ಸೌದಿ ಅರೇಬಿಯಾ ತನ್ನ ನೀತಿಯಲ್ಲಿ ಮಹತ್ವರ ಬದಲಾವಣೆಗೆ ಮುಂದಾಗಿದ್ದು, ವಿದೇಶೀಯರಿಗೂ ತನ್ನ ದೇಶದ ಪೌರತ್ವ ನೀಡುವ ತೀರ್ಮಾನಕ್ಕೆ ಬಂದಿದೆ.
ಸೌದಿಯಲ್ಲಿ ಇದುವರೆಗೆ ವಿದೇಶಿಗರಿಗೆ ಕೇವಲ ತಾತ್ಕಾಲಿಕ ಪೌರತ್ವ ಮಾತ್ರ ನೀಡಲಾಗುತ್ತಿತ್ತು. ಇದೀಗ ಖಾಯಂ ಪೌರತ್ವ ನೀಡಲು ನಿರ್ಧರಿಸಿದೆ.
ವಿಜ್ಞಾನಿಗಳು, ಡಾಕ್ಟರ್ , ನ್ಯೂಕ್ಲಿಯರ್ – ಮರುಬಳಕೆ ಇಂಧನ ತಜ್ಞರು, ಕೃತಕ ಬುದ್ಧಿಮತ್ತೆ ಪರಿಣತರು, ಕೃಷಿ ತಜ್ಞರು ಹೀಗೆ ವಿವಿಧ ವಲಯದ ವಿಶೇಷ ಪರಿಣತರಿಗೆ ಪೌರತ್ವ ನೀಡುವ ಮೂಲಕ ಸೌದಿಯನ್ನು ಸಮೃದ್ಧಿ ಮತ್ತು ವೈವಿಧ್ಯ ದೇಶವನ್ನಾಗಿ ನಿರ್ಮಿಸಲಾಗುತ್ತದೆ ಎಂದು ಸರಕಾರದ ನಿರ್ಧಾರಗಳನ್ನು ಪ್ರಕಟಿಸುವ ವೇದಿಕೆ ಸೌದಿ ಪ್ರಾಜೆಕ್ಟ್ ಟ್ವೀಟ್ ಮಾಡಿದೆ.
ವಿವಿಧ ವಲಯಗಳಲ್ಲಿರುವ ವೃತ್ತಿಪರರು, ತಜ್ಞರಿಗೆ ಪೌರತ್ವವನ್ನು ನೀಡುವುದಾಗಿ ಸರಕಾರ ಘೋಷಿಸಿದ್ದು, ಸೌದಿ ದೇಶ ತನ್ನ ಭವಿಷ್ಯದ ಬಗ್ಗೆ ಯೋಚಿಸಿ ಆರ್ಥಿಕತೆಯನ್ನು ಬಲಗೊಳಿಸಲು ಈ ಹೆಜ್ಜೆಯನ್ನಿಟ್ಟಿದೆ.