ಇದನ್ನು ಯಾರಾದ್ರೂ ಲಾಕ್‌ಡೌನ್ ಅಂತಾರಾ?

0
31

ಕೊರೋನಾವೈರಸ್ ಬಂದಿದ್ದೇ ಬಂದಿದ್ದು ಯಡಿಯೂರಪ್ಪನವರ ಸರಕಾರದ ವಿರುದ್ಧ ಪ್ರತಿಯೊಬ್ಬರೂ ಸಹ ಈ ಮಾತಿನ ಚಾಟಿ ಬೀಸುತ್ತಲೇ ಇದ್ದಾರೆ. ಜನ ಯಡಿಯೂರಪ್ಪನವರ ವಿರುದ್ಧ ಹಾಗೆ ಮಾತನಾಡುತ್ತಾರೋ ಅಥವಾ ಯಡಿಯೂರಪ್ಪನವರು ಮಾಡುತ್ತಿರುವ ತಪ್ಪುಗಳೇ ಅದೇ ರೀತಿ ಇದ್ದವೋ ಏನೋ..  ಆದರೆ ಇದೀಗ ಯಡಿಯೂರಪ್ಪನವರ ಸರ್ಕಾರ ಕೈಗೊಂಡಿರುವ ಲಾಕ್‌ಡೌನ್ ಬಗ್ಗೆ ಮಾತ್ರ ಪ್ರತಿಯೊಬ್ಬರು ಸಹ ವಿರೋಧವಾಗಿಯೇ ಮಾತನಾಡುತ್ತಿದ್ದಾರೆ.

 

 

ಜನ ಯಡಿಯೂರಪ್ಪನವರು ಘೋಷಿಸಿರುವ ಲಾಕ್‌ಡೌನ್ ವಿರುದ್ಧ ಇಷ್ಟು ಮಟ್ಟದಲ್ಲಿ ತಿರುಗಿ ಬೀಳಲು ಕಾರಣ ಕಳಪೆ ಮಟ್ಟದಲ್ಲಿರುವ ನಿಯಮಗಳು. ಹೌದು ಯಡಿಯೂರಪ್ಪನವರು ಲಾಕ್‌ಡೌನ್ ಎಂದು ಘೋಷಿಸಿರುವ ಹೊಸ ನಿಯಮಗಳಲ್ಲಿ ಹೊಸತನವೇನೂ ಇಲ್ಲ. ಹೊಸತನ ಪಕ್ಕಕ್ಕೆ ಬಿಡಿ ಆ ನಿಯಮಗಳು ಲಾಕ್ ಡೌನ್ ನಿಯಮಗಳೇ ಅಲ್ಲ..!

 

 

ಹೌದು ಪ್ರಸ್ತುತ ಚಾಲನೆಯಲ್ಲಿರುವ ಜನತಾ ಕರ್ಫ್ಯೂ ನಿಯಮಗಳನ್ನೇ ಮೇ 10ರಿಂದ ಲಾಕ್‌ಡೌನ್ ಎಂಬ ಹಣೆಪಟ್ಟಿ ಕಟ್ಟಿ ಬಿಡುಗಡೆ ಮಾಡಲಾಗಿದೆ ಅಷ್ಟೆ. ಹೋಟೆಲ್ ಇರುತ್ತೆ, ಬಾರ್ ಇರುತ್ತೆ, ಹೋಟೆಲ್ನಲ್ಲಿ ಪಾರ್ಸಲ್ ತೆಗೆದುಕೊಳ್ಳಬಹುದು, ಬಾರ್ ನಲ್ಲಿ ಪಾರ್ಸೆಲ್ ತೆಗೆದುಕೊಳ್ಳಬಹುದು.. ಇದು ಪ್ರಸ್ತುತ ಯಡಿಯೂರಪ್ಪನವರು ಬಿಡುಗಡೆ ಮಾಡಿರುವ ಲಾಕ್ ಡೌನ್ ನಿಯಮಗಳು.. ಅಲ್ಲ ಸ್ವಾಮಿ ಬಾರ್ ತೆಗೆದು ಪಾರ್ಸಲ್ ಕೊಟ್ಟರೆ ಅದ್ಯಾವ ಸೀಮೆ ಲಾಕ್ ಡೌನ್ ಹೇಳಿ ಎಂದು ಯಡಿಯೂರಪ್ಪನವರು ಘೋಷಿಸಿರುವ ನಿಯಮಗಳ ವಿರುದ್ಧ ಒಬ್ಬ ಪ್ರಬುದ್ಧ ಜನಸಾಮಾನ್ಯ ಕೇಳುತ್ತಿರುವ ಪ್ರಶ್ನೆಯಾಗಿದೆ..

 

 

ಬೆಳ್ಳಂಬೆಳಿಗ್ಗೆ ಬಾರ್ ಗಳನ್ನು ತೆರೆದು ಪಾರ್ಸಲ್ ಕೊಟ್ಟರೆ ಜನ ಓಡಾಡುವುದಿಲ್ಲವ? ಹೋಟೆಲ್ ಗಳನ್ನು ತೆಗೆದು ಅಲ್ಲಿಯೂ ಸಹ ಪಾರ್ಸಲ್ ಕೊಟ್ಟರೆ ಅಲ್ಲಿ ಜನ ಸೇರಲ್ವ? ಹೀಗೆ ಜನರನ್ನು ಸೇರಿಸುವ ಕಾರ್ಯಕ್ಕೆ ನಿಮ್ಮ ಭಾಷೆಯಲ್ಲಿ ಲಾಕ್ ಡೌನ್ ಅಂತ ಕರೀತಾರ ಯಡಿಯೂರಪ್ಪನವರೇ? ಎಂದು ಪ್ರತಿಯೊಬ್ಬ ಜನ ಸಾಮಾನ್ಯ ಕೂಡ ಇದೀಗ ಯಡಿಯೂರಪ್ಪನವರಿಗೆ ಪ್ರಶ್ನೆ ಹಾಕುತ್ತಿದ್ದಾರೆ. ಹೀಗೆ ಬಾರ್ ತೆಗೆಯಲು ಅನುಮತಿ ನೀಡಿ ಜನಸಂದಣಿ ಸೇರಿಸಲು ತಯಾರಿರುವ ನೀವು ಕೈಗಾರಿಕೆಗಳನ್ನು ಸಹ ತೆರೆಯಲು ಅನುಮತಿ ನೀಡಿ, ಹೇಗೋ ನಾವು ಕೂಡಾ ಕೂಲಿನಾಲಿ ಮಾಡಿ ಒಂದಷ್ಟು ಕಾಸು ಸಂಪಾದಿಸಿ ಹೊಟ್ಟೆಗೆ ಊಟ ತಿನ್ನುತ್ತೇವೆ ಎಂದು ಜನಸಾಮಾನ್ಯರು ಯಡಿಯೂರಪ್ಪನವರನ್ನು ಪ್ರಶ್ನಿಸುತ್ತಿದ್ದಾರೆ.

 

 

ಜನಸಾಮಾನ್ಯರ ಈ ಪ್ರಶ್ನೆಗಳಿಗೆ ಯಡಿಯೂರಪ್ಪನವರ ಬಳಿ ಉತ್ತರವಿದೆಯಾ? ಲಾಕ್ ಡೌನ್ ಎಂಬ ಹೆಸರಿನಲ್ಲಿ ಈ ರೀತಿಯ ಟೊಳ್ಳು ನಿಯಮಗಳನ್ನು ಯಡಿಯೂರಪ್ಪನವರು ಕೈಗೊಳ್ಳುತ್ತಿರುವುದಾದರೂ  ಯಾಕೆ? ಎಂಬ ಹಲವಾರು ಪ್ರಶ್ನೆಗಳು ಮೂಡುತ್ತಿವೆ..

 

 

LEAVE A REPLY

Please enter your comment!
Please enter your name here