ಇಡಿ ಟೀಕೆ ಶಿವಕುಮಾರ್ ಅವರನ್ನು ಬಂಧನ ಮಾಡಿದ ವಿಷಯದಲ್ಲಿ ಡಿಕೆ ಸುರೇಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ 87 ಮನೆಗಳ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ ದೊರೆತ ಹಣ ಡಿ.ಕೆ. ಶಿವಕುಮಾರ್ ಅವರದು ಎಂದು ಹೇಳಲಾಗುತ್ತಿದೆ. ಆದಾಯದ ಮೂಲವಿಲ್ಲದೆ ವ್ಯವಹಾರ ನಡೆಸುವುದಿಲ್ಲ. ಎಲ್ಲವನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ.
ಸಾಲ ಪಡೆದುಕೊಂಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಎಲ್ಲವನ್ನೂ ಕ್ರೆಡಿಟ್ ಕಾರ್ಡ್ ನಿಂದಲೇ ಮಾಡಲು ಸಾಧ್ಯವಿಲ್ಲ. ಕ್ಯಾಶ್ ನಿಂದಲೂ ವ್ಯವಹಾರ ಮಾಡಬೇಕಿರುತ್ತದೆ. ಸ್ನೇಹಿತರೆಂದ ಮಾತ್ರಕ್ಕೆ ಅವರ ಹಣ ನಮ್ಮದಲ್ಲ ಎಂದು ತಿಳಿಸಿದ್ದಾರೆ.