ಇನ್ನು ಮುಂದೆ ಹೀಗೆಲ್ಲ ಗೂಗಲ್ ನಲ್ಲಿ ಸರ್ಜ್ ಮಾಡಿದ್ರೆ, ಕಾದಿದೆ ಶಿಕ್ಷೆ..!!
ಹೌದು.. ಎಲ್ಲದಕ್ಕು ಗೂಗಲ್ ಹಾಗೆ ಇಂಟರ್ ನೆಟ್ ಮೊರೆ ಹೋಗುವ ಜನತೆ ಅಲ್ಲಿ ತಮಗೆ ಬೇಕಾದ ವಿಷಯದ ಬಗ್ಗೆ ಹುಡುಕಾಟ ನಡೆಸುತ್ತಾರೆ.. ಇನ್ನು ಕೆಲವರು ಇನ್ನು ಮುಂದೆ ಹೋಗಿ ಚೈಲ್ಡ್ ಪೋರ್ನ್ ಗೆ ಸಂಬಂಧ ಪಟ್ಟ ಕೀವರ್ಡ್ ಗಳನ್ನ ಹಾಕಿ ಸರ್ಜ್ ಮಾಡುತ್ತಾರೆ.. ಇನ್ನು ಮುಂದೆ ಹೀಗೆ ಮಾಡಿದ್ರೆ ಜೈಲಿಗೆ ಹೋಗುವ ಸಾಧ್ಯತೆಗಳಿವೆ.. ಹೌದು, ಸದ್ಯ ಮಕ್ಕಳ ಮೇಲಿನ ಲೈಗಿಂಕ ದೌರ್ಜನ್ಯ ವನ್ನ ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಇಂಟರ್ನೆಟ್ ಕಂಪನಿಗಳಿಗೆ ಖಡಕ್ ಆದೇಶವನ್ನ ನೀಡಿದ್ದು, ಇಂತಹ ಕಂಟೆಂಟ್ ಗಳನ್ನ ಸರ್ಜ್ ಮಾಡುವ ಸಂದರ್ಭದಲ್ಲಿ ಬಳಸಬಹುದಾದ ಹಲವು ಕೀವರ್ಡ್ ಗಳನ್ನ ಬ್ಲಾಕ್ ಮಾಡಲಾಗುತ್ತಿದೆ..
ಇನ್ನು ಮುಂದೆ ಮಕ್ಕಳ ಅಶ್ಲೀಲ ಚಿತ್ರಗಳ ಬಗ್ಗೆ ಸರ್ಜ್ ಮಾಡುವವರ ಸ್ಕ್ರೀನ್ ಮೇಲೆ ಎಚ್ಚರಿಕೆ ಸಂದೇಶ ಮೂಡಲಿದೆ.. ಈಗಾಗ್ಲೇ ಈ ಕೀವರ್ಡ್ ಗಳನ್ನ ಬ್ಲಾಕ್ ಮಾಡಲಾಗಿದ್ದು, ಮತ್ತಷ್ಟು ಕೀವರ್ಡ್ ಗಳನ್ನ ಪಟ್ಟಿ ಬ್ಲಾಕ್ ಮಾಡಲಾಗುತ್ತಿದೆ.. ಇದು ಮುಂದೆ ಇಂತಹ ಆಕ್ಷೇಪಾರ್ಹ ಕಂಟೆಂಟ್ ಗಳನ್ನ ಸರ್ಜ್ ಮಾಡಿದ್ರೆ ಬಳಕೆದಾರ ಜೈಲು ಪಾಲಾದ್ರು ಅಚ್ಚರಿ ಇಲ್ಲ..






