ನೀವು ಎಂಥೆಂಥಾ ಪ್ರೇಮಿಗಳನ್ನು ನೋಡಿರ್ತೀರಿ.. ಆದ್ರೆ, ಇವರಂಥಾ ಖತರ್ನಾಕ್ ಪ್ರೇಮಿಗಳನ್ನು ಮಾತ್ರ ನೋಡಿರೋಕೆ ಚಾನ್ಸೇ ಇಲ್ಲ. ಇವರು ಪ್ರೀತಿಸಿದ್ರು,…ಮದ್ವೆ ಆಗ್ಬೇಕೆಂಬ ಆಸೆಯನ್ನೂ ಕಟ್ಟಿಕೊಂಡ್ರು.. ಕಷ್ಟಪಟ್ಟು ದುಡಿದು ತಮ್ಮ ಕಾಲ ಮೇಲೆ ತಾವು ನಿಂತು ಮದುವೆ ಆಗುವ ವಯಸ್ಸೂ ಅವರದ್ದಾಗಿತ್ತು…ಆದ್ರೆ, ಅವರು ದಿಢೀರ್ ಶ್ರೀಮಂತರಾಗಲು ಕಂಡು ಕೊಂಡಿದ್ದು ಮಾತ್ರ ಕಳ್ಳತನದ ಹಾದಿ.
ದಿಢೀರ್ ಹಣಗಳಿಸಿ ಶ್ರೀಮಂತರಾಗಿ, ಆರಾಮಾಗಿ ಜೀವನ ಕಳೆಯಲು ಪ್ರೇಮಿಗಳು ಸರಗಳ್ಳತನಕ್ಕೆ ಇಳಿದು, ಇದೀಗ ಪೊಲೀಸ ಅತಿಥಿಯಾಗಿದ್ದಾರೆ.
ಹರೀಶ್, ಭೂಮಿಕಾ ಬಂಧಿತ ಪ್ರೇಮಿಗಳು. ಇವರಿಬ್ಬರು ಅಕ್ಕ-ಪಕ್ಕದ ಮನೆಯವರಾಗಿದ್ದ ಇವರ ನಡುವೆ ಪ್ರೇಮಾಂಕುರವಾಗಿದೆ. ಮದುವೆಯಾಗಿ ಸುಖವಾಗಿ ಕಾಲಕಳೆಯ ಬೇಕೆಂದು ಕಳ್ಳತನದ ದಾರಿಯನ್ನು ಹಿಡಿದಿದ್ದಾರೆ.

ಹರೀಶ್ ಮೊದಲಿನಿಂದಲೂ ಕಳ್ಳತನ ಮಾಡುತ್ತಿದ್ದು, ಆತನಿಗೆ ಭೂಮಿಕಾ ಸಾಥ್ ನೀಡಲಾರಂಭಿಸಿದ್ದಾಳೆ. ಕಾಲೇಜು ಯುವತಿಯರನ್ನು ಟಾರ್ಗೆಟ್ ಮಾಡಿ ಈ ಜೋಡಿ ನಗರದ ನಾನಾ ಕಡೆಗಳಲ್ಲಿ ಸರಗಳ್ಳತನ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಖತರ್ನಾಕ್ ಪ್ರೇಮಿಗಳು ನಾಗರಭಾವಿಯಲ್ಲಿ ಚಂದ್ರಲೇಔಟ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇಂಥಾ ಖತರ್ನಾಕ್ ಪ್ರೇಮಿಗಳನ್ನು ನೀವೆಲ್ಲಾದರೂ ನೋಡಿದ್ದೀರಾ?






