ವಾರಣಾಸಿ : ಈರುಳ್ಳಿ ಬೆಲೆ ಸೆಂಚುರಿ ಸಿಡಿಸಿ ಮುನ್ನುಗ್ಗಿರುವುದರಿಂದ ಗ್ರಾಹಕರು ಖರೀದಿಸುವುದು ಕಡಿಮೆಯಾಗಿದೆ. ಅಲ್ಲದೆ ಗಗನಕ್ಕೇರಿದ ಬೆಲೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ.
ಈರುಳ್ಳಿಯನ್ನು ಸಾಲ ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲು ವಾರಾಣಸಿ ಜನರು ಮುಂದಾಗಿದ್ದಾರೆ. ಸಮಾಜವಾದಿ ಪಕ್ಷದ ಯುವಘಟಕದ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಸಮಾಜವಾದಿ ಪಕ್ಷದ ಕಾರ್ಯಕರ್ತರಿಂದ ನಡೆಸಲ್ಪಡುವ ಅಂಗಡಿಗಳಲ್ಲಿ ಬೆಳ್ಳಿ ವಸ್ತುಗಳು ಅಥವಾ ಆಧಾರ್ ಕಾರ್ಡ್ ಒತ್ತೆಯಾಗಿಟ್ಟುಕೊಂಡು ಈರುಳ್ಳಿಯ ಸಾಲ ನೀಡಲಾಗುತ್ತದೆ.
ಈರುಳ್ಳಿ ಬೆಲೆ ಏರಿಕೆ ವಿರುದ್ಧ ನಮ್ಮ ಪ್ರತಿಭಟನೆಯನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸಬೇಕೆಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದೇವೆ. ತರಕಾರಿಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಾವು ಆಧಾರ್ ಕಾರ್ಡ್, ಬೆಳ್ಳಿ ಆಭರಣಗಳನ್ನು ಒತ್ತೆಯಾಗಿಟ್ಟುಕೊಂಡು ಈರುಳ್ಳಿಯನ್ನು ಸಾಲ ಕೊಡುತ್ತೇವೆಂದು ಆಕ್ರೋಶ ಹೊರಹಾಕಿದ್ದಾರೆ.