ನವದೆಹಲಿ : ದೇಶದಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆ ಹೆಚ್ಚುತ್ತಿದೆ. ದೊಡ್ಡ ದೊಡ್ಡ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿವೆ. ಇದೀಗ ಈ ಸಾಲಿಗೆ ಪ್ರತಿಷ್ಠಿತ ಐಟಿ ಕಂಪನಿ ಇನ್ಫೋಸಿಸ್ ಸೇರಿದೆ.
ಹೌದು ಪ್ರಖ್ಯಾತ ಐಟಿ ಸಂಸ್ಥೆಯಾಗಿರುವ ಇನ್ಫೋಸಿಸ್ಸಲ್ಲೂ ಉದ್ಯೋಗ ಕಡಿತ ಪರ್ವ ಶುರುವಾಗಿದೆ. ಮಧ್ಯಮ, ಉನ್ನತ ಹುದ್ದೆಯಲ್ಲಿನ ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿ ನಿರ್ಧರಿಸಿದೆ ಎಂದು ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ.
ಶೇ 10ರಷ್ಟು ಉದ್ಯೋಗಿಗಳನ್ನು ವಜಾ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಜಾಬ್ ಲೆವೆಲ್ 6, 7, 8ರ ಶ್ರೇಣಿಯಲ್ಲಿ ಒಟ್ಟು 30,092 ಉದ್ಯೋಗಿಗಳಿದ್ದು, ಇವರಲ್ಲಿ ಒಟ್ಟು ಹೆಚ್ಚು ಕಮ್ಮಿ 2,200 ಉದ್ಯೋಗಿಗಳನ್ನು ವಜಾ ಮಾಡಲು ಕಂಪನಿ ನಿರ್ಧರಿಸಿದೆ ಎಂದು ವರದಿಯಾಗಿದೆ. 4 ಮತ್ತು 5ನೇ ಹಂತದಲ್ಲಿ 1.1 ಲಕ್ಷ ಉದ್ಯೋಗಿಗಳಿದ್ದು, ಸುಮಾರು 4ರಿಂದ 10 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಹಿರಿಯ ಉದ್ಯೋಗಿಗಳಲ್ಲಿ ಶೇ 2.5ರಷ್ಟು ಉದ್ಯೋಗಿಗಳನ್ನು ಕಡಿತ ಮಾಡಲಿದೆ ಎಂದು ಹೇಳಲಾಗುತ್ತಿದೆ. ಹೀಗೆ ಉದ್ಯೋಗ ಕಡಿತ ಪರಿಣಾಮದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ.
ಇನ್ಫೋಸಿಸ್ಸಲ್ಲಿಯೂ ಉದ್ಯೋಗ ಕಡಿತ ; ಸಾವಿರಾರು ಉದ್ಯೋಗಿಗಳ ವಜಾಕ್ಕೆ ನಿರ್ಧಾರ!
Date: