ಇಲ್ಲಿ ನಲ್ಲಿಯಲ್ಲಿ ಬಿಯರ್ ಸಪ್ಲೈ ಮಾಡ್ತಾರೆ..!

Date:

ವಿಶ್ವದ ಮೊಟ್ಟ ಮೊದಲ ಬಿಯರ್ ಹೊಟೇಲ್​ನ್ನು  ಅಮೆರಿಕದ ಕೊಲಂಬಸ್ ನಗರದಲ್ಲಿ  ಪ್ರಾರಂಭಿಸಲಾಗಿದೆ. ಇಲ್ಲಿನ ವಿಶೇಷತೆ ಏನೆಂದರೆ ನೀವು ಬುಕ್ ಮಾಡಿರುವ ಕೊಠಡಿಗಳ ನಲ್ಲಿಗಳಲ್ಲೂ ಕೂಡ ಬಿಯರ್ ಸಿಗಲಿದೆ. ಈ ಹೊಟೇಲ್​​ನಲ್ಲಿ 32 ರೂಮ್​​ಗಳಿದ್ದು, ಪ್ರತಿಯೊಂದು ಕೋಣೆಯಲ್ಲೂ ಬಿಯರ್ ಶವರ್ ಫ್ರಿಡ್ಜ್​ನ್ನು ಕೂಡ ಇರಿಸಲಾಗಿದೆ. ಇಲ್ಲಿ ಕೂಡ ತಣ್ಣನೆಯ ಬಿಯರ್​ನ್ನು ಪಡೆಯಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಬಿಯರ್ ಪ್ರಿಯರು ಹೆಚ್ಚಾಗಿದ್ದು, ಮದ್ಯಪಾನಿಗಳ ಕೆಲ ಕಲ್ಪನೆಯನ್ನು ಸಕಾರಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಬ್ರೂಡಾಗ್ ಸಹ ಸಂಸ್ಥಾಪಕ ಜೇಮ್ಸ್​ ವ್ಯಾಟ್​ ತಿಳಿಸಿದ್ದಾರೆ.

ಈ ಬಿಯರ್​ ಹೊಟೇಲ್​ನಲ್ಲಿ ಒಟ್ಟು 32 ಕೊಠಡಿಗಳಿದ್ದು, ಇದಲ್ಲದೆ 6 ಸಾವಿರ ಚದರ ಅಡಿಯ ಬಿಯರ್ ಹೌಸ್​ನ್ನು​ ಕೂಡ ಈ ಹೊಟೇಲ್​ನಲ್ಲಿ ನಿರ್ಮಿಸಲಾಗಿದೆ. ಇಲ್ಲಿ ನೀವು ರೂಮ್ ಬುಕ್​ ಮಾಡದೇ ಕೂಡ ಬಿಯರ್​ನ್ನು ಹೀರಬಹುದು. ಆದರೆ ಹೆಚ್ಚಿನ ಮದ್ಯದಂಗಡಿಯಲ್ಲಿ ಸಿಗುವಂತೆ ಟೇಬಲ್ ಮುಂಭಾಗದಲ್ಲಿ ಮದ್ಯಗಳು ಸಿಗುವುದಿಲ್ಲ. ಹಾಗಯೇ ಇಲ್ಲಿ ಅಂತಹ ಯಾವುದೇ ಪರಿಚಾರಕರು ಸಹ ಇರುವುದಿಲ್ಲ. ಬದಲಾಗಿ ನಿಮ್ಮ ಇಚ್ಛೆಗೆ ತಕ್ಕಂತೆ ಬಿಯರ್​ಗಳನ್ನು ನಲ್ಲಿಗಳ ಮೂಲಕ ತುಂಬಿಸಿ ಕುಡಿಯಬಹುದು.

ಇದಲ್ಲದೆ ನೀವು ರೂಮ್ ಬುಕ್ ಮಾಡಿ ಕುಡಿಯಬೇಕೆಂದರೆ ಹೊಟೇಲ್​ನ ಕೊಠಡಿಗಳಿಗೆ ನೀವು ಪ್ರವೇಶಿಸುವಂತೆ ಪ್ರತಿಯೊಂದು ಬಿಯರ್​ ನಲ್ಲಿಗಳು ಸಕ್ರೀಯಗೊಳ್ಳುತ್ತದೆ. ಪ್ರತಿ ಕೋಣೆಯಲ್ಲೂ ಬಿಯರ್​ನ್ನು ತುಂಬಿಸಿರುವ ಫ್ರಿಡ್ಜ್​ಗಳನ್ನು ಇಡಲಾಗಿದ್ದು, ಅದರಲ್ಲಿ ಬ್ರೂಡಾಗ್​ನ ಕ್ರಾಫ್ಟ್​ ಬಿಯರ್, ಕಾಲೋಚಿತ ರುಚಿಯ ಬಿಯರ್ ಮತ್ತು ಅತಿಥಿಗಳ ಮೆಚ್ಚಿನ ಪಾನೀಯಗಳನ್ನು ಇರಿಸಲಾಗುತ್ತದೆ. ಅಲ್ಲದೆ ಸ್ನಾನಗೃಹದಲ್ಲೂ ಶವರ್ ಮೂಲಕ ಬಿಯರ್​ ಒದಗಿಸುವ ಸೇವೆಯನ್ನು ನೀವು ಬ್ರೂಡಾಗ್ ಹೊಟೇಲ್​ನಲ್ಲಿ ಪಡೆಯಬಹುದು ಎಂದು ಹೊಟೇಲ್ ಮಾಲೀಕರಾದ ಜೇಮ್ಸ್ ವ್ಯಾಟ್ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...