ಇದು 50 ಕೋಟಿ ಮೌಲ್ಯದ ಕಂಪನಿ ಕಟ್ಟಿದ ಅಂಧನ ಯಶೋಗಾಥೆ ‌.‌!

Date:

ಇದು 50 ಕೋಟಿ ಮೌಲ್ಯದ ಕಂಪನಿ ಕಟ್ಟಿದ ಅಂಧನ ಯಶೋಗಾಥೆ ‌.‌!

ಸಾಧನೆಗೆ ಅಂಗವೈಕಲ್ಯತೆ ಅಡ್ಡಿ ಬರಲ್ಲ..! ಸಮಸ್ಯೆಗಳು ಇರುವುದೇ ಮೆಟ್ಟಿನಿಂತು ಗುರಿ ಮುಟ್ಟಲಿಕ್ಕೆ..! ಯಾರು ಸಮಸ್ಯೆಗಳನ್ನು ದೈರ್ಯದಿಂದ ಎದುರಿಸ್ತಾರೋ ಅವರು ಗೆದ್ದೇ ಗೆಲ್ತಾರೆ ಅನ್ನೋದಕ್ಕೆ `ಶ್ರೀಕಾಂತ್ ಬೊಲ್ಲೆ’ಯವರೇ ನಮ್ಮ ಕಣ್ಣೆದುರಿನ ಸಾಕ್ಷಿ..!
ಶ್ರೀಕಾಂತ್ ಬೊಲ್ಲೆ ಮೂಲತಃ ಆಂದ್ರಪ್ರದೇಶದವರು. ಇವರ ತಂದೆ-ತಾಯಿ ಇಬ್ಬರೂ ಅವಿದ್ಯಾವಂತರು. ಬಡತನದಲ್ಲೇ ಹುಟ್ಟಿದ ಶ್ರೀಕಾಂತ್ ಹುಟ್ಟು ಕುರುಡರು..!
ಜನ್ಮತಃ ಅಂಧರಾಗಿದ್ದ ಶ್ರೀಕಾಂತ್ ತುಂಬಾನೇ ಅವಮಾನವನ್ನು ಎದುರಿಸಿದ್ರು. ಇವರನ್ನು ನೋಡಿದ ಊರ ಜನರೆಲ್ಲಾ..ಕುರುಡು ಮಗು, ಯಾವುದಕ್ಕೂ ಉಪಯೋಗಕ್ಕೆ ಬರಲ್ಲ ಅಂತ ತಮ್ಮ ಬಾಯಿಗೆ ಬಂದಹಾಗೆ ಮಾತಾಡಿಕೊಳ್ತಾ ಇದ್ರು..! ಅವತ್ತು ಅಂಧ ಶ್ರೀಕಾಂತ್ರನ್ನ ಹೆತ್ತ ಆ ಬಡ ತಂದೆ-ತಾಯಿಗಳಿಗೆ ಅದೆಷ್ಟು ಸಂಕಟವಾಗಿತ್ತೋ ಏನೋ..?! ಆದರೆ 23 ವರ್ಷದ ನಂತರ ಆಗಿದ್ದೇ ಬೇರೆ..!
23 ವರ್ಷದ ಹಿಂದೆ ಶ್ರೀಕಾಂತ್ ಎಂಬ ಅಂಧ ಹುಡುಗ ಹುಟ್ಟಿದಾಗ ಊರವರೆಲ್ಲಾ ಹೀಯಾಳಿಸಿದ್ರು..! ತಾತ್ಸಾರದಿಂದ ಕಂಡರು. ಶಾಲೆಗೆ ಹೋದರೆ ಕುರುಡನೆಂಬ ಕಾರಣಕ್ಕೆ ಆಟ ಆಡಲೂ ಆಗ್ತಾ ಇರ್ಲಿಲ್ಲ..! ಆಡೋಕೆ ಯಾರೂ ಸೇರಿಸಿಕೊಳ್ತಾನೂ ಇರ್ಲಿಲ್ಲ..! ಶಿಕ್ಷಕರೇ ಕೇವಲವಾಗಿ ನೋಡ್ತಾ ಇದ್ರು..! ಮುಂದಿನ ಬೆಂಚಿನಲ್ಲಿ ಶ್ರೀಕಾಂತ್ ಕೂರುವಂತರ್ಲಿಲ್ಲ..! ಮುಂದೆ ಜಾಗವಿದ್ದರೂ ಹಿಂದೆ ಅವರನ್ನು ಹೋಗೆಂದು ತಳ್ತಾ ಇದ್ರು..! ಬಡತನದ ಜೊತೆಗೇ ಹುಟ್ಟಿನೊಡನೆ ಬಳುವಳಿಯಾಗಿ ಬಂದ ಕುರುಡು ಇವರನ್ನು ಎಲ್ಲರಿಂದಲೂ ಅವಮಾನಿಸುತ್ತೆ..! ತುಂಬಾ ನೊಂದು ಕೊಳ್ತಾರೆ. ಆಗ ಅವರ ತಾಯಿ ಅವರಿಗೆ ದೈರ್ಯ ತುಂಬ್ತಾರೆ. ಅವಮಾನವನ್ನೆಲ್ಲಾ ಸಹಿಸಿಕೊಂಡು ಮೇಲೆದ್ದು ಬರ್ತಾರೆ. ಎಸ್.ಎಸ್.ಎಲ್.ಸಿಯಲ್ಲಿ ಶೇಕಡ 92 ಅಂಕಗಳೊಂದಿಗೆ ಪಾಸ್ ಆಗ್ತಾರೆ.


ಕಷ್ಟಪಟ್ಟು ಓದಿ ಎಸ್.ಎಸ್.ಎಲ್.ಸಿ ಪಾಸ್ ಮಾಡಿ ಮುಂದಿನ ವಿದ್ಯಾಭ್ಯಾಸಕ್ಕೆ `ವಿಜ್ಞಾನ’ ವಿಷಯವನ್ನು ಕೇಳಿಕೊಂಡರೆ ಅದನ್ನು ಶಿಕ್ಷಣ ಸಂಸ್ಥೆಗಳು ನಿರಾಕರಿಸಿದವು..! ಹದಿನೆಂಟನೇ ವಯಸ್ಸಲ್ಲಿಯೇ ವ್ಯವಸ್ಥೆಯ ವಿರುದ್ಧ ಕಾನೂನು ಸಮರ ನಡೆಸಿ ವಿಜ್ಞಾನ ಕಲಿಯನ್ನು ಸಾಧ್ಯವಾಗಿಸಿಕೊಂಡರು. ಅಮೇರಿಕಾದ ಪ್ರತಿಷ್ಠಿತ ಮೆಸಾಚುಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಪ್ರವೇಶ ಪಡೆದರು..! ಅಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಅಂಗವಿಕಲ್ಯತೆಯನ್ನು ಎದುರಿಸುತ್ತಿರುವವರಿಗಾಗಿ ಉದ್ಯೋಗ ನೀಡಲೆಂದೇ ಸ್ವತಃ ಕಂಪನೊಯೊಂದನ್ನು ಹುಟ್ಟು ಹಾಕಿದರು.
ಇವರ ಕಂಪನಿಯಲ್ಲಿ ಅಶಿಕ್ಷಿತ ಅಂಗವಿಕಲರಿಗೆ ಕೆಲಸವನ್ನು ಕೊಟ್ಟರು. ಇವರ ಕಂಪನಿಯಲ್ಲಿರುವ ಉದ್ಯೋಗಿಗಳಲ್ಲಿ ಶೇಕಡ 70ರಷ್ಟು ಜನ ಅಂಗವಿಕಲರೇ..!


ಇವರ ಕಂಪನಿಯ ಹೆಸರು `ಆಸಾದೀಪ ಪ್ರೊಜೆಕ್ಟ್ ಪ್ರೈ.ಲಿ’. ಇದು ಪ್ಯಾಕಿಂಗ್ ಗಾಗಿ ಬಳಸುವ ಪರಿಸರ ಸ್ನೇಹಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕಂಪನಿ ಆರಂಭವಾಗಿ ಆರು ತಿಂಗಳೊಳಗೆ 2 ಕೋಟಿ ರೂ ವಹಿವಾಟು ನಡಸಲಾರಂಭಿಸಿತ್ತು.
ಕಳೆದ ವರ್ಷ ಇವರನ್ನು ಭೇಟಿ ಆದ ಹೂಡಿಕೆದಾರ `ರವಿ ಮಂತ್ರ’ ಇವರಿಗೆ ಸಲಹೆ, ಮಾರ್ಗದರ್ಶನ ನೀಡಿದ್ದು ಮಾತ್ರವಲ್ಲದೇ ಹೂಡಿಕೆಯನ್ನೂ ಮಾಡಿ ಬೆಂಬಲನೀಡಿದ್ದಾರೆ. ಸಣ್ಣದಾಗಿ ಹುಟ್ಟಿಕೊಂಡ ಇವರ ಕಂಪನಿ ಇವತ್ತು 50 ಕೋಟಿ ರೂ ಬೆಲೆ ಬಾಳುತ್ತದೆ. ಕನರ್ಾಟಕದ ಹುಬ್ಬಳ್ಳಿ, ತೆಲಂಗಾಣದ ನಿಜಾಮಾಬಾದ್ ನಲ್ಲಿ ಒಂದೊಂದು ಶಾಖೆಡಯನ್ನು ಹೊಂದಿರೋ ಕಂಪನಿ ಹೈದರಾಬಾದ್ ನಲ್ಲಿ ಎರಡು ಶಾಖೆಗಳನ್ನು ಹೊಂದಿದೆ. ಅವತ್ತು ಕುರುಡನೆಂದು ಹೀಯಾಳಿಸುತ್ತಿದ್ದ ಊರವರು ಇವರ ಸಾಧನೆಯನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ..! ಹೀಯಾಳಿಸುವವರು ಹೀಯಾಳಿಸುತ್ತಲೇ ಇರ್ತಾರೆ..! ಕಾಲೆಳೆಯುವವರು ಕಾಲ ಕೆಳಗೆಯೇ ಇರ್ತಾರೆ..! ಟೀಕೆಗೆ ಅಂಜದೆ, ಅವಮಾನ ಸಮಸ್ಯೆಗಳನ್ನು ಎದುರಿಸಿ ಗೆಲ್ಲೋಣ..! ಸವಾಲುಗಳು ಇರುವುದೇ ಬಗೆಹರಿಸಿಕೊಂಡು ಗೆಲ್ಲೋದಕ್ಕೆ..! ಶ್ರೀಕಾಂತ್ ಪ್ರತಿಯೊಬ್ಬರಿಗೂ ಮಾದರಿ. ಇವರನ್ನು ನೋಡಿಯಾದ್ರೂ ನಾವು ನಮ್ಮ ಮಿತಿಗಳನ್ನು ಮೀರಿ ಬೆಳೆಯೋಣ..!

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...