ಮಹೇಂದ್ರ ಸಿಂಗ್ ಧೋನಿ.. ಭಾರತ ಕ್ರಿಕೆಟ್ಗೆ ಹೊಸ ಭಾಷ್ಯ ಬರೆದ ಯುಶಸ್ವಿ ನಾಯಕ. ಇಡೀ ವಿಶ್ವಕ್ರಿಕೆಟ್ ಕಂಡ ಅದ್ಭುತ ಕ್ರಿಕೆಟಿಗ. ಸಹಜವಾಗಿ ಧೋನಿ ನಿವೃತ್ತಿ ಸನಿಹದಲ್ಲಿದ್ದಾರೆ. ಭಾರತಕ್ಕೆ ಒಂದಲ್ಲ ಎರಡು (ಟಿ20, ಏಕದಿನ) ವಿಶ್ವಕಪ್ ತಂದುಕೊಟ್ಟ ಮಹಾ ನಾಯಕ ಧೋನಿ ವೆಸ್ಟ್ ಇಂಡೀಸ್ ಟೂರಿನಿಂದ ದೂರ ಇದ್ದಾರೆ.
ವಿಶ್ವಕಪ್ ಬಳಿಕ ಭಾರತ ವೆಸ್ಟ್ ಇಂಡೀಸ್ ಟೂರ್ನಿಗೆ ರೆಡಿಯಾಗಿದೆ. ಅಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಯನ್ನು ಭಾರತ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಆಡಲಿದ್ದು, ಈ ಮೂರು ಫಾರ್ಮೆಟ್ ನಲ್ಲಿ ಧೊನಿ ಆಡ್ತಿಲ್ಲ. ಅವರು ಭಾರತೀಯ ಸೇನಾ ರೆಜ್ಯುಮೆಂಟ್ ಸೇರಿದ್ದು, 2 ತಿಂಗಳ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಧೋನಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೋಗದ ಹಿನ್ನೆಲೆಯಲ್ಲಿ ಈಗ ಅವರ ಜೆರ್ಸಿ ಕುರಿತ ಮಾತುಗಳು ಕೇಳಿ ಬರ್ತಾ ಇವೆ. ವೆಸ್ಟ್ ಇಂಡೀಸ್ ಪ್ರವಾದಲ್ಲಿರುವ ತಂಡಕ್ಕೆ ಜೆರ್ಸಿ ನಂಬರ್ ನೀಡಲಾಗುತ್ತಿದ್ದು, ಧೋನಿ ಜೆರ್ಸಿ ನಂಬರ್ 7ನ್ನು ಯಾರಿಗೆ ನೀಡಲಾಗುತ್ತದೆ ಎಂಬ ಕುತೂಹಲವಿದೆ. ಸಚಿನ್ ತೆಂಡೂಲ್ಕರ್ರವರು ನಿವೃತ್ತರಾದ್ಮೇಲೆ ಅವರ ಜೆರ್ಸಿ ಸಂಖ್ಯೆಯನ್ನು ನೀಡದೇ ಗೌರವ ಸಲ್ಲಿಸಲಾಗುತ್ತಿದೆ.
ಹಿಂದೆ ವೇಗಿ ಶಾರ್ದುಲ್ ಠಾಕೂರ್, ಸಚಿನ್ ಅವರ ಜೆರ್ಸಿ ನಂಬರ್ ಧರಿಸಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತಪಡಿಸಿದ್ದರು.
ಈಗ ಧೋನಿ ಜೆರ್ಸಿ ನಂಬರ್ ಕೂಡ ಬಹುಶಃ ಯಾರಿಗೂ ಕೊಡಲಿಕ್ಕಿಲ್ಲ. ಧೋನಿ ಜೆರ್ಸಿ ಇತಿಹಾಸದ ಪುಟ ಸೇರಲಿದೆ ಅಂತ ಹೇಳಲಾಗ್ತಿದೆ. ಇನ್ನು ವಿರಾಟ್ ಕೊಹ್ಲಿ 18 ಹಾಗೂ ರೋಹಿತ್ ಶರ್ಮಾ 45 ನಂಬರ್ನ ಜೆರ್ಸಿ ಧರಿಸ್ತಿದ್ದಾರೆ.ಉಳಿದವರು ಆಯಾಯ ಏಕದಿನ-ಟಿ20 ನಂಬರ್ನ ಜೆರ್ಸಿಗಳನ್ನೇ ಧರಿಸಲಿದ್ದಾರೆ ಎನ್ನಲಾಗಿದೆ.