ಇಂದು ವರ್ಷದ ಮೊದಲ ಚಂದ್ರಗ್ರಹಣ – ಇದು ಸೂಪರ್ ಮೂನ್..ಏನಿದರ ವಿಶೇಷ

Date:

ಮೇ 26ರಂದು (ಬುಧವಾರ) ( ಇಂದು) ಸಂಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತಿದೆ. ಆದರೆ ಇದು ಈಶಾನ್ಯ ಭಾರತ, ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾದ ಕರಾವಳಿ ಪ್ರದೇಶಗಳು ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಮಾತ್ರ ಕೆಲವೇ ಸಮಯ ಗೋಚರಿಸಲಿದೆ.
ದಕ್ಷಿಣ ಅಮೆರಿಕ, ಉತ್ತರ ಅಮೆರಿಕ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಪೆಸಿಫಿಕ್ ಸಮುದ್ರ ಮತ್ತು ಹಿಂದೂ ಮಹಾಸಾಗರದ ವಿವಿಧ ಭಾಗಗಳಲ್ಲಿ ಚಂದ್ರಗ್ರಹಣ ಕಾಣಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.


ಮಧ್ಯಾಹ್ನ 3.15ಕ್ಕೆ ಚಂದ್ರಗ್ರಹಣದ ಭಾಗಶಃ ಹಂತ ಆರಂಭವಾಗಲಿದ್ದು, ಸಂಪೂರ್ಣ ಚಂದ್ರಗ್ರಹಣವು ಸಂಜೆ 4.39ಕ್ಕೆ ಸಂಭವಿಸಲಿದೆ. ಸಂಪೂರ್ಣ ಗ್ರಹಣದ ಹಂತವು ಸಂಜೆ 4.58ಕ್ಕೆ ಮುಕ್ತಾಯವಾಗಲಿದ್ದು, ಭಾಗಶಃ ಗ್ರಹಣ ಸಂಜೆ 6.23ಕ್ಕೆ ಅಂತ್ಯಗೊಳ್ಳಲಿದೆ.
ಭಾರತದ ಕೆಲವೇ ಭಾಗಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದ್ದರೂ, ಆ ಭಾಗಗಳಲ್ಲಿನ ಜನರಿಗೂ ಗ್ರಹಣ ವೀಕ್ಷಣೆ ಸಾಧ್ಯವಾಗಲಾರದು. ಏಕೆಂದರೆ ಒಡಿಶಾ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಚಂಡಮಾರುತದ ಅಬ್ಬರ ಶುರುವಾಗಿದ್ದು, ಸೂರ್ಯ ಹಾಗೂ ಚಂದ್ರನ ದರ್ಶನವೇ ಅಸಾಧ್ಯವಾಗಿದೆ.


ಭಾರತದಲ್ಲಿ ಮುಂದಿನ ಚಂದ್ರಗ್ರಹಣ ಗೋಚರವಾಗುವುದು ನವೆಂಬರ್ 19ರಂದು. ಇದು ಭಾಗಶಃ ಚಂದ್ರಗ್ರಹಣವಾಗಿರಲಿದೆ. ಈ ಚಂದ್ರಗ್ರಹಣ ಕೂಡ ಕೆಲವೇ ನಿಮಿಷಗಳ ಕಾಲ, ಈಶಾನ್ಯ ಭಾರತದಲ್ಲಿ ಕಾಣಿಸಲಿದೆ.
ಇದು ಸೂಪರ್ ಮೂನ್, ಅಂದರೆ ಚಂದ್ರ ಗ್ರಹಣದ ಜತೆಗೆ ಕೆಂಪು ರಕ್ತ ಚಂದ್ರ ಕೂಡ ಒಮ್ಮೆಲೆ ಉಂಟಾಗುವುದರಿಂದ ಇದು ಬಹು ಅಪರೂಪದ ಚಂದ್ರಗ್ರಹಣ ಎನಿಸಿದೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...