2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

1
1072

ಬಹುಶಃ 2011 ರ ವಿಶ್ವಕಪ್ ಫೈನಲ್ ವೇಳೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಜೊತೆ ಮ್ಯಾಚ್ ವೀಕ್ಷಿಸುತ್ತಿದ್ದ ಹುಡಗನನ್ನು ಯಾರೂ ಗಮನಿಸಿರಲಿಲ್ಲ…! ಸಚಿನ್ ಪುತ್ರನ ಗುರುತು ಹಿಡಿದಿದ್ದ ನಾವು – ನೀವು ಅವರೊಡನಿದ್ದ ಮತ್ತೊಬ್ಬ ಪೋರ ಯಾರೆಂದು ತಿಳಿದಿರಲಿಲ್ಲ….ಕಾಲ ಬದಲಾಗಿದೆ….ಇಂದು ಆ ಪೋರ ಟೀಮ್ ಇಂಡಿಯಾದ ಆಟಗಾರ….ಭಾರತ ತಂಡಕ್ಕೆ ಪದಾರ್ಪಣೆಯನ್ನು ಕೂಡ ಮಾಡಿದ್ದಾರೆ.

ಹೌದು ಅದು 2011…. ಭಾರತ ಸಂಭ್ರಮದ ಕಡಲಲ್ಲಿ ತೇಲಿದ ವರ್ಷ….ಕ್ರಿಕೆಟನ್ನು ಆರಾಧಿಸುವ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಭಾರತ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ವಿಜಯಪತಾಕೆ ಹಾರಿಸಿತು…

ಮುಂಬೈನಲ್ಲಿ ಶ್ರೀಲಂಕಾ ವಿರುದ್ಧ ‌ನಡೆದ ಫೈನಲ್ ಪಂದ್ಯದಲ್ಲಿ ಭಾರತ ಆರಂಭಿಕ ಆಟಗಾರ , ಹಾಲಿ ಸಂಸದ ಗೌತಮ್ ಗಂಭೀರ್ ಹಾಗೂ ಅಂದಿನ ನಾಯಕ ಮಹೇಂದ್ರ ಸಿಂಗ್ ಧೋನಿ ಅತ್ಯುತ್ತಮ ಆಟದ ನೆರವಿನಿಂದ ಗೆದ್ದು, ಚಾಂಪಿಯನ್ ಆಗಿತ್ತು. ಐತಿಹಾಸಿಕ ಕ್ಷಣಕ್ಕೆ ಗುರುವಾರ 9 ವರ್ಷ…ಈ ಹಿನ್ನೆಲೆಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಹೈಲೆಟ್ಸ್ ಮರು ಪ್ರಸಾರ ಮಾಡಿತ್ತು…

ಶ್ರೀಲಂಕಾ ಬ್ಯಾಟಿಂಗ್ ಮಾಡುತ್ತಿದ್ದಾಗ. 34 ನೇ ಓವರ್ ವೇಳೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕಡೆಗೆ ಕ್ಯಾಮರಾ ಫೋಕಸ್ ಮಾಡಲಾಗಿತ್ತು…! ಆಗ ಸಚಿನ್ ಜೊತೆಗೆ ಮತ್ತೊಬ್ಬ ಹುಡುಗ ಇದ್ದ….ಅವತ್ತು ಆತನ ಬಗ್ಗೆ ಯಾರೂ ತಿಳಿದುಕೊಳ್ಳುವ ಕುತೂಹಲ ಕೂಡ ವ್ಯಕ್ತಪಡಿಸಿರಲಿಲ್ಲ….9ವರ್ಷದ ಹಿಂದಿನ ಆ ಕ್ಷಣದ ವಿಡಿಯೋ ಮರುಪ್ರಸಾರವಾದಾಗ ಆತ ಯಾರು ಎಂದು ಗೊತ್ತಾಗಿದೆ …

ಅಂದು ಅರ್ಜುನ್ ತೆಂಡೂಲ್ಕರ್ ಜೊತೆ ಮ್ಯಾಚ್ ನೋಡಿದ್ದ ಪೋರ ಬೇರಾರು ಅಲ್ಲ ಪೃಥ್ವಿ ಶಾ…

ಹೌದು ಅರ್ಜುನ್ ಜೊತೆ ವರ್ಲ್ಡ್ ಕಪ್ ಫೈನಲ್ ನಲ್ಲಿ ಮ್ಯಾಚ್ ನೋಡುತ್ತಿದ್ದ ಪೃಥ್ವಿ ಶಾ ಯಾರೆಂದು ಯಾರೂ ಅಂದು ಫೋಕಸ್ ಮಾಡಿರಲಿಲ್ಲ. ಇಂದು ಅದೇ ಪೃಥ್ವಿ ಶಾ ಅರ್ಜುನ್ ಗಿಂತಲೂ ಜನಪ್ರಿಯ… ಟೀಮ್ ಇಂಡಿಯಾದ ಭರವಸೆ ಆಟಗಾರ… ಮುಂದಿನ ದಿನಗಳಲ್ಲಿ ಭಾರತ ತಂಡದ ಖಾಯಂ ಸದಸ್ಯನಾಗಿ ಕಾಣಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ . 9 ವರ್ಷ ಏನೆಲ್ಲಾ ಬದಲಾಗಿದೆ …..

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

 

 

1 COMMENT

LEAVE A REPLY

Please enter your comment!
Please enter your name here