ಇವನೊಬ್ಬ ಚಿಲ್ಲರೆ ಕಳ್ಳ: ಮುಚ್ಚಿದ ಅಂಗಡಿ ಹೊಡೆದು ನಾಣ್ಯ ಹೊತ್ತೊಯ್ದ!

tnit editors
0 Min Read

ಇವನೊಬ್ಬ ಚಿಲ್ಲರೆ ಕಳ್ಳ: ಮುಚ್ಚಿದ ಅಂಗಡಿ ಹೊಡೆದು ನಾಣ್ಯ ಹೊತ್ತೊಯ್ದ!

ಮಂಗಳೂರು; ಇಲ್ಲೊಬ್ಬ ಕಳ್ಳನೋರ್ವ ಅಂಗಡಿ ಶೆಟರ್ ಹೊಡೆದು ಗಲ್ಲ ಪೆಟ್ಟಿಗೆಯಲ್ಲಿ ಇದ್ದ ಚಿಲ್ಲರೆ ಕದ್ದು ಎಸ್ಕೇಪ್ ಆಗಿದ್ದಾನೆ. ಘಟನೆ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿರುವ ಲಕ್ಷ್ಮಿ ನಿವಾಸ ಹೋಟೆಲ್ನಲ್ಲಿ ನಡೆದಿದೆ.
ಗಲ್ಲಾಪಟ್ಟಿಗೆಯಲ್ಲಿ ನಾಣ್ಯಗಳನ್ನು ಹಾಕಲು ಬಟ್ಟಲುಗಳಿರುತ್ತದೆ. ಕಳ್ಳ ಅವೇ ಬಟ್ಟಲುಗಳಿಂದ ನಾಣ್ಯಗಳನ್ನು ತೆಗೆದು ಒಂದು ಪಾಲಿಥೀನ್ ಬ್ಯಾಗ್ಗೆ ಸುರುವಿಕೊಳ್ಳುತ್ತಿದ್ದಾನೆ. ದೇವರ ಸ್ಟ್ಯಾಂಡ್ನಲ್ಲಿಟ್ಟಿದ್ದ ಹುಂಡಿಯನ್ನೂ ಕಳ್ಳ ಕದ್ದೊಯ್ದಿದ್ದಾನಂತೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

Share This Article