ಇನ್ನು ಮುಂದೆ ವಾರದ 6 ದಿನವು ಶಿರಡಿಗೆ ಬೆಂಗಳೂರಿನಿಂದ ವಿಮಾನ..!!
ಪುಣ್ಯಕ್ಷೇತ್ರ ಶಿರಡಿ ಸಾಯಿಬಾಬಾ ಅವರ ದರ್ಶನಕ್ಕೆ ಬೆಂಗಳೂರಿನಿಂದ ಹೊರಡುವ ಭಕ್ತಾದಿಗಳಿಗೆ ಸಿಹಿ ಸುದ್ದಿ ಇದು.. ಇನ್ನು ಮುಂದೆ ವಾರದ 6 ದಿನವು ಬೆಂಗಳೂರಿನಿಂದ ಶಿರಡಿಗೆ ವಿಮಾನಯಾನವನ್ನ ಕಲ್ಪಿಸಲಾಗುತ್ತಿದೆ.. ಮಂಗಳವಾರ ಹೊರತು ಪಡೆಸಿ ಇನ್ನೆಲ್ಲ ದಿನಗಳಲ್ಲಿ ಶಿರಡಿಗೆ ಬೆಂಗಳೂರಿನಿಂದ ವಿಮಾನ ಇರಲಿದೆ..
ಈ ಸೇವೆಯನ್ನ ಪಡೆಯಲು ಕೊಂಚ ಸಮಯ ಕಾಯಬೇಕಷ್ಟೆ.. ಜನವರಿ 6 ರಿಂದ ಈ ವಿಮಾನಯಾನ ಸೇವೆಯನ್ನ ಒದಗಿಸಲ್ಲಿದ್ದು, ಕೇವಲ 1 ಗಂಟೆ 45 ನಿಮಿಷದ ಪ್ರಯಾಣ ಇದಾಗಿರಲ್ಲಿದ್ದು, 4,367 ರೂ ಟಿಕೆಟ್ ದರವನ್ನ ಫಿಕ್ಸ್ ಮಾಡಲಾಗಿದೆ..
ಈಗಾಗ್ಲೇ ಟಿಕೆಟ್ ಬುಕಿಂಗ್ ಸಹ ಆರಂಭವಾಗಿದ್ದು, 2.25 ಕ್ಕೆ ಹೊರಡುವ ವಿಮಾನ ಸಂಜೆ 4.10 ಕ್ಕೆ ತಲುಪುತ್ತದೆ.. ಶಿರಡಿಯಿಂದ 12.10ಕ್ಕೆ ಹೊರಟು 1.55 PM ಗೆ ತಲುಪಲಿದೆ.. ಇನ್ನೂ ಹೈದ್ರಾಬಾದ್ ಮೂಲಕ ಸಂಪರ್ಕ ಕಲ್ಪಿಸಲಾಗಿದ್ದು, 11.20 ಕ್ಕೆ ಶಿರಡಿ ಬಿಟ್ಟು ಹೈದ್ರಬಾದ್ ಗೆ 12.40 ಕ್ಕೆ ಬಂದು ತಲುಪಲಿದೆ.. ಆನಂತದರ ಮತ್ತೆ ಹೈದ್ರಾಬಾದ್ ನಿಂದ 4.45 ಕ್ಕೆ ಹೊರಟು 5.20 ಕ್ಕೆ ಬೆಂಗಳೂರು ತಲುಪಲಿದೆ..