ಐಪಿಎಲ್ 2019 ರ ಸೀಸನ್ ನಲ್ಲಿ ಟೀಮ್ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಅವರನ್ನು ತಂಡದ ಫ್ರಾಂಚೈಸಿಗಳು ಕಮ್ಮಿ ಬೆಲೆಗೆ ಖರೀದಿ ಮಾಡಿದ್ದು ಐಪಿಎಲ್ ನಲ್ಲಿ ಅವರಿಗೆ ಆದ ಬಹು ದೊಡ್ಡ ಅವಮಾನ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮಾಧ್ಯಮದ ಸಂದರ್ಶನವೊಂದರಲ್ಲಿ ಯುವರಾಜ್ ಸಿಂಗ್ ಅವರ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್ ಜೈಪುರದಲ್ಲಿ ನಡೆದ ಹರಾಜು ಪ್ರಕ್ರಿಯೆ ವೇಳೆ ಯುವರಾಜ್ ಸಿಂಗ್ ಅವರಿಗೆ ಮತ್ತಷ್ಟು ಬೆಲೆಯನ್ನು ನೀಡಿ ಖರೀದಿ ಮಾಡಬಹುದಿತ್ತು ಯಾಕೆಂದರೆ ಆ ಹಣಕ್ಕೆ ಯುವರಾಜ್ ಸಿಂಗ್ ಅವರು ಅರ್ಹವಾಗಿರುವ ವ್ಯಕ್ತಿಯಾಗಿದ್ದರು.
ಕಳೆದ ಹಲವು ದಿನಗಳಿಂದ ಬ್ಯಾಟಿಂಗ್ ಫಾರ್ಮ್ ಮತ್ತು ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ಯುವರಾಜ್ ಸಿಂಗ್ ಅವರು ಉತ್ತಮ ಸಂಬಂಧ ಬಯಸಿದ್ದರು ಆದರೂ ಸಹ ಜೈಪುರದಲ್ಲಿ ನಡೆದ ಹರಾಜಿನಲ್ಲಿ ಮೊದಲ ಎರಡು ಸುತ್ತಿನಲ್ಲಿ ಯಾವುದೇ ಫ್ರಾಂಚೈಸಿ ಅವರನ್ನ ಖರೀದಿಸದೆ ಇರುವುದು ಮತ್ತು ಅವರ ಮೂಲ ಬೆಲೆ ಒಂದು ಕೋಟಿ ರೂಪಾಯಿನ ಕೊಟ್ಟು ಅವರನ್ನು ಖರೀದಿ ಮಾಡಿರುವುದು ಯುವರಾಜ್ ಸಿಂಗ್ ಗೆ ಮಾಡಿದ ಅವಮಾನ ಹಾಗೂ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ ಅಲ್ಲದೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅರ್ಧ ಶತಕವನ್ನು ಸಿಡಿಸಿದ್ದಾರೆ ಆದರೂ ಸಹ ಮುಂಬೈ ತಂಡದ ಆಡುವ ಹನ್ನೊಂದರ ಬಳಗದಿಂದ ಅವರನ್ನು ಕೈಬಿಟ್ಟು ಬೇರೊಬ್ಬ ಆಟಗಾರನಿಗೆ ಮನ್ನಣೆಯನ್ನು ನೀಡುತ್ತಿದ್ದಾರೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.
2019ರ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಇದುವರೆಗೂ ಹಾಡಿರುವ ನಾಲ್ಕು ಪಂದ್ಯಗಳಲ್ಲಿ ಒಂದು ಅರ್ಧ ಶತಕದ ಸಮೇತ 138 ಸ್ಟ್ರೈಕ್ ರೇಟ್ ನಲ್ಲಿ 98 ರನ್ ಗಳನ್ನು ಸಿಡಿಸಿದ್ದಾರೆ.