ಆಕೆಯ ಹೆಸರು ಬೇಡವೇ ಬೇಡ..! ಏಕೆಂದರೆ ಅವಳು “ವೇಶ್ಯೆ”..! ಆಕೆ ಸಿಗುವುದು ಪುಣೆಯ ರೆಡ್ ಲೈಟ್ ಏರಿಯಾದಲ್ಲಿ..! ಕಳೆದ ಇಪ್ಪತೈದು ವರ್ಷಗಳಿಂದಲೂ ಇದೇ ವೇಶ್ಯಾ ವೃತ್ತಿಯಲ್ಲೇ ಆಕೆ ಇದ್ದಾಳೆ..! ವೇಶ್ಯೆ ಎಂಬ ಒಂದೇ ಒಂದು ಕಾರಣಕ್ಕಾಗಿ ಜನ ಅವಳನ್ನು ತುಂಬಾ ಅಸಹ್ಯ ಮತ್ತು ತಿರಸ್ಕಾರದಿಂದ ಕಾಣುತ್ತಿದ್ದಾರೆ..! ಹಂಗಂತ ಆಕೆ “ವೇಶ್ಯೆ”ಯಾಗಿಯೇ ಹುಟ್ಟಿದ್ದಳೇ..? ಅಂದರೆ ಹುಟ್ಟಿನಿಂದ ಆಕೆ ವೇಶ್ಯೆಯೇ..? ಇಲ್ಲ, ಅವಳು “ಸುಸಂಸ್ಕೃತ” ಕುಟುಂಬದಲ್ಲಿ ಹುಟ್ಟಿದವಳು..! ಅಂತಹ ಕುಟುಂಬದಲ್ಲಿ ಹುಟ್ಟಿದ್ದ ಅವಳನ್ನೇಕೆ ಅಂದು ಸಮಾಜ ಒಳ್ಳೆಯ ಕಣ್ಣುಗಳಿಂದ ನೋಡಲಿಲ್ಲ? ಇವತ್ತು ಅವಳು ಕೆಟ್ಟು ಹೋಗುವುದಕ್ಕೂ ಅದೇ ಸಮಾಜ ಕಾರಣ..! ಅವಳನ್ನು ವೇಶ್ಯೆಯನ್ನಾಗಿ ಮಾಡಿದ ಸಮಾಜವೇ ಆಕೆಯನ್ನು ಕೀಳಾಗಿ ಕಾಣುತ್ತಿದೆ..! ನೀವೆ ಹೇಳಿ ಅವಳು ಕೆಟ್ಟವಳೇ..? ಕಾರಣವಿಲ್ಲದೆ, ಅಂತಹ ಪರಿಸ್ಥಿತಿ ಎದುರಾಗದೇ ಆಕೆ ಆ ಕೆಟ್ಟ ವೃತ್ತಿಗೆ ಬಂದವಳಲ್ಲ..!
ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವಾಗ ಅವಳಿಗೆ ಕೇವಲ ಹತ್ತೇ ವರ್ಷ..! ಮದುವೆಯಾದವ ಆಕೆಗಿಂತ ತುಂಬಾ ದೊಡ್ಡವನು..! ಆ ಚಿಕ್ಕ ವಯಸ್ಸಲ್ಲಿ ಆಕೆಗೆ ಹೆಂಡತಿ ಮಾಡಬೇಕಾದ ಕೆಲಸವಾದರೂ ಹೇಗೆ ತಿಳಿದೀತು..? ಪಾಪ, ಇನ್ನೂ ಮೆಚ್ಯುರ್ ಆಗಿರದ ಆಕೆಗೆ ಸೆಕ್ಸ್ ಅಂದರೇನೂ ಅಂತನೂ ಗೊತ್ತಿರಲ್ಲ..! ಆದ್ರೆ ಈ ಮುದಿಗಂಡ ಬಿಡಬೇಕಲ್ಲಾ..? ಬೈದು, ಹೊಡೆದು, ಬಡಿದರೂ ಆಕೆಗೆ ಅದರ ಬಗ್ಗೆ ಆಸಕ್ತಿ ಹುಟ್ಟಿರಲ್ಲ..! ಆತ ಒತ್ತಾಯಿಸಿದರೂ ಈಕೆ ಒಪ್ಪದೇ ಇರುವಾಗ ಆಕೆಯ ಅತ್ತಿಗೆಯ ಜೊತೆಯೇ ಆತ ಅನುಚಿತ ಸಂಬಂಧ ಹೊಂದುತ್ತಾನೆ..! ಇದಕ್ಕೂ ಅವಳು ವಿರೋಧವನ್ನು ಮಾಡುತ್ತಾಳೆ..! ನಂತರ, ಗಂಡನ ಕಾಟ ತಡೆಯಲಾಗದೇ ತವರಿಗೆ ಮರಳುತ್ತಾಳೆ..! ಹೀಗೆ..ಮದುವೆ ಆದ ಕೆಲವೇ ಕೆಲವು ದಿನದೊಳಗೆ ತಂದೆ-ತಾಯಿಯನ್ನೇ ನೆಚ್ಚಿ ಮನೆಗೆ ಬರ ಬೇಕಾಗುತ್ತೆ..!
ಮನೆಯಲ್ಲಿ ಕಿತ್ತು ತಿನ್ನುವ ಬಡತನ..! ಅವಳ ಅಪ್ಪನಿಗೆ ಮನೆ ಮಂದಿಗೆಲ್ಲಾ ಹೊಟ್ಟೆ ತುಂಬಾ ಊಟ ಹಾಕಲು ಸಾಧ್ಯವಾಗ್ತಾ ಇರಲ್ಲ..! ಅದೇ ಸಮಯಕ್ಕೆ ಆಕೆಯ ತಾಯಿಗೆ ಒಬ್ಬ ವ್ಯಕ್ತಿ ಪರಿಚಯವಾಗುತ್ತೇ..! ಇಷ್ಟವಿಲ್ಲದಿದ್ದರೂ ಅವನೊಡನೆ ಸಂಗಡ ಮಾಡುತ್ತಾಳೆ..! ಗಂಡನಿಗೆ ತಿಳಿಯದಂತೆ ಪರ ಪುರುಷರ ಸಹವಾಸ ಹೆಚ್ಚು ಮಾಡಿಕೊಳ್ತಾಳೆ..! ತಾಯಿ ಈ ಕೆಲಸಕ್ಕಿಳಿಯುವಾಗ ಈಕೆಗೆ ಕೇವಲ ಹನ್ನೊಂದು ವರ್ಷ..! ಅಷ್ಟೇ ಅಲ್ಲ ಮನೆಯವರೆಗೂ ಗಂಡಸರು ರಾಜಾರೋಷವಾಗಿ ಬರಲು ಆರಂಭಿಸುತ್ತಾರೆ..! ಗಂಡನಿಲ್ಲದಾಗ ಮನೆಗೆ ಬೇರೆಯವರನ್ನು ಕರೆಸಿಕೊಳ್ಳೋದನ್ನ ಆ ತಾಯಿ ದಿನಚರಿಯನ್ನಾಗಿ ಮಾಡಿಕೊಳ್ಳುವಾಗ ಈಕೆಗೆ ಕೇವಲ ಹನ್ನೆರಡು ವರ್ಷ..! ತಾಯಿಯನ್ನು ನೋಡಿ, “ಆ” ಕೆಲಸದತ್ತ ಆಸಕ್ತಿ ಮೂಡುತ್ತೆ..! ಆದರೂ ಎಂದೂ ತಪ್ಪು ದಾರಿ ಹಿಡಿಯಲೇ ಇಲ್ಲ..! ಕುತೂಹಲವಿದ್ದರೂ “ಸಂಗ”ಬೆಳಸಲಿಲ್ಲ..!
ಕೆಲವು ವರ್ಷಗಳ ನಂತರ ಈಕೆಯ ಕುಟುಂಬ ಕಟ್ಟಡ ನಿರ್ಮಾಣ ಕಾರ್ಯಕ್ಕೆಂದು ಬೇರೆಡೆ ಸ್ಥಳಾಂತರಗೊಳ್ಳುತ್ತೆ..! ಅಲ್ಲೊಬ್ಬ ವ್ಯಕ್ತಿಯ ಪರಿಚಯ ಇವಳಿಗಾಗುತ್ತೆ..! ಆತ ಇವಳಿಗೆ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸ ಕೊಡಿಸುತ್ತಾನೆ..! ಒಂದು ದಿನ ಆತನೇ ಇವಳಿಗೆ ಕೋಲ್ಡ್ ಡ್ರಿಂಕ್ ಕೊಡುತ್ತಾನೆ..! ಅದರಲ್ಲಿ ಡ್ರಗ್ಸ್ ಮಿಕ್ಸ್ ಮಾಡಿರುತ್ತಾನೆ..! ಅದು ಅವಳಿಗೆ ತಿಳಿದಿರಲ್ಲ..! ಅದನ್ನು ಕುಡಿದು ಪ್ರಜ್ಞಾಹೀನಳಾಗಿದ್ದ ಆಕೆಯನ್ನು ಇಬ್ಬರು ರೇಪ್ ಮಾಡ್ತಾರೆ..! ಈ ಘಟನೆಯನ್ನು ತಿಳಿದ ಆಕೆಯ ತಂದೆ ಹೊಡೆದು ಮನೆಯಿಂದ ಆಚೆ ದಬ್ಬುತ್ತಾರೆ..! ಕೆಲಸವನ್ನು ಬೇಡಿ ರಿಲೇಟಿವ್ಸ್ ಮನೆಯತ್ತ ಹೋಗ್ತಾಳೆ..! ಆಕೆಯ ಸಂಬಂಧಿಕಳೊಬ್ಬಳು ಕೆಲಸ ಕೊಡಿಸುವುದಾಗಿ ತನ್ನ ಮನೆಗೆ ಕರೆದುಕೊಂಡು ಹೋಗ್ತಾಳೆ..! ನಂತರ 500 ರೂಪಾಯಿಗಳಿಗೆ ಆಕೆಯನ್ನು ವೇಶ್ಯಾ ಗೃಹಕ್ಕೆ ಹುಡುಗಿಯರನ್ನು ಸಾಗಿಸುವ ನೀಚನಿಗೆ ಮಾರುತ್ತಾಳೆ..! ಆ ಕ್ಷಣ ಅವಳ ಲೈಫೇ ಚೇಂಜ್ ಆಗುತ್ತೆ..! ಹೀಗೆ ವೇಶ್ಯ ವೃತ್ತಿಗೆ ಇಳಿಯುತ್ತಾಳೆ..! ಹೀಗಿರುವಾಗಲೇ ಯಾರೋ ಒಬ್ಬ ಪುಣ್ಯಾತ್ಮ ಒಳ್ಳೆಯ ಬದುಕನ್ನು ಕಲ್ಪಿಸುವುದಾಗಿ ಆಕೆಯನ್ನು ತನ್ನೊಡನೆ ಕರೆದುಕೊಂಡು ಹೋಗ್ತಾನೆ..! ಕೆಲವು ಕಾಲ ಆತನೊಡನೆಯೇ ಇರ್ತಾಳೆ..! ಆದ್ರೆ ಗ್ರಹಚಾರ ಅಂದ್ರೆ ಆತನೂ ಸಹ ಬೇರೊಬ್ಬಳನ್ನು ಮೆಚ್ಚಿ ಆಕೆಯೊಂದಿಗೆ ಹೋಗ್ತಾನೆ..! ಆಗ ಬದುಕಿನ ಅನಿವಾರ್ಯತೆಯಿಂದಾಗಿ ಇವಳು ಮತ್ತೆ ಅದೇ ಹಳೆಯ ವೇಶ್ಯ ವೃತ್ತಿಯನ್ನೇ ನೆಚ್ಚಿಕೊಂಡಿದ್ದಾಳೆ..! ಅವಳಿಗೀಗ 45..! ಅವಳನ್ನು ನೋಡಿದರೇ ಜನ ಥೂ.. ಅಂತಾರೆ..!
ಸರಿ, ಈಗ ನೀವೇ ಹೇಳಿ ತಪ್ಪು ಯಾರದ್ದು..? ಇಂತಹ ಎಷ್ಟೋ ಜನ ಅಮಾಯಕ ಹೆಣ್ಣು ಮಕ್ಕಳು ಇಷ್ಟವಿಲ್ಲದೇ ಇದ್ದರೂ ವೇಶ್ಯಾ ವೃತ್ತಿಗೆ ಬಂದಿದ್ದಾರೆ..! ಅವರನ್ನು ಇಂತಹ ಕೆಟ್ಟ ಕೆಲಸಕ್ಕೆ ಇಳಿಸಿದ ಗಂಡಸರೇ ಆಕೆಯನ್ನು “ಸೂ…..”! ಅನ್ನುತ್ತಾರೆ..! ಇದು ನ್ಯಾಯವೇ..? ನಾವು ವೇಶ್ಯೆಯರನ್ನು ಕೀಳಾಗಿ ಕಾಣಬೇಕಿಲ್ಲ..! ಅವಳನ್ನು ಆ ಸ್ಥಿತಿಗೆ ತಂದವರನ್ನು ಕಾಲಕಸಕ್ಕೂ ಕೀಳಾಗಿ ಕಾಣಬೇಕಿದೆ..! ಅನುಭವಿಸಲು ಆ ಹೆಂಗಸರು ಬೇಕು..? ಗೌರವ ಕೊಡಲಿಕ್ಕೇನೂ ದಾಡಿ..! ಇಂತಹ ನೀಚರಿಗಿದೋ ನಮ್ಮ ಧಿಕ್ಕಾರ..! ಹೆಣ್ಣನ್ನು ಗೌರವಿಸಿ…