ಕೋರ್ಟ್ ನಲ್ಲಿ ವಿಚಾರಣೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಒತ್ತಿ ಬಂದ ದುಃಖವನ್ನು ತಡೆದುಕೊಂಡು, ಕಿರುಕುಳದ ಬಗ್ಗೆ ತಿಳಿಸಿದ್ದಾರೆ. ಜಡ್ಜ್ ಎದುರು ಇಡಿ ಅಧಿಕಾರಿಗಳ ಕಿರುಕುಳದ ಕುರಿತು ತಿಳಿಸಿದ ಅವರು, ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದರಿಂದ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿ ಸೂಜಿ ಚುಚ್ಚಿದ್ದರು. ಆಗ ಕೈಯಲ್ಲಿ ರಕ್ತ ಬರುತ್ತಿದ್ದರೂ ಕೂಡ ನನ್ನನ್ನು ಆಸ್ಪತ್ರೆಯಲ್ಲಿ ಬಿಡದೇ ಅಧಿಕಾರಿಗಳು ಕರೆದುಕೊಂಡು ಹೋದರು ಎಂದು ಕಟಕಟೆಯಲ್ಲಿ ನಿಂತಿದ್ದ ಡಿಕೆಶಿ ಜಡ್ಜ್ ಗೆ ತಿಳಿಸಿದ್ದಾರೆ.
ಡಿಕೆಶಿ ಅವರಿಗೆ ಇಡಿ ವಿಚಾರಣೆಯ ಹೆಸರಲ್ಲಿ ಕಿರುಕುಳ ನೀಡುತ್ತಿದೆ. ವಿಶ್ರಾಂತಿಗೆ ಅವರಿಗೆ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ. ಇದರಿಂದ ಡಿಕೆಶಿ ಅಭಿಮಾನಿಗಳು ಹಾಗೂ ಬೆಂಬಲಿಗರು ಆಕ್ರೋಶಿತ ಪಡಿಸುತ್ತಿದ್ದಾರೆ .