ಇಂದು 7 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾನಾಡಿದ ಸಿಎಂ, ಏಳು ಮಂದಿ ಇಂದು ಸಚಿವರಾಗುತ್ತಾರೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಈ ಮೂಲಕ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ತಪ್ಪಿದ್ದು, ಇದೀಗ ಸಿಎಂ ಅವರು ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತು ತಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಶಾಸಕರು ನಿನ್ನೆಯಿಂದಲೂ ಸಿಎಂ ಮನೆಯಲ್ಲೇ ಇದ್ದರು. ಉಳಿದ ವಿಚಾರಗಳ ಬಗ್ಗೆ ಅರುಣ್ ಸಿಂಗ್ ಜತೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಮುನಿರತ್ನ, 9 ಗಂಟೆಗೆ ಬಂದು ಭೇಟಿಯಾಗುವಂತೆ ಸಿಎಂ ಸೂಚಿಸಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳನ್ನ ಭೇಟಿಯಾಗಲು ತೆರಳುತ್ತಿದ್ದೇನೆ. ಸಿಎಂ ಖಂಡಿತ ನನಗೆ ಅನ್ಯಾಯ ಮಾಡಲ್ಲ. ಪ್ರತಿ ರಾಜಕಾರಣಿ ಮಾತಾಡ್ತಾರೆ. ಆದ್ರೆ ಯಡಿಯೂರಪ್ಪನವರು ಮಾತಿನ ಮೇಲೆ ನಿಲ್ಲೋ ನಾಯಕ. ಇನ್ನು ಪಟ್ಟಿ ಅಂತಿಮ ಆಗಿಲ್ಲ ಅಂದಿದ್ದರು.
ಇತ್ತ ಸಚಿವ ಎಚ್ ನಾಗೇಶ್ ತಲೆದಂಡ ಫಿಕ್ಸ್ ಆಗಿದ್ದು, ನಾಳೆಯೊಳಗೆ ರಾಜೀನಾಮೆ ನೀಡುವಂತೆ ನಾಗೇಶ್‍ಗೆ ಡೆಡ್‍ಲೈನ್ ನೀಡಲಾಗಿದೆ ಎಂದು ವರದಿಯಾಗಿದೆ.
ಇಲ್ಲಿದೆ 7 ಮಂದಿ ನೂತನ ಸಚಿವರ ಪಟ್ಟಿ – ಮುನಿರತ್ನಗಿಲ್ಲ ಮಂತ್ರಿ ಸ್ಥಾನ..!
Date: