ಇದು ಕಾಳಿಂಗ ಸರ್ಪಗಳ ರಾಜಧಾನಿ…!
ಕಾಳಿಂಗ ಸರ್ಪಗಳ ರಾಜಧಾನಿ ಯಾವ್ದು ಗೊತ್ತಾ…? ಇದು ಕರ್ನಾಟಕದಲ್ಲೇ ಇದೆ…! ನೀವು ಈಗಾಗಲೇ ಈ ಪ್ರವಾಸಿ ತಾಣವನ್ನು ನೋಡಿರ್ತೀರಿ…! ಇಲ್ಲ, ಇಲ್ಲಿಗೆ ಒಮ್ಮೆಯಾದ್ರು ಭೇಟಿ ನೀಡ್ಬೇಕು ಎಂಬ ಆಸೆ ನಿಮಗಿರುತ್ತೆ….! ಈ ತಾಣದ ಹೆಸರನ್ನು ನೀವು ಕೇಳಿದ್ದೀರಿ, ಆಗಾಗ ಕೇಳ್ತಿರ್ತೀರಿ…! ಆದ್ರೆ, ಇದು ಕಾಳಿಂಗ ಸರ್ಪಗಳ ರಾಜಧಾನಿ ಅಂತ ನಿಮ್ಗೆ ಗೊತ್ತಿರ್ಲಿಕ್ಕಿಲ್ಲ…!?
ಆಗುಂಬೆ….!
ಹೌದು, ಕಾಳಿಂಗ ಸರ್ಪಗಳ ರಾಜಧಾನಿ ಮಲೆನಾಡ ಸಿರಿ ಆಗುಂಬೆ…!
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಈ ಊರನ್ನು ಜನ ಇಂದಿಗೂ ದಕ್ಷಿಣದ ಚಿರಾಪುಂಜಿ ಅಂತಲೇ ಕರೀತಾರೆ.(ಆದರೆ, ಈಗ ಇಲ್ಲಿಗಿಂತಲೂ ಹೆಚ್ಚು ಮಳೆ ಸುರಿಯುತ್ತಿರೋ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ಕರ್ನಾಟಕದ ಚಿರಾಪುಂಜಿ).
ಮಳೆಗಾದಲ್ಲಿ ಸಾಮಾನ್ಯವಾಗಿ ನಿತ್ಯ 300-400 ಮಿ.ಮೀ ಮಳೆಯಾಗುತ್ತೆ. ಸೋಮೇಶ್ವರ, ಮೂಕಾಂಬಿಕ, ಶರಾವತಿ ಮತ್ತು ಭದ್ರ ಅಭಯಾರಣ್ಯಗಳನ್ನು ಒಳಗೊಂಡ ಪ್ರದೇಶವಾಗಿದೆ.
ಜಿಲ್ಲಾಕೇಂದ್ರ ಶಿವಮೊಗ್ಗದಿಂದ 93.2 ಕಿಮೀ ದೂರದಲ್ಲಿರುವ ಆಗುಂಬೆ ಮಳೆಗೆ ಹೆಸರುವಾಸಿ. ಸಾಯಂಕಾಲ ತಣ್ಣನೆ ಗಾಳಿಯಲ್ಲಿ ಸೂರ್ಯಸ್ತದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಬರ್ತಾರೆ. ದೇಶದ ಏಕೈಕ ಶಾಶ್ವತ ಹರಿದ್ವರ್ಣವನ ಸಂಶೋಧನ ಕೇಂದ್ರ ಈ ಮಲೆನಾಡ ಸಿರಿಯಲ್ಲಿದೆ.
ಆಗುಂಬೆಯನ್ನು ‘ಕಾಳಿಂಗ ಸರ್ಪಗಳ ರಾಜಧಾನಿ’ ಅಂತ ಕರೆದಿದ್ದು ಹೆಸರಾಂತ ಉರಗತಜ್ಞ ರೋಮುಲುಸ್ ವಿಟೆಕರ್ ಅವರು.
ಆಗುಂಬೆ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು…
1) ಸೂರ್ಯಸ್ತಮಾನ ವೀಕ್ಷಣೆ ಸ್ಥಳ (ಸನ್ಸೆಟ್ ಪಾಯಿಂಟ್)
2) ಕೂಡ್ಲುತೀರ್ಥ ಜಲಪಾತ
3) ಮಳೆಕಾಡು ಸಂಶೋಧನಾ ಕೇಂದ್ರ (ರೈನ್ ಫಾರೆಸ್ಟ್ ರಿಸರ್ಚ್ ಸ್ಟೇಷನ್)
4) ಜೋಗಿ ಗುಂಡಿ ಜಲಪಾತ
5) ಒನಕೆ ಅಬ್ಬಿ ಜಲಪಾತ
6) ಬರ್ಕಣ ಜಲಪಾತ
7) ಕುಂದಾದ್ರಿ ಬೆಟ್ಟ
ಮಾರ್ಗ : ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ
ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…
ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!
ಕೊರೋನಾಗೆ ಅಮೆರಿಕಾ ತತ್ತರ ; 24 ಗಂಟೆಯಲ್ಲಿ 1800 ಮಂದಿ ಸಾವು ..!
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ
ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..?
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ
ವೆಂಗ್ ಸರ್ಕಾರ್ ಮಾಡಿರೋ ಆ ರೆಕಾರ್ಡ್ ಸಚಿನ್ ಮುರಿದಿಲ್ಲ ; ಕೊಹ್ಲಿಯಿಂದಲೂ ಇದುವರೆಗೆ ಸಾಧ್ಯವಾಗಿಲ್ಲ …!
ಸೌಂದರ್ಯ ಜೊತೆ ಸಂಬಂಧವಿತ್ತು ಅಂತ ಗರಂ ಆದ ನಟ ಜಗಪತಿ ಬಾಬು..!
ಅಗಲಿದ ಬುಲೆಟ್ ಪ್ರಕಾಶ್ ಯಾವೆಲ್ಲಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ?
ನೀವು ಶ್ರೀಮಂತರಾಗಬೇಕೆ…? ಅದಕ್ಕಿಲ್ಲಿದೆ ಮಾರ್ಗದರ್ಶಿ…!
ಏಪ್ರಿಲ್ 5 ರ ರಾತ್ರಿ 9ಗಂಟೆಗೆ ದೀಪ ಬೆಳಗಿಸುವಂತೆ ಮೋದಿ ಕರೆ..!
ಜಗತ್ತಿನಾದ್ಯಂತ 12, 73,794 ಮಂದಿಗೆ ಹರಡಿದ ಕರೋನಾ ….69, 419 ಮಂದಿ ಬಲಿ..! ಯಾವ ದೇಶದಲ್ಲಿ ಎಷ್ಟೆಷ್ಟು?
ಎಲ್ಲರು ಮಾಸ್ಕ್ ಧರಿಸುವ ಅವಶ್ಯಕತೆ ಇಲ್ವಾ ? ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಸ್ಪಷ್ಟನೆ .