ಇವರೇ ನೋಡಿ ರಾಜ್ಯದಲ್ಲಿ ಮೊದಲ ಕೊರೋನಾ ಲಸಿಕೆ ಪಡೆದವರು

Date:

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕೋವಿಡ್ ಲಸಿಕೆಯನ್ನು ಮೊದಲು ರಾಜ್ಯದಲ್ಲಿ ಪಡೆದವರು ಯಾರು ಎಂಬ ಕುತೂಹಲ ನಿಮ್ಮಲ್ಲೂ ಇರಬಹುದು. ಹೌದು, ರಾಜ್ಯದಲ್ಲಿ ಈ ಸಂಜೀವಿನಿಯನ್ನು ಮೊದಲು ಪಡೆಯವರು ಆರೋಗ್ಯ ಇಲಾಖೆಯ ಇಬ್ಬರು ಡಿ ಗ್ರೂಪ್ ನೌಕರರು.

ಕೋವಿಡ್‌ ಲಸಿಕೆ ಅಭಿಯಾನಕ್ಕೆ ರಾಜ್ಯದಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಶನಿವಾರ ಚಾಲನೆ ನೀಡಿದ್ದು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‌ವೈ ಹಾಗೂ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಸಮ್ಮುಖದಲ್ಲಿ ಮೊದಲ ಕೋವಿಡ್ ಲಸಿಕೆಯನ್ನು ನೀಡಲಾಯಿತು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಾರ್ಡ್ ಅಟೆಂಡೆಂಟ್ ಆಗಿರುವ ನಾಗರತ್ನ ಎಂಬುವವರು ಮೊದಲು ಕೋವಿಡ್ ವಾಕ್ಸಿನನ್ನು ಪಡೆದುಕೊಂಡರು. ಇವರು ಕುರುಬರ ಕನೇನಹಳ್ಳಿ ನಿವಾಸಿಯಾಗಿದ್ದಾರೆ. ವಾಕ್ಸಿನ್ ಪಡೆದುಕೊಳ್ಳುವ ಮೊದಲು ಅವರಿಗೆ ಸಿಎಂ ಬಿವೈಎಸ್‌ ಬೆನ್ನು ತಟ್ಟಿ ಧೈರ್ಯ ತುಂಬಿದರು.

ಮೊದಲ ಕೋವಿಡ್ ವಾಕ್ಸಿನ್ ಪಡೆದುಕೊಂಡ ಅವರನ್ನು ಅರ್ಧ ಗಂಟೆಗಳ ಕಾಲ ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ. ಆದರೆ ಅವರ ಆರೋಗ್ಯದಲ್ಲಿ ಯಾವುದೇ ಏರುಪೇರುಗಳು ಕಂಡುಬಂದಿಲ್ಲ. ಇನ್ನು 28 ದಿನಗಳ ಬಳಿಕ ಅವರಿಗೆ ಎರಡನೇ ಡೋಸ್ ನೀಡಲಾಗುತ್ತದೆ.

ಇದೇ ಸಂದರ್ಭದಲ್ಲಿ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿರುವ ಡಿ. ಗ್ರೂಪ್ ನೌಕರ ಚಂದ್ರಶೇಖರ್‌ ರಾವ್ ಎಂಬುವವರಿಗೆ ಮೊದಲ ಲಸಿಕೆ ನೀಡಲಾಯಿತು. ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಗೌರವಿಸಲಾಯಿತು. ಲಸಿಕೆ ಪಡೆದುಕೊಂಡ ಬಳಿಕ ಮಾತನಾಡಿದ ಚಂದ್ರಶೇಖರ್‌, ಮೊದಲು ಲಸಿಕೆ ಪಡೆದುಕೊಂಡಿರುವುದಕ್ಕೆ ಹೆಮ್ಮೆ ಅನ್ನಿಸುತ್ತಿದೆ ಎಂದರು.

ಅಲ್ಲದೆ ನನ್ನ ಆರೋಗ್ಯದಲ್ಲಿ ಯಾವುದೇ ಏರುಪೇರು ಕಾಣಿಕೊಂಡಿಲ್ಲ, ನನಗೂ ಈ ಹಿಂದೆ ಕೊರೊನಾ ಸೋಂಕು ಬಂದಿತ್ತು. ನನ್ನಿಂದ ಬೇರೆಯವರಿಗೆ ಕೋವಿಡ್ ಹರಡಬಾರದು ಎಂಬ ಉದ್ದೇಶದಿಂದ ಮೊದಲು ಲಸಿಕೆಯನ್ನು ಪಡೆದುಕೊಂಡೆ ಎಂದು ತಿಳಿಸಿದರು.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...