ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ & ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ ರಾಜಕುಮಾರ ತೆರೆಕಂಡು ಇಂಡಸ್ಟ್ರಿ ಹಿಟ್ ಆಗಿತ್ತು. ಇದೀಗ ಅದೇ ಜೋಡಿಯ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಯುವರತ್ನ ತಯಾರಾಗುತ್ತಿದೆ. ಯುವರತ್ನ ಸೆಟ್ಟೇರಿ ತುಂಬಾ ತಿಂಗಳುಗಳೇ ಕಳೆದರೂ ಸಹ ಟೀಸರ್ ಬಿಡುಗಡೆಯಾಗಿರಲಿಲ್ಲ. ಅಪ್ಪು ಫ್ಯಾನ್ಸ್ ಟೀಸರ್ ಯಾವಾಗ ಅಂತ ಕೇಳ್ತಾನೇ ಇದ್ರು..
ಇದೀಗ ಆ ದಿನ ಬಂದಿದ್ದು ಇಂದು 5.30 ಕ್ಕೆ ಯುವರತ್ನ ಟೀಸರ್ ಬಿಡುಗಡೆಯಾಗಲಿದ್ದು ಪುನೀತ್ ಅವರು ಆಗಮಿಸಲಿದ್ದಾರೆ. ಈಗಾಗಲೇ ಟೀಸರ್ ಕ್ರೇಜ್ ಹೆಚ್ಚಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಇದರದ್ದೇ ಜಪ. ಇನ್ನು ಸಂತೋಷ್ ಚಿತ್ರಮಂದಿರದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮದ ತಯಾರಿ ಜೋರಾಗಿದ್ದು ಸಂಜೆ 5.30 ಕ್ಕೆ ಸಂತೋಷ್ ತೆರೆಮೇಲೆ ಯುವರತ್ನನ ಆರ್ಭಟ ನಡೆಯಲಿದೆ.