬಂದ್ ಆಗಿದ್ದ ಕೆಫೆ ಎಂಟು ದಿನಗಳ ಬಳಿಕ ಇಂದಿನಿಂದ ಮತ್ತೆ ಶುರುವಾಗುತ್ತಿದೆ. ಗ್ರಾಹಕರ ಭರ್ಜರಿ ಸ್ಪಂದನ ವ್ಯಕ್ತವಾಗಿದೆ. ಕಳೆದ ಶುಕ್ರವಾರ ಮಾರ್ಚ್ ಒಂದರಂದು ಮಧ್ಯಾಹ್ನ 12.55ಕ್ಕೆ ಬಾಂಬ್ ಬ್ಲಾಸ್ಟ್ ಆಗಿತ್ತು. ಇದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆರೋಪಿಯ ಜಾಡು ಹಿಡಿದಿರುವ ಪೊಲೀಸರು ತಂಡಗಳನ್ನು ರಚಿಸಿಕೊಂಡು ಪಾತಕಿಯ ಹುಡುಕಾಟದಲ್ಲಿದ್ದಾರೆ. ಈ ನಡುವೆ ಒಂದು ವಾರದಿಂದ ತನಿಖೆ ಮತ್ತಿತರ ಪ್ರಕ್ರಿಯೆಗಳಿಗಾಗಿ ರಾಮೇಶ್ವರಂ ಕೆಫೆ ಬಂದ್ ಆಗಿತ್ತು.
ನಗರ ಪೊಲೀಸರು, ಎನ್ಐಎ ತಂಡ ಕೂಡ ಇಲ್ಲಿ ಬಂದು ಪರಿಶೀಲನೆ ನಡೆಸಿದ್ದರು. ಬಾಂಬ್ ಸ್ಫೋಟದಿಂದಾಗಿ ಪೀಠೋಪಕರಣಕ್ಕೆ ಹಾನಿಯಾಗಿತ್ತು. ಇದೀಗ ಎಲ್ಲವನ್ನು ಸರಿ ಪಡಿಸಿರುವ ಮಾಲೀಕರು ಇಂದಿನಿಂದ ಮತ್ತೆ ರಾಮೇಶ್ವರಂ ಕೆಫೆ ಶುರು ಮಾಡುತ್ತಿದ್ದಾರೆ. ಕೆಫೆಯನ್ನು ಮೊದಲಿಗಿಂತ ಹೆಚ್ಚಿನ ಭದ್ರತೆಯಲ್ಲಿ ಆರಂಭಿಸುತ್ತಿದ್ದು, ಪ್ರವೇಶಿಸುವಲ್ಲಿ ಹೊಸದಾಗಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಿದ್ದಾರೆ. ಸಂಶಯಾಸ್ಪದ ಜನರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ. ಹೂವುಗಳು ಹಾಗೂ ತಳಿರು ತೋರಣಗಳಿಂದ ಕೆಫೆಯನ್ನು ಅಲಂಕರಿಸಲಾಗಿದೆ.
ಇಂದಿನಿಂದ ರಾಮೇಶ್ವರಂ ಕೆಫೆ ಓಪನ್: ಬೆಳಗ್ಗೆಯಿಂದಲೇ ಕೆಫೆಗೆ ಬರ್ತಿರೋ ಜನ
Date:






