ಆಚರಿಸಿಕೊಳ್ತಿರೋದೇಕೆ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ?
ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 2008ರಲ್ಲಿ ತೆರೆಕಂಡ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ಅವರು, ಇಂದು ಕನ್ನಡ ಚಿತ್ರರಂಗದ ಜನಪ್ರಿಯ ಸ್ಟಾರ್ ನಟಿ. ಮೊದಲ ಸಿನಿಮಾವನ್ನೇ ಹಿಟ್ ನೀಡಿದ ಅವರು ಹುಡುಗರು, ದೊಡ್ಮನೆ ಹುಡುಗ, ಡ್ರಾಮಾ, ಸಂತು ಸ್ಟ್ರೈಟ್ ಫಾರ್ವಡ್ ಹೀಗೆ ಹತ್ತಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಇತ್ತೀಚೆಗೆ ಬಂದ ಆಧಿಲಕ್ಷ್ಮೀ ಪುರಾಣ ಕೂಡ ಹಿಟ್. ಚೊಚ್ಚಲ ಮೊಗ್ಗಿನ ಮನಸ್ಸು ಸಿನಿಮಾಕ್ಕೇನೇ ಫಿಲ್ಮ್ ಫೇರ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಇಂದು 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ, ಪ್ರತೀ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಅವರು, ಈ ಬಾರಿ ಅಭಿಮಾನಿಗಳೊಡನೆ ಸೆಲೆಬ್ರೇಷನ್ ಮಾಡಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಮಹಾ ಮಾರಿ ಕೊರೋನಾ. ರಾಜ್ಯದಲ್ಲೂ ಈ ಹೆಮ್ಮಾರಿ ಆತಂಕ ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ಜನ ಗುಂಪು ಗುಂಪಾಗಿ ಸೇರದಿರಲಿ ಎಂಬ ಕಾರಣಕ್ಕೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.
ಈ ಬಗ್ಗೆ ಈ ಹಿಂದೆಯೇ ರಾಧಿಕಾ ಪತಿ, ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದರು. ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಈ ಸಲ ರಾಧಿಕಾ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಮನೆಯಲ್ಲಿ ಮಕ್ಕಳು ಬೇರೆ ಇದ್ದಾರೆ. ಆರೋಗ್ಯದ ಮೇಲೆ ಪರಿಣಾಮ ಬೀರ ಬಾರದು. ಅಲ್ಲದೆ ಜನ ಕೂಡ ಜಾಗೃತರಾಗಿರಿ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಂಡುಬಂದರೂ ಕೂಡ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಅಂತ ಕರೆಕೊಟ್ಟಿದ್ದರು.
ಹೀಗಾಗಿ ಕೊರೋನಾ ದೆಸೆಯಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಯಶ್, ಮುದ್ದಾದ ಮಕ್ಕಳು ಮತ್ತು ಇಡೀ ಕುಟುಂಬದೊಂದಿಗೆ ರಾಧಿಕಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಎನಿವೇ ರಾಧಿಕಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.