ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗುವ ಮೊದಲು ಮತ್ತು ಮುಖ್ಯಮಂತ್ರಿ ಯಾಗುವ ಸಂದರ್ಭದಲ್ಲಿ ತೋರಿದ ಆತುರವನ್ನು ನೆನಪಿಸಿ ಕೊಳ್ಳಬೇಕು. ಕೃಷಿ ಸಮಸ್ಯೆ, ಸಾಲಮನ್ನಾ, ರೈತ ಹೋರಾಟ ಹೀಗೆ ಹಲವಾರು ವಿಷಯಗಳಲ್ಲಿ ಬಹಳ ಆತುರ ಪಟ್ಟು ಮಾತನಾಡುತ್ತಿದ್ದರು. ರಾಜ್ಯದ ಜನ ಪ್ರಜ್ಞಾವಂತರು, ವಿದ್ಯಾವಂತರಿದ್ದಾರೆ. ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಅವರಿಗೆ ಈಗ ಅವಕಾಶ ಸಿಕ್ಕಿದೆ. ಅದನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ಸರ್ಕಾರ ರಚನೆಯಾಗಿ 10 ದಿನಗಳಾಗಿವೆ. ಈವರೆಗೂ ಸಂಪುಟ ವಿಸ್ತರಣೆಯಾಗಿಲ್ಲ. ಒನ್‍ಮ್ಯಾನ್ ಶೋ ನಡೆಯುತ್ತಿದೆ ಎಂದು ಅವರು ಲೇವಡಿ ಮಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿ ತೀವ್ರವಾಗಿದೆ. ಖುದ್ದಾಗಿ ಸ್ಪಂದಿಸಬೇಕಿದ್ದ ಮುಖ್ಯಮಂತ್ರಿಯವರು ಇನ್ನು ಅಲ್ಲಿಗೆ ಭೇಟಿ ನೀಡಿಲ್ಲ . ಇದು ಯಡಿಯೂರಪ್ಪ ಅವರ ಸ್ಟೈಲ್. ಈ ಮೊದಲು ನಮ್ಮನ್ನು ಟೀಕಿಸುತ್ತಿದ್ದರು. ಈಗ ಅವರ ಅಧಿಕಾರಾವಧಿಯಲ್ಲಿ ಆಗುತ್ತಿರುವುದೇನು ಎಂದು ಪ್ರಶ್ನಿಸಿದರು.