ಇವರು ಸಂಗೀತಲೋಕದ ಮಾಂತ್ರಿಕ….ಇವರ ಸಾಧನೆ ಸ್ಫೂರ್ತಿಸೆಲೆ..!

Date:

ಡಾ. ಪಂಡಿತ್ ರಾಜೀವ್ ತಾರಾನಾಥ್ ಸಂಗೀತ ಲೋಕದ ಧ್ರುವತಾರೆ. ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲಿ ಅಗ್ರಗಣ್ಯರು. ಅತ್ಯಂತ ಸರಳತೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾದವರು. ನಮ್ಮ ಕರ್ನಾಟಕದವರೇ, ದೇಶ-ವಿದೇಶದಲ್ಲಿ ದೊಡ್ಡ ಹೆಸರು ಮಾಡಿರುವವರು.

ರಾಜೀವ್ ತಾರಾನಾಥರು ತಮ್ಮ ಪ್ರಾರಂಭಿಕ ಪಾಠಗಳನ್ನು ತಮ್ಮ ತಂದೆ ಪಂಡಿತ ತಾರಾನಾಥರಿಂದ ಕಲಿತವರು. ಕೇವಲ 9 ವರ್ಷದವರಿದ್ದಾಗ ಪ್ರಥಮ ಸಂಗೀತ ಕಛೇರಿ ನಡೆಸಿದರು. 20ರ ತಾರುಣ್ಯದಲ್ಲಿ ಆಕಾಶವಾಣಿಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು. ಸಾಹಿತ್ಯದಲ್ಲಿ ಪಿಎಚ್ ಡಿ ಪದವಿ ಪಡೆದವರಾದರೂ, ತಮಗಿದ್ದ ಇಂಗ್ಲಿಷ್ ಪ್ರಾಧ್ಯಾಪಕ ವೃತ್ತಿಯನ್ನು ತ್ಯಜಿಸಿ, ಸಂಗೀತವನ್ನು ಅಭ್ಯಸಿಸಲು ಕೋಲ್ಕತ್ತಾಗೆ ತೆರಳಿ ಅಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನ್ ರ ಶಿಷ್ಯರಾದರು.
ನೋಡಿ. 2009ರ ವರ್ಷದಲ್ಲಿ ಅಲಿ ಅಕ್ಬರ್ ಖಾನ್ ರು ನಿಧನರಾಗುವವರೆಗೆ ರಾಜೀವ್ ತಾರಾನಾಥರು ಅವರ ಶಿಷ್ಯರಾಗಿಯೇ ಮುಂದುವರೆದಿದ್ದರು. ಅಕ್ಬರ್ ಅಲಿ ಖಾನ್ ಅವರಲ್ಲದೇ ,ಪಂಡಿತ್ ರವಿಶಂಕರ್, ಶ್ರೀಮತಿ ಅನ್ನಪೂರ್ಣಾದೇವಿ, ಪಂಡಿತ್ ನಿಖಿಲ್ ಬ್ಯಾನರ್ಜಿ ಮತ್ತು ಉಸ್ತಾದ್ ಆಶಿಶ್ ಖಾನ್ ರ ಮಾರ್ಗದರ್ಶನವನ್ನು ಸಹ ರಾಜೀವ್ ತಾರಾನಾಥರು ತಮ್ಮದಾಗಿಸಿಕೊಂಡವರು.


ಇನ್ನು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಲಾವಿಭಾಗದ ಮುಖ್ಯಸ್ಥರಾಗಿ ೧೯೯೫ರಿಂದ ೨೦೦೫ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ರಾಜೀವ್ ತಾರಾನಾಥರು, ಇದೀಗ ಮೈಸೂರಿನ ನಿವಾಸಿಯಾಗಿದ್ದು ತಮ್ಮ ಶಿಷ್ಯರಿಗೆ ಸಂಗೀತವನ್ನು ಧಾರೆ ಎರೆಯುತ್ತಿದ್ದಾರೆ. ವಿಶ್ವದೆಲ್ಲೆಡೆ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ದಾರೆ. ದೇಶ-ವಿದೇಶಗಳಲ್ಲೆಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹಲವೊಂದು ಪ್ರಖ್ಯಾತ ಚಲನಚಿತ್ರಗಳಿಗೂ ಸಂಗೀತ ನೀಡಿದ್ದಾರೆ. ಕನ್ನಡದ ಸಂಸ್ಕಾರ, ಪಲ್ಲವಿ, ಅನುರೂಪ, ಶೃಂಗಾರ ಮಾಸ, ಪೇಪರ್ ಬೋಟ್, ಮಲಯಾಳಂನ ಕಾಂಚನ ಸೀತಾ ಮತ್ತು ಕಟವ್ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
ಇನ್ನು, ರಾಜೀವ್ ತಾರಾನಾಥರು, ಸಂಗೀತ ಕ್ಷೇತ್ರದಲ್ಲಿ ಅಷ್ಟೇ ಅಲ್ಲ, ಅವರ ಸಾಧನೆ, ಸಾಹಿತ್ಯ ಲೋಕದಲ್ಲಿ ಹಲವಾರು ಪುಸಕ್ತಗಳನ್ನು ಹೊರತಂದಿದ್ದಾರೆ. ‘ಮನನ ಮೆಡಿಟೇಶನ್’: ಬಿಹಾಗ್ ಮತ್ತು ಭೈರವಿ ರಾಗಗಳು; ‘ಹಾರ್ಮನಿ’ ಸಿಂಧು ಭೈರವಿ ರಾಗಮಾಲಿಕೆ’, ‘ಕಾಫಿ ರಾಗ’ದ ಹಲವು ಮುಖಗಳು. ರಸರಂಗ್, ‘ ರಿಫ್ಲೆಕ್ಷನ್ಸ್ ಅರೌಂಡ್ ನೂನ್’ ತೋಡಿ ಮತ್ತು ಕಾಫಿ ರಾಗಗಳು; ಡೇ ಬ್ರೇಕ್ ಅಂಡ್ ಎ ಕ್ಯಾಂಡಲ್ ಎಂಡ್ ಇಷ್ಟೇ ಅಲ್ಲ, ರಾಜೀವ್ ತಾರಾನಾಥರು ಬರೆದಿರುವ ಬರಹಗಳು ನೂರಾರು.
ಸಂಗೀತ ದಿಗ್ಗಜ ರಾಜೀವ್ ತಾರಾನಾಥ್ ಅವರಿಗೆ ಹುಡುಕಿಕೊಂಡ ಬಂದ ಪ್ರಶಸ್ತಿಗಳು ಒಂದೆರಡಲ್ಲ ಹಲವಾರು. ಅಖಿಲ ಭಾರತ ಸಂಗೀತ ನಾಟಕ ಅಕಾಡೆಮಿ ಗೌರವ, ಟಿ.ಚೌಡಯ್ಯ ಪ್ರಶಸ್ತಿ, ಕರ್ನಾಟಕ ರಾಜ್ಯದ ಹಲವಾರು ಪ್ರಶಸ್ತಿ ಗೌರವಗಳು ಹೀಗೆ ಅನೇಕ ಗೌರವಗಳು ರಾಜೀವ್ ತಾರಾನಾಥರನ್ನು ಅರಸಿಬಂದಿವೆ. “ರಾಷ್ಟ್ರೀಯ ಸಮ್ಮಾನ” ಸಂಗೀತ ನಾಟಕ ಆಕಾಡೆಮಿ ಗೌರವ ಲಭಿಸಿದೆ. ಈ ಬಾರಿ ಪದ್ನಶ್ರೀ, ಮತ್ತೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡುವ ನಾಡೋಜ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಸಂಗೀತ ಮಾಂತ್ರಿಕ ಡಾ. ಪಂಡಿತ್ ರಾಜೀವ್ ತಾರಾನಾಥ್ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಪರಿಮಿತ. ಗಳಿಸಿರುವ ಗೌರವ, ಪ್ರಶಸ್ತಿ-ಪುರಸ್ಕಾರ ಹಲವಾರು. ಈ ಸಂಗೀತ ದಿಗ್ಗಜ ಇಂದಿನ ಯುವ ಸಂಗೀತ ಕ್ಷೇತ್ರದ ಕಲಿಗಳಿಗೆ ಸ್ಫೂರ್ತಿಯ ಸೆಲೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....