ಇವರು ಮಾಡಿದ ಈ ಕೆಲಸ ನೋಡಿ ಶಾಕ್ ಆದ್ರು ಮೇಘನಾ..!

Date:

ಚಿತ್ರನಟಿ ಮೇಘನಾ ಗಾವ್ಕರ್ ಸಿನಿಮಾ ನೋಡಲು ಹೋದಾಗ ಆದ ವಿಭಿನ್ನ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಒಂದು ದಿನ ಸಂಜೆ, ನಾನು ನಿರ್ದಿಷ್ಟ ಪಾರ್ಕಿಂಗ್ ಪ್ರದೇಶದಲ್ಲಿ ನನ್ನ ಕಾರನ್ನು ನಿಲ್ಲಿಸಿ ಸಮೀಪವಿರುವ ಚಿತ್ರಮಂದಿರದಲ್ಲಿ ಚಲನಚಿತ್ರವನ್ನು ವೀಕ್ಷಿಸಲು ಹೋಗಿದ್ದೆ. ನಾನು ಹಿಂತಿರುಗಿದಾಗ, ರಾತ್ರಿ ತುಂಬಾ ತಡವಾಗಿತ್ತು. ಆದರೆ ನಾನು ಕಾರ್ ಪಾರ್ಕ್ ಮೊದಲು ಪಾರ್ಕಿಂಗ್ ಶುಲ್ಕವನ್ನು ಪಾವತಿಸಿದ್ದರೂ ಸಹ ಅಲ್ಲಿನ ಸೆಕ್ಯೂರಿಟಿ ಇನ್ನೂ ನನ್ನ ಕಾರಿನ ಸಮೀಪ ಕಾಯುತ್ತಾ ನಿಂತಿದ್ದ.

ಅದನ್ನು ಕಂಡು ಯಾಕಿರಬಹುದು ಎಂದು ನಾನು ನನ್ನ ಕಾರ್ ಬಳಿ ಹೋಗಿ ವಿಚಾರಿಸಿದಾಗ, ನಾನು ಕಾರಿನ ವಿಂಡೋವನ್ನು ಅರ್ಧ ತೆರೆದು ಹೋಗಿದ್ದೆ ಎಂದು ಗೊತ್ತಾಗಿತ್ತು. ಇದನ್ನು ಗಮನಿಸಿದ ಆ ಪಾರ್ಕಿಂಗ್ ಸಿಬ್ಬಂದಿ ನನ್ನ ಕಾರ್ ಬಳಿ ಕೆಲವರು ಸಂಶಯಾಸ್ಪದವಾಗಿ ತಿರುಗಾಡುತ್ತಿರುವುದನ್ನು ಕಂಡು ಅವರು ನನ್ನ ಬರುವಿಕೆಯನ್ನೇ ಕಾಯುತ್ತಿದ್ದರು ಎಂದು ತಿಳಿಯಿತು.

ನಾನು ಸಿನಿಮಾ ನೋಡಿ ಬರುವವರೆಗೆ ಅಂದರೆ 3-4 ಗಂಟೆಗಳ ಕಾಲ ಆ ಸಿಬ್ಬಂದಿ ನನ್ನ ಕಾರಿನ ಬಳಿಯೆ ನಿಂತಿದ್ದು ತಿಳಿದ ಬಳಿಕ ನನಗೆ ಆಶ್ಚರ್ಯದ ಜೊತೆಗೆ ಅವರ ಮೇಲೆ ಗೌರವವೂ ಹೆಚ್ಚಾಯ್ತು. ನಂತರ ಅವರು ಮಾಡಿದ ಸಹಾಯಕ್ಕೆ ಸ್ವಲ್ಪ ಹಣವನ್ನು ನೀಡಲು ಹೋದೆ. ಆದರೆ ಅವರು ಹಣವನ್ನು ತೆಗೆದುಕೊಳ್ಳಲು ನಯವಾಗಿ ನಿರಾಕರಿಸಿದರು.

ಇಂದಿಗೂ ಇವರ ಮಾನವೀಯತೆ ಮತ್ತು ಒಳ್ಳೆಯತನ ನನಗೆ ಸದಾ ನೆನಪಾಗುತ್ತಾ ಇರುತ್ತದೆ ಇಂತವರೂ ನಮ್ಮ ನಡುವೆ ಇರುವುದು ನಮಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ ಈಗಾಗಲೇ ಈ ಘಟನೆ ನಡೆದು ಮೂರು ವರ್ಷಗಳಾಗಿದೆ ಆದರೂ ನನಗೆ ಇನ್ನು ಇದನ್ನು ಮರೆಯಲು ಆಗುತ್ತಿಲ್ಲ.

ನಾನು ಈಗಲೂ ಅಲ್ಲಿಗೆ ಹೋದಾಗ ಪ್ರತಿ ಬಾರಿ ನಾನು ಅವರಿಗೆ ಧನ್ಯವಾದ ಹೇಳಿ ಕಾರನ್ನು ಅದೇ ಸ್ಥಳದಲ್ಲಿ ನಿಲ್ಲಿಸಿ ಕಾರಿನ ಕಿಟಕಿಗಳನ್ನು ಸರಿಯಾಗಿ ಮುಚ್ಚಿದ್ದೇನೆಯೆ ಎಂದು ಪರೀಕ್ಷಿಸಿ ನಂತರ ಸಿನಿಮಾ ನೋಡಲು ಹೊರಡುತ್ತೇನೆ.

ಯಾವುದೇ ಅಪೇಕ್ಷೆ ಇಲ್ಲದೆ ಇವರು ಮಾಡಿದ ಸಹಾಯ ನನಗೆ ಇಂದಿಗೂ ನೆನಪಾಗುತ್ತದೆ ಅವರ ಒಳ್ಳೆಯ ತನ ನೆನಪಾಗುತ್ತದೆ. ನಾನು ಕೆಲವೊಮ್ಮೆ ಅಲ್ಲಿಗೆ ಹೋದಾಗ ಅವರೊಟ್ಟಿಗೆ ಒಂದು ಕಪ್ ಚಹಾ ಕುಡಿದು ಬರುತ್ತೇನೆ.
ಕಳೆದ ವಾರ ನಾನು ಅಲ್ಲಿಗೆ ಹೋದಾಗ ಅವರೊಂದಿಗೆ ಸೆಲ್ಫಿಯೊಂದನ್ನು ಕ್ಲಿಕ್ ಮಾಡಿ ಪೋಸ್ಟ್ ಮಾಡಿದೆ. ಬಹುಶಃ ನಾನು ಇದುವರೆಗೂ ಒಂದು ಸೆಲ್ಫಿಗಾಗಿ ನಾನಾಗೆ ಕೇಳಿ ತೆಗೆದುಕೊಂಡ ಮೊದಲ ವ್ಯಕ್ತಿ ಇವರೆ ಎಂದು ಮೇಘನಾ ಗಾವ್ಕರ್ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಜಾಗತಿಕವಾಗಿ...

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...