ಮತದಾನದ ದಿನ ರಜೆ ಹಾಕಿ, ಆರಾಮಾಗಿ ಮನೆಯಲ್ಲಿ ಕುಳಿತುಕೊಳ್ಳುವವರೇ ಹೆಚ್ಚು. ಶೇಕಡ ನೂರಕ್ಕೆ ನೂರರಷ್ಟು ಮತದಾನ ಆಗುವುದು ಅನುಮಾನ. ಅನುಮಾನದ ಕತೆ ಬದಿಗಿರಲಿ… ಹಂಡ್ರೆಡ್ ಪರ್ಸೆಂಟ್ ವೋಟಿಂಗ್ ಆಗಲು ಸಾಧ್ಯವೇ ಇಲ್ಲ ಎಂದು ನೀವು ಹೇಳುತ್ತೀರಿ. ಆದರೆ, ಇಲ್ಲೊಂದು ಕಡೆ ಶೇ 100ಕ್ಕೆ ನೂರರಷ್ಟು ಮತದಾನ ಆಗಿದೆ.
ಇದರ ರಹಸ್ಯ ಭರತದಾಸ್ ಬಾಪು ಎನ್ನುವವರು. ವಿಶ್ವಪ್ರಸಿದ್ಧ ಗಿರ್ ಅರಣ್ಯ ಪ್ರದೇಶದೊಳಗಿನ ದುರ್ಗಮ ಸ್ಥಳವೊಂದರಲ್ಲಿ ಒಬ್ಬರೇ ಮತದಾರರಿಗೆ ಒಂದು ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ನಿನ್ನೆ ಅಲ್ಲಿ ಮತದಾನ ಆಗಿದೆ. ಪ್ರತಿ ಮತದಾನದಲ್ಲೂ ಅಲ್ಲಿ 100ಕ್ಕೆ 100 ಶೇಕಡ ಮತದಾನವಾಗುತ್ತದೆ. ಈ ಮತಗಟ್ಟೆಗೆ ಒಬ್ಬರೇ ಮತದಾರ.. ಅವರೇ ಭರತದಾಸ್ ಬಾಪು. ಇಡೀ ಮತಗಟ್ಟೆಗೆ ಒಬ್ಬರೇ ಒಬ್ಬ ಮತದಾರರು ಇರುವುದರಿಂದ
ನಾನು ಆಗಿ ಮತ ಚಲಾಯಿಸಿದ್ದೇನೆ. ಇದರಿಂದ ಇಲ್ಲಿ ಶೇ. 100ರಷ್ಟು ಮತದಾನ ದಾಖಲಾಗಿದೆ. ಇಡೀ ದೇಶದಲ್ಲಿ ಹೀಗೆಯೇ ಮತದಾನ ಆಗಬೇಕು ಎಂದು ಭರತದಾಸ್ ಹೇಳಿದ್ದಾರೆ.
ದೇಶದಲ್ಲಿ 17ನೇ ಲೋಕಸಭಾ ಚುನಾವಣೆ ನಡೆಯುತ್ತಿದೆ. ಏಪ್ರಿಲ್ 11ರಿಂದ 7 ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಈಗ 3 ಹಂತದ ಚುನಾವಣೆ ನಡೆದಿದೆ. ಏಪ್ರಿಲ್ 18 ಮತ್ತು ಏಪ್ರಿಲ್ 23ರಂದು ನಮ್ಮ ಕರ್ನಾಟಕದ 28 ಕ್ಷೇತ್ರಗಳಿಗೆ 14 ಮತ್ತು 14 ಕ್ಷೇತ್ರಗಳಿಗೆ 25 ಹಂತದಲ್ಲಿ ಚುನಾವಣೆ ನಡೆದಿದೆ. ದೇಶದಲ್ಲಿ ಮೇ 19ರವರೆಗೆಬೇರೆ ಬೇರೆ ಹಂತಗಳಲ್ಲಿ ಉಳಿದ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೇ.23ಕ್ಕೆ ಫಲಿತಾಂಶ ಬರಲಿದೆ.
ಇಲ್ಲಿ ಶೇ.100ರಷ್ಟು ಮತದಾನ ಆಗಲು ಆ ಒಬ್ಬ ವ್ಯಕ್ತಿ ಕಾರಣ..!
Date: