ಶುಕ್ರವಾರ ಬಂತೆಂದರೆ ಸಿನಿ ಪ್ರಿಯರಿಗೆ ಹಬ್ಬ. ಮತ್ತೊಂದು ಶುಕ್ರವಾರ ಬಂದಿದೆ.
ಈ ಶುಭ ಶುಕ್ರವಾರ 9 ಸಿನಿಮಾಗಳು ರಿಲೀಸ್ ಆಗಿವೆ.
ಪಂಚತಂತ್ರ : ಯೋಗರಾಜ್ ಭಟ್ ನಿರ್ದೇಶನದ ಚಿತ್ರ ಪಂಚತಂತ್ರ ತೆರೆಕಂಡಿದೆ. ವಿಹಾನ್ ಗೌಡ , ರಂಗಾಯಣ ರಘು, ಸೋನಾಲ್ ಮತ್ತಿತರರು ನಟಿಸಿದ್ದಾರೆ.
ಯದಾ ಯದಾ ಧರ್ಮಸ್ಯ : ವಿಜಯ ರಾಘವೇಂದ್ರ ಮತ್ತು ಪ್ರಜ್ವಲ್ ದೇವರಾಜ್ ಅಭಿನಯದ ಮಲ್ಟಿ ಸ್ಟಾರ್ ಸಿನಿಮಾ ಯದಾ ಯದಾ ಧರ್ಮಸ್ಯ ಇಂದು ತೆರೆಕಂಡಿದೆ. ಇದನ್ನು ನಿರ್ದೇಶನ ಮಾಡಿರುವುದು ರಾಜ್.
ರಗಡ್ : ವಿನೋದ್ ಪ್ರಭಾಕರ್ ನಟನೆಯ ರಗಡ್ ಸಿನಿಮಾ ಇಂದು ರಿಲೀಸ್ ಆಗಿದೆ. ಮಹೇಶ್ ಗೌಡ ಇದರ ಡೈರೆಕ್ಟರ್.
ಲಂಡನ್ ನಲ್ಲಿ ಲಂಬೋದರ : ಹೊಸಬರ ಸಿನಿಮಾ ಲಂಡನ್ ನಲ್ಲಿ ಲಂಬೋದರ ಇಂದು ತೆರೆಕಂಡಿದೆ. ಹಾಸ್ಯ ಮತ್ತು ಪ್ರೇಮಕಥೆಯ ಹಂದರ ಹೊಂದಿರುವ ಸಿನಿಮಾ ಇದು.
ಗಂಧದ ಕುಡಿ : ಇದು ಮಕ್ಕಳ ಚಿತ್ರ. ಸಂತೋಷ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.
ರವಿ ಹಿಸ್ಟರಿ : ಮಧುಚಂದ್ರ ನಿರ್ದೇಶನದ ರವಿ ಹಿಸ್ಟರಿ ಈ ವಾರ ರಿಲೀಸ್ ಆದ ಮತ್ತೊಂದು ಸಿನಿಮಾ.
ಹನಿಗಳು : ನಾಗರಾಜ್ ನಿರ್ದೇಶನದ ‘ಹನಿಗಳು’ ಸಿನಿಮಾ ಕೂಡ ಈ ವಾರ ರಿಲೀಸ್ ಆಗಿದೆ. ಹಳ್ಳಿ ಹುಡುಗನ ಲವ್ ಸ್ಟೋರಿಯ ಚಿತ್ರ ಇದು.