ಇದೇನಿದು ಮಹಿಳಾ ಪ್ರವಾಸಿಗರಿಗಾಗಿ ಪಿಂಕ್ ರೂಂ! ಏನಿದರ ವಿಶೇಷತೆ?

Date:

ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಹಿಳಾ ಸುರಕ್ಷತೆ ಬಗ್ಗೆ ಎಲ್ಲೆಡೆ ಭಾರೀ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಕೇರಳದಲ್ಲಿ ಮಹಿಳಾ ಪ್ರವಾಸಿಗರಿಗೆಂದೇ ವಿಶೇಷವಾದ `ಪಿಂಕ್ ರೂಂ’ ಯೋಜನೆ ರೂಪುತಾಳಲು ರೆಡಿಯಾಗಿದೆ.

ಮಹಿಳಾ ಪ್ರವಾಸಿಗರಿಗೆಂದೇ `ಪಿಂಕ್ ರೂಂ’ಗಳನ್ನು ಪರಿಚಯಿಸಲಾಗಿದೆ. ಮಹಿಳಾ ಪ್ರಯಾಣಿಕರ ಭದ್ರತೆಯನ್ನೇ ಪ್ರಮುಖ ಆದ್ಯತೆಯಾಗಿಟ್ಟುಕೊಂಡು ಈ ವಿನೂತನ ಕಲ್ಪನೆಯನ್ನು ಹುಟ್ಟುಹಾಕಲಾಗಿದೆ.

ಸ್ವಿಟ್ಜಲೆರ್ಂಡ್ ಮೂಲದ, ಕೇರಳದ ತಿರುವನಂತಪುರಂನಲ್ಲಿ ವಾಸವಿರುವ ಕ್ರೈಸ್ಟ್ ಜಾನ್ಸನ್ ಪಿಂಕ್ ರೂಂ ಪರಿಕಲ್ಪನೆ ರುವಾರಿ. ಸರ್ವೀಸ್ ಅಪಾಟ್ಮೆಂಟ್ ಇದಾಗಿದ್ದು, ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಪರಿಕಲ್ಪನೆ ಪರಿಚಯಿಸಿದ್ದಾರೆ. ಪಿಂಕ್ ರೂಂನಲ್ಲಿ ಮಹಿಳೆಯರ ಭದ್ರತೆಗೆ ಆದ್ಯತೆ ನೀಡಲಾಗಿದೆ. ನಿಶ್ಚಿಂತೆಯಿಂದ, ಸುರಕ್ಷಿತವಾಗಿರುವಂತೆ ಸೇವೆ ನೀಡುವುದು ಇದರ ಉದ್ದೇಶ ಎಂದು ಕ್ರೈಸ್ಟ್ ಜಾನ್ಸನ್ ತಿಳಿಸಿದ್ದಾರೆ.

ಸರ್ವೀಸ್ ಅಪಾಟ್ಮೆಂಟ್ಗಳಿಗೆ ಪಿಂಕ್ ರೂಂ ಎಂದು ಹೆಸರಿಡಲಾಗಿದೆ. ಮಹಿಳಾ ಸಬಲೀಕರಣದ ಉದ್ದೇಶವೂ ಈ ಯೋಜನೆಯಲ್ಲಿ ಅಡಗಿದೆ. ಮಹಿಳಾ ಪ್ರಯಾಣಿಕರಿಗμÉ್ಟೀ ಅಲ್ಲದೇ, ಬೇರೆ ಊರಿನಿಂದ ಒಬ್ಬರೇ ಬಂದು ತಂಗುವವರಿಗೂ ಈ ಸೇವೆ ಲಭ್ಯವಿದೆ. ಅಕುಲಂ ಟೂರಿಸ್ಟ್ ವಿಲೇಜಿನಲ್ಲಿ ಸದ್ಯಕ್ಕೆ ಈ ಸೇವೆ ಆರಂಭಿಸಲಾಗಿದೆ. ಐಟಿ ಪಾರ್ಕ್ ಗಳಿಗೆ ಹತ್ತಿರವಿರುವಂತೆ ಈ ಯೋಜನೆ ರೂಪಿತಗೊಂಡಿದೆ. ಎಲ್ಲರೂ ಮಹಿಳಾ ಸಿಬ್ಬಂದಿ : ಮಹಿಳೆಯರ ಭದ್ರತೆಯೇ ಇಲ್ಲಿ ಆದ್ಯತೆಯಾಗಿರುವುದರಿಂದ ಇಡೀ ಪಿಂಕ್ ರೂಂನಲ್ಲಿ ಮಹಿಳಾ ಸಿಬ್ಬಂದಿಯಷ್ಟೇ ಇರಲಿದ್ದಾರೆ. ಎಲ್ಲೆಡೆ ಸಿಸಿ ಟಿವಿ ಇರಲಿದೆ.

ಆಹಾರ, ಲಾಂಡ್ರಿ ಇನ್ನಿತರ ಸೇವೆಗಳು ಸಏರಿದಂತೆ ದಿನದ 24 ಗಂಟೆಯೂ ಎಲ್ಲಾ ಸೇವೆಗಳು ಅಪಾಟ್ಮೆಂಟಲ್ಲಿ ಲಭ್ಯವಿರುತ್ತದೆ. ತಾತ್ಕಾಲಿಕವಾಗಿ ನೆಲೆ ಬಯಸುವವರಿಗೂ ಈ ಅಪಾರ್ಟ್ ಮೆಂಟ್ ಅನುಕೂಲವಾಗಲಿದೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...