ಇದು ನೀವೆಲ್ಲೂ ಕೇಳಿರದ ನಾವಿಕನ ಯಶೋಗಾಥೆ.. ಓದ್ಲೇಬೇಕು!

Date:

ಇದು ನೀವೆಲ್ಲೂ ಕೇಳಿರದ ನಾವಿಕನ ಯಶೋಗಾಥೆ.. ಓದ್ಲೇಬೇಕು!

ಶೇಕ್ಲಾಲ್ಚಂದ್ . 43 ವರ್ಷ ವಯಸ್ಸಿನ ತನಕ ಈ ಶೇಕ್ಲಾಲ್ಚಂದ್ಕೇವಲ ದೋಣಿಗೆ ಹುಟ್ಟುಹಾಕುವ ಮನುಷ್ಯ. ಪಶ್ಚಿಮ ಬಂಗಾಳದಲ್ಲಿರುವ ಮುಂದೇಶ್ವರಿ ನದಿ ತಟದ ಜನರನ್ನು ಆ ಬದಿಯಿಂದ ಈ ಬದಿಗೆ, ಈ ಬದಿಯಿಂದ ಆ ಬದಿಗೆ ದೋಣಿ ಮೂಲಕ ತಲುಪಿಸುವ ಕೆಲಸ ಮಾಡುತ್ತಿದ್ರು. ಆದ್ರೆ ಈಗ ಶೇಕ್ಲಾಲ್ಚಂದ್ ಪಶ್ಚಿಮ ಬಂಗಾಳದ ಪಾಲಿನ ಹೀರೋ.
ಏಕೆಂದರೆ, ಯಾಕೆ ಅಂದ್ರೆ ಶೇಕ್ಲಾಲ್ಚಂದ್, ಮುಂದೇಶ್ವರಿ ನದಿಗೆ ಸೇತುವೆ ನಿರ್ಮಿಸಿದ್ದಾರೆ. ಸರ್ಕಾರದ ಯಾವುದೇ ನೆರವು ಪಡೆಯದೆ, ತನ್ನ ಕೈಯಿಂದಲೇ ಖರ್ಚು ಮಾಡಿ ಮುಂದೇಶ್ವರಿ ನದಿಗೆ ಅಡ್ಡಲಾಗಿ ಬಿದಿರಿನ ಸೇತುವೆ ನಿರ್ಮಿಸಿದ್ದಾರೆ. ಈ ಮೂಲಕ ನದಿ ತಟದಲ್ಲಿದ್ದರುವ ಗೋರಬಿರಿಯಾ, ಚಿತ್ನಾನ್ಮತ್ತು ಬಟೋರಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ.
ಶೇಕ್ಲಾಲ್ಚಂದ್ಮುಂದೇಶ್ವರಿ ನದಿಗೆ ಸೇತುವೆ ನಿರ್ಮಿಸಬೇಕೆಂದು ಹಲವು ಬಾರಿ ಕನಸು ಕಂಡಿದ್ದರು. ದೋಣಿ ನಡೆಸುವ ಕಾಯಕದಲ್ಲಿ ಕೊಂಚ ಲಾಭ ಹೆಚ್ಚಿತ್ತಾದರೂ, ಅನೇಕ ಬಾರಿ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದರು. ನದಿಯಲ್ಲಿ ನೀರು ಕಡಿಮೆ ಇದ್ದಾಗ ದೋಣಿ ಓಡಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ಜನರಿಗೆ ಅನಾನುಕೂಲವಾಗಿತ್ತು.

ನದಿಯಲ್ಲಿ ನೀರು ಕಡಿಮೆ ಇದ್ದಾಗ ಜನರು ನೀರಿನ ನಡುವೆ ನಡೆದುಕೊಂಡೇ ಹೋಗಬೇಕಿತ್ತು. ಕೆಲವೊಮ್ಮೆ ಕೆಸರು ತುಂಬಿದ ನೀರು ಜನರಿಗೆ ತೊಂದರೆ ಉಂಟು ಮಾಡುತ್ತಿತ್ತು. ಮೊಣಕಾಲು ತನಕದ ನೀರು ವಿದ್ಯಾರ್ಥಿಗಳು ನದಿ ದಾಟುವುದನ್ನು ಕಷ್ಟ ಮಾಡುತ್ತಿತ್ತು. ಇದರ ಜೊತೆಗೆ ಹಲವು ವಿದ್ಯಾರ್ಥಿಗಳು ಸ್ಕೂಲ್ ಬ್ಯಾಗ್ ನೇತು ಹಾಕಿಕೊಂಡು ನದಿ ದಾಟಲು ಆಗದೇ ವಾಪಸ್ ಹೋಗುತ್ತಿದ್ದರು. ಇದೆಲ್ಲವನ್ನೂ ನೋಡಿ ಶೇಕ್ಲಾಲ್, ಬಿದಿರಿನ ಸೇತುವೆ ನಿರ್ಮಿಸಿ ಜನರಿಗೆ ನೆರವಾಗಿದ್ದಾರೆ.
ಬಿದಿರಿನ ಸೇತುವೆ ನಿರ್ಮಿಸುವುದು ಶೇಕ್ಲಾಲ್ಚಂದ್ಗೆ ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ, ಕೈಯಲ್ಲಿ ದುಡ್ಡು ಇರಲಿಲ್ಲ. ಅಷ್ಟೇ ಅಲ್ಲ ಸೇತುವೆ ನಿರ್ಮಾಣಕ್ಕೆ ಸುಮಾರು 7.5 ಲಕ್ಷ ರೂಪಾಯಿಗಳ ಅನಿವಾರ್ಯತೆ ಇತ್ತು. ಆದ್ರೆ ಶೇಕ್ಲಾಲ್ಚಂದ್ ಹಿಂದೆಮುಂದೆ ಯೋಚಿಸಲಿಲ್ಲ. ಪತ್ನಿಯ ಬಳಿಯಲ್ಲಿದ್ದ ಒಡವೆಗಳನ್ನು ಮಾರಿದ್ರು.


ಮತ್ತೆ, ಗುರುತು ಪರಿಚಯ ಇದ್ದವರ ಕೈಯಿಂದ, ನೆಂಟರಿಷ್ಟರ ಕೈಯಿಂದ ಸಾಲ ಪಡೆದುಕೊಂಡ್ರು. ಮುಂದೇಶ್ವರಿ ನದಿಗೆ ಬಿದಿರಿನ ಸೇತುವೆ ನಿರ್ಮಿಸುವ ಕೆಲಸ ಆರಂಭಿಸಿದ್ರು. 16 ಜನರ ತಂಡ, 28 ದಿನಗಳ ಕಾಲ ಕೆಲಸ ಮಾಡಿ ಮುಂದೇಶ್ವರಿ ನದಿಗೆ ಬಿದಿರಿನ ಸೇತುವೆ ನಿರ್ಮಾಣ ಮಾಡಿಯೇ ಬಿಟ್ರು. ಅಂದುಕೊಂಡ ಕನಸನ್ನು ಸಾಧಿಸಿ, ಜನರಿಗೆ ಸಹಾಯವಾಗುವಂತೆ ಮಾಡಿದ್ರು.
ಕೈಯಿಂದ ಕಾಸು ಹಾಕಿದ ಮೇಲೆ ಅದನ್ನು ವಾಪಸ್ ಪಡೆಯುವ ಉದ್ದೇಶವೂ ಶೇಕ್ಲಾಲ್ಚಂದ್ಗೆ ಇದೆ. ಹೀಗಾಗಿ ನದಿ ದಾಟುವವರಿಂದ ಟೋಲ್ಪಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಗ್ರಾಮಸ್ಥರು ಕೂಡ ಶೇಕ್ಗೆ ಸಹಾಯ ಮಾಡುತ್ತಿದ್ದಾರೆ. ಬಿದಿರಿನ ಸೇತುವೆಯಲ್ಲಿ ನದಿ ದಾಟುವ ಪಾದಚಾರಿಗಳು ಅಥವಾ ಸೈಕಲ್ಸವಾರರು ಪ್ರತೀ ಬಾರಿಯೂ 2 ರೂಪಾಯಿ ನೀಡಬೇಕು.

????????????????????????????????????

ಸ್ಕೂಟರ್ಮತ್ತು ಇತರೆ ದ್ವಿಚಕ್ರವಾಹನಗಳಿಗೆ 6 ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಕಾರ್ಮತ್ತು ಲೈಟ್ವೇಯ್ಟ್ವಾಹನಗಳು 100 ರೂಪಾಯಿ ನೀಡಿ ಬಿದಿರಿನ ಸೇತುವೆ ಮೂಲಕ ನದಿ ದಾಟಬಹುದು. ಅಂದಹಾಗೇ, ವಿದ್ಯಾರ್ಥಿಗಳಿಗೆ ಮತ್ತು ವೃದ್ಧರಿಗೆ ಟೋಲ್ನಲ್ಲಿ ರಿಯಾತಿ ಇದ್ದು ಕೇವಲ 1 ರೂಪಾಯಿ ನೀಡಿ ನದಿ ದಾಟಬಹುದು.
ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇದ್ದ ವೇಳೆ ಮತ್ತು ಆ್ಯಂಬುಲೆನ್ಸ್ಗೆ ಉಚಿತ ಕ್ರಾಸಿಂಗ್ ಅವಕಾಶ ನೀಡುವ ಮೂಲಕ ಶೇಕ್ಲಾಲ್ಚಂದ್ಸಾಮಾಜಿಕ ಕಳಕಳಿಯನ್ನೂ ಮೆರೆದಿದ್ದಾರೆ. ಕೃಷಿಕರು ತಿಂಗಳಿಗೆ ಕೇವಲ 50 ರೂಪಾಯಿ ನೀಡುವ ಮೂಲಕ ಎಷ್ಟು ಬಾರಿ ಬೇಕೋ ಅಷ್ಟು ಬಾರಿ ಸೇತುವೆಯನ್ನು ನದಿ ದಾಟಲು ಉಪಯೋಗಿಸಿಕೊಳ್ಳಬಹುದು.
ಈ ಮಧ್ಯೆ ಶೇಕ್ಲಾಲ್ಚಂದ್ಸಾಹಸದಿಂದ ನದಿ ತಟದಲ್ಲಿರುವ ಗ್ರಾಮಸ್ಥರು ಖುಷಿಯಾಗಿದ್ದಾರೆ. ತಮ್ಮ ದೈನಂದಿನ ಕೆಲಸಗಳು ನೆಮ್ಮದಿಯಿಂದ ನಡೆಯುತ್ತಿದೆ ಅನ್ನೋ ಖುಷಿಯಲ್ಲಿದ್ದಾರೆ. ಒಟ್ಟಿನಲ್ಲಿ ಒಂದೊಳ್ಳೆ ಕೆಲಸ ಎಲ್ಲರಿಗೂ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ನಿಮ್ಮ ವ್ಯಕ್ತಿತ್ವನ್ನೂ ಕೂಡ ಬದಲಿಸಬಲ್ಲದು ಅನ್ನೋದನ್ನ ಶೇಕ್ಲಾಲ್ಚಂದ್ಸಾಹಸ ಕಥೆಯ ಮೂಲಕ ತಿಳಿದುಕೊಳ್ಳಬಹುದು.

Share post:

Subscribe

spot_imgspot_img

Popular

More like this
Related

ಮುಂದಿನ ಆಯವ್ಯಯದಲ್ಲಿ ಯಲ್ಲಾಪುರದಲ್ಲಿ ವಸತಿ ನಿಲಯ ನಿರ್ಮಾಣ: ಸಿದ್ದರಾಮಯ್ಯ ಭರವಸೆ

ಮುಂದಿನ ಆಯವ್ಯಯದಲ್ಲಿ ಯಲ್ಲಾಪುರದಲ್ಲಿ ವಸತಿ ನಿಲಯ ನಿರ್ಮಾಣ: ಸಿದ್ದರಾಮಯ್ಯ ಭರವಸೆ ಬೆಳಗಾವಿ: ಉತ್ತರಕನ್ನಡ...

ಕೇಂದ್ರ ಸರಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು: ಬಿ.ವೈ.ವಿಜಯೇಂದ್ರ

ಕೇಂದ್ರ ಸರಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು: ಬಿ.ವೈ.ವಿಜಯೇಂದ್ರ ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ...

ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ: ಡಿಸಿಎಂ ಡಿ.ಕೆ....

ಮಹಿಳೆಯರಲ್ಲಿ ನಿದ್ರೆಯ ಕೊರತೆಗೆ ಕಾರಣಗಳೇನು? ಇದಕ್ಕೆ ಪರಿಹಾರವೇನು..?

ಮಹಿಳೆಯರಲ್ಲಿ ನಿದ್ರೆಯ ಕೊರತೆಗೆ ಕಾರಣಗಳೇನು? ಇದಕ್ಕೆ ಪರಿಹಾರವೇನು..? ಮನೆಯ ದೈನಂದಿನ ಕೆಲಸಭಾರವನ್ನು ನಿರ್ವಹಿಸುವ...