ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಅವರಿಗೆ ಕಂಕಣ ಬಲ ಕೂಡಿ ಬಂದಿದೆ. ಇವರು ಕೈ ಹಿಡಿಯಲಿರುವ ಹುಡುಗಿಯ ಹೆಸರು ಅಪರ್ಣಾ ಕೃಷ್ಣನ್. ಹೌದು ಅಪರ್ಣಾ ಕೃಷ್ಣನ್ ಎಂಬುವವರ ಜೊತೆ ರೋಹನ್ ಮೂರ್ತಿ ಅವರು ಡಿಸೆಂಬರ್ 2 ರಂದು ಸಪ್ತಪದಿ ತುಳಿಯಲಿದ್ದಾರೆ.
ಮೂಲತಃ ಕೇರಳದ ಕೊಚ್ಚಿ ಮೂಲದವರಾಗಿರುವ ಅಪರ್ಣಾ ಕೃಷ್ಣನ್ ಅವರು ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕೆ ಆರ್ ಕೃಷ್ಣನ್ ಮತ್ತು ಎಸ್ಬಿಐ ಬ್ಯಾಂಕ್ನ ನಿವೃತ್ತ ಉದ್ಯೋಗಿ ಸಾವಿತ್ರಿ ದಂಪತಿಗಳ ಪುತ್ರಿ.. ಲಂಡನ್ ನಲ್ಲಿ ವ್ಯಾಸಂಗ ಮಾಡಿರುವ ಅಪರ್ಣಾ ಕೃಷ್ಣನ್ ಅವರು ಅರ್ಥಶಾಸ್ತ್ರ ಮತ್ತು ರಾಜ್ಯ ಶಾಸ್ತ್ರದಲ್ಲಿ ಪದವಿಯನ್ನು ಪಡೆದಿದ್ದಾರೆ ಅಷ್ಟೆ ಅಲ್ಲದೆ ಇವರು ಅತ್ಯುತ್ತಮ ಯೋಗ ಪಟು ಕೂಡ ಹೌದು. ಕಳೆದ ಮೂರು ವರ್ಷಗಳಿಂದ ಪರಸ್ಪರ ಸ್ನೇಹಿತರಾಗಿರುವ ಇಬ್ಬರು ಸಹ ಮುಂದಿನ ತಿಂಗಳು ಸಪ್ತಪದಿ ತುಳಿಯಲಿದ್ದು ವೈವಾಹಿಕ ಜೀವನ ಆರಂಭಿಸಲಿದ್ದಾರೆ.