ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳನ್ನು ಸರಕು ಸಾಗಿಸುವ ವಾಹನಗಳಲ್ಲಿ ಕರೆದೊಯ್ಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೌದು ಶಾಲಾ ಮಕ್ಕಳನ್ನು ಶಾಲೆಯ ಬಸ್ಸಿನಲ್ಲಿ ಕರೆದುಕೊಂಡು ಹೋಗದೆ ಇನ್ನಿತರ ಸರಕು ಸಾಗಣೆ ಮಾಡುವ ವಾಹನಗಳಲ್ಲಿ ಕರೆದೊಯ್ಯುತ್ತಿರುವ ದೃಶ್ಯಗಳು ದಿನನಿತ್ಯ ಕಣ್ಣಿಗೆ ಬೀಳುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಇದೀಗ ಇದಕ್ಕೆ ಪರಿಹಾರವನ್ನು ನೀಡಲು ಒಂದೊಳ್ಳೆಯ ಕ್ರಮವನ್ನು ಕೈಗೊಂಡಿದೆ.
ಹೌದು ಇನ್ನು ಮುಂದೆ ಸರಕು ಸಾಗಿಸುವ ವಾಹನಗಳಲ್ಲಿ ಮಕ್ಕಳನ್ನು ಸಾಗಿಸುವಂತಿಲ್ಲ ಹೀಗೆ ಸಾಗಿಸಿದರೆ ಆ ಶಾಲೆಯ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಆದೇಶ ಹೊರಡಿಸಿದೆ. ಮಕ್ಕಳನ್ನು ಸಾಗಿಸಲು ಸರಕು ವಾಹನಗಳನ್ನು ಬಳಸುತ್ತಿರುವ ಶಾಲೆಯವರು ಕಡ್ಡಾಯವಾಗಿ ತಮ್ಮದೇ ಶಾಲೆಯ ವಾಹನವನ್ನು ಬಳಸಬೇಕೆಂದು ಆದೇಶ ನೀಡಿದೆ. ಅಷ್ಟೇ ಅಲ್ಲದೆ ಸ್ವಂತ ವಾಹನಗಳನ್ನು ಒದಗಿಸಲು ಆಗದ ಶಾಲೆಗಳು ಕೆಎಸ್ ಆರ್ ಟಿಸಿ ಸಂಸ್ಥೆ ಒಪ್ಪಂದದ ಮೇಲೆ ಬಸ್ಸುಗಳನ್ನು ಶಾಲೆಗಳಿಗೆ ಒದಗಿಸುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇದನ್ನು ಪಾಲಿಸದೆ ಪುನಃ ಸರಕು ಸಾಗಣೆ ವಾಹನಗಳನ್ನು ಬಳಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಪಕ್ಕಾ.