ಇವರು ಧೋನಿ ನಾಯಕತ್ವದಲ್ಲಿ ಹೀರೋ, ಕೊಹ್ಲಿ ನಾಯಕತ್ವದಲ್ಲಿ ಝೀರೋ ಆದವರು..!

Date:

ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಕಂಡ‌ ಅದ್ಭುತ ನಾಯಕರು, ವಿಶ್ವ ಕ್ರಿಕೆಟ್ ಜಗತ್ತಿನ ಸ್ಟಾರ್ ಆಟಗಾರರು. ಮಾಹಿ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. 2007 ರ ಟಿ20 ವರ್ಲ್ಡ್ ಕಪ್ ಮತ್ತು 2011ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್ ಅನ್ನು ಭಾರತ ಗೆದ್ದಿದ್ದು ಇದೇ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ. ವಿಶ್ವಕಪ್ ಮಾತ್ರವಲ್ಲದೆ ಎಲ್ಲಾ ಮೂರು ಐಸಿಸಿ ಟ್ರೋಫಿ ಗೆದ್ದ ನಾಯಕ ಎಂಬ ಹಿರಿಮೆ‌ ರಾಂಚಿ ರಾಜ ಮಹೇಂದ್ರ ಸಿಂಗ್ ಧೋನಿಯದ್ದು.


ಇನ್ನು ವಿರಾಟ್ ಕೊಹ್ಲಿ ಸದ್ಯ ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಮತ್ತು ಟೆಸ್ಟ್ ಮುಖಭಂಗ ಬಿಟ್ಟರೆ ಮತ್ತೆ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಟಿ20 ಸರಣಿಯಲ್ಲಿ ಎಲ್ಲಾ ಐದು ಪಂದ್ಯಗಳನ್ನು ಗೆದ್ದು ಬೀಗಿತ್ತು. ಧೋನಿ ನಂತರ ಟೀಮ್ ಇಂಡಿಯಾದ ಚುಕ್ಕಾಣಿಯನ್ನು ಹಿಡಿದ ವಿರಾಟ್ ಕೊಹ್ಲಿ ಧೋನಿಗಿಂಥಾ ಭಿನ್ನ..!‌ ಧೋನಿ ತಾಳ್ಮೆಯ ಸಕಾರಮೂರ್ತಿ….ವಿರಾಟ್ ಗೆ ಅಗ್ರೆಸ್ಸಿವ್ ನೆಸ್ಸೇ ಪ್ಲಸ್ ಪಾಯಿಂಟ್..!


ಅದೇನೇ ಇರಲಿ..ಧೋನಿ ಮತ್ತು ಕೊಹ್ಲಿ ಇಡೀ‌ ವಿಶ್ವಕ್ರಿಕೆಟ್ ಮೆಚ್ಚುವ ನಾಯಕರು…‌ಇಬ್ಬರೂ ಭಾರತ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.
ಈ ಇಬ್ಬರ ನಾಯಕತ್ವದ ತಂಡದಲ್ಲಿ ಅನೇಕ ಸ್ಟಾರ್ ಆಟಗಾರರು ಆಡಿದ್ದಾರೆ, ಆಡುತ್ತಿದ್ದಾರೆ.ಆದರೆ, ಆ ಮೂವರು ಆಟಗಾರರು ಧೋನಿ‌ ನಾಯಕತ್ವದಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಹೀರೋ ಆದವರು..ವಿರಾಟ್ ‌ಕೊಹ್ಲಿ ನಾಯಕತ್ವದಲ್ಲಿ ಝೀರೋ ಆಗಿ ತಂಡದಿಂದಲೇ ದೂರ ಸರಿದಿದ್ದಾರೆ! ಧೋನಿ ನಾಯಕತ್ವದಲ್ಲಿ‌ ಮಿಂಚಿ, ಕೊಹ್ಲಿ ನಾಯಕತ್ವದಲ್ಲಿ ಮರೆಯಾದ ಆ ಸ್ಟಾರ್ ಆಟಗಾರರು ಯಾರು ಗೊತ್ತಾ?
ಆ ಬಗ್ಗೆ ಹೇಳ್ತೀವಿ….ಮುಂದೆ ಓದಿ….

ವರ್ಲ್ಡ್ ಕಪ್ ಹೀರೋ ಯುವಿ : ಯುವರಾಜ್ ಸಿಂಗ್….ಭಾರತ ಕ್ರಿಕೆಟ್ ಮಾತ್ರವಲ್ಲ ಇಡೀ ವಿಶ್ವಕ್ರಿಕೆಟ್ ಕಂಡ‌ ಅದ್ಭುತ ಆಟಗಾರ…ಸರ್ವ ಶ್ರೇಷ್ಠ ಆಲ್ ರೌಂಡರ್…ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿಯೂ ಯುವಿಗೆ‌ ಯುವಿಯೇ ಸಾಟಿ…ಯುವರಾಜ್ ಎಂಬ ಈ ದಿಗ್ಗಜ ಕ್ರಿಕೆಟಿಗ ಎಲ್ಲರಿಗೂ ಸ್ಫೂರ್ತಿ.
ಮಹೀಂದ್ರ ಸಿಂಗ್ ಧೋನಿ ಭಾರತ ತಂಡವನ್ನು ‌ಕೂಡಿಕೊಳ್ಳುವ ಮೊದಲೇ ಭಾರತ ತಂಡದಲ್ಲಿದ್ದರು ಯುವಿ. ನಾನಾ ವರ್ಷಗಳ ಕಾಲ ಭಾರತ ತಂಡದ ಮಧ್ಯಮ‌ ಕ್ರಮಾಂಕದ ಆಧಾರಸ್ತಂಭವಾಗಿದ್ದರು. 2007 ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲಲು ಭಾರತ ತಂಡದ‌‌ ಪ್ರಮುಖ‌ ಶಕ್ತಿ ಇದೇ ಯುವಿ. ಕ್ಯಾನ್ಸರ್ ನಡುವೆಯೂ 2011ರ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠನಾಗಿ ಹೊರಹೊಮ್ಮಿದ್ದ ಯುವರಾಜ್ ಆಟ ಎಂದಿಗೂ ಸ್ಮರಣೀಯ.
ಅದ್ಭುತ ಫಾರ್ಮ್ ನಲ್ಲಿದ್ದಾಗಲೇ ಯುವರಾಜ್ ಸಿಂಗ್ ಕ್ಯಾನ್ಸರ್ ಗೆ ತುತ್ತಾದರು. ವರ್ಲ್ಡ್ ಕಪ್ ಗೆಲ್ಲಿಸಿಕೊಟ್ಟು ಚಿಕಿತ್ಸೆಗೆ ಒಳಗಾಗಿ 2012 ರಲ್ಲಿ‌ ತಂಡಕ್ಕೆ ವಾಪಸ್ಸಾದರು. 2012-13 ರಲ್ಲಿ ಕೇವಲ 25 ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಯುವರಾಜ್ ಸಿಂಗ್ 2014ರಲ್ಲಿ ಆಡಿದ್ದು ಕೇವಲ 6 ಮ್ಯಾಚ್ ಗಳನ್ನು ಮಾತ್ರ ಆಡಿದರು.‌ಗಳಿಸಿದ್ದು 20ರ ಸರಾಸರಿಯಲ್ಲಿ ಕೇವಲ‌ 100ರನ್ ಗಳನ್ನಷ್ಟೇ..!
2016ರಲ್ಲಿ ತಂಡಕ್ಕೆ ಕಮ್ ಬ್ಯಾಕ್ ಆದ ಯುವಿ‌15 ಪಂದ್ಯಗಳಲ್ಲಿ ಗಳಿಸಿದ್ದು‌ 166 ರನ್‌ ಮಾತ್ರ. ಹೀಗೆ ವರ್ಲ್ಡ್ ಕಪ್ ಬಳಿಕ ಫಾರ್ಮ್ ಕಳೆದುಕೊಂಡರೂ ಒಟ್ಟಾರೆ ಧೋನಿ ನಾಯಕತ್ವದಲ್ಲಿ 34.26 ರ ಸರಾಸರಿಯಲ್ಲಿ 5002 ರನ್ ಮಾಡಿದ್ದರು.
2017ರಲ್ಲಿ ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಚುಕ್ಕಾಣಿ ಹಿಡಿದರು. ಆಗ ಮತ್ತೆ ತಂಡ ಕೂಡಿಕೊಂಡ ಯುವಿ‌ 14 ಪಂದ್ಯಗಳನ್ನು ಆಡಿದರು. 35 ರ ಸರಾಸರಿಯಲ್ಲಿ 415 ರನ್ ಮಾಡಿದರಾದರೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ ತಂಡದಿಂದ ಹೊರಗುಳಿಯಬೇಕಾಯಿತು. ಈಗ ಅವರು ನಿವೃತ್ತಿ‌ಕೂಡ ಘೋಷಿಸಿದ್ದಾರೆ.

ಟಿ20 ಸ್ಪೆಷಲಿಸ್ಟ್ ರೈನಾ : ಸೀಮಿತ ಓವರ್ ಗಳ ಅದರಲ್ಲೂ ಮುಖ್ಯವಾಗಿ ಟಿ20 ಸ್ಪೆಷಲಿಸ್ಟ್ ಸುರೇಶ್ ರೈನಾ ಕೂಡ ಧೋನಿ ನಾಯಕತ್ವದಲ್ಲಿ ಹೀರೋ ಆಗಿ , ಕೊಹ್ಲಿ ನಾಯಕತ್ವದಲ್ಲಿ ಝೀರೋ‌ ಆದವರು. ಅತ್ಯುತ್ತಮ ಫೀಲ್ಡರ್ ಹಾಗೂ ಅರೆಕಾಲಿಕ ಬೌಲರ್ ಆಗಿಯೂ ತಂಡದಲ್ಲಿ ಮಿಂಚಿದರು.
2014 ರ ಬಳಿಕ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರೂ ಧೋನಿ‌ ನೇತೃತ್ವದ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದರು. ಆದರೆ ವಿರಾಟ್ ನಾಯಕರಾದ ಮೇಲೆ‌ ಅವಕಾಶಗಳು ಕಡಿಮೆ‌ ಆಗುತ್ತಾ ಬಂದಿವೆ.‌ಈಗಂತೂ ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಸ್ಪಿನ್ನರ್ ಅಶ್ವಿನ್ : ಇನ್ನು ಕೇರಮ್ ಸ್ಪೆಷಲಿಸ್ಟ್ ಅಶ್ವಿನ್ ಧೋನಿ ನಾಯಕತ್ವದಲ್ಲಿ ಮೂರೂ‌ ಮಾದರಿಯಲ್ಲಿ ತಂಡದಲ್ಲಿದ್ದರು.‌‌ಅಗತ್ಯವಿದ್ದಾಗ ಬ್ಯಾಟಿಂಗಲ್ಲೂ ಮಿಂಚಿದ್ದರು.‌ಸದ್ಯ ವಿರಾಟ್ ಕೊಹ್ಲಿ ‌ನಾಯಕತ್ವದಲ್ಲಿ ಕೇವಲ ಟೆಸ್ಟ್ ತಂಡದಲ್ಲಿ ಮಾತ್ರ ಸ್ಥಾನ ಪಡೆದಿದ್ದಾರೆ.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...