ಇವಿಎಂ ಹ್ಯಾಕ್ ಮಾಡಿ ಕೋಳಿವಾಡರನ್ನು ಸೋಲಿಸಲಾಯಿತಂತೆ!

Date:

ಉಪ ಚುನಾವಣೆಯಲ್ಲಿ ತನ್ನ ಸೋಲಿಗೆ ಇ ವಿ ಎಂ ಹ್ಯಾಕ್ ಕಾರಣ ಎಂದು ರಾಣೆಬೆನ್ನೂರು ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸ್ಪೀಕರ್ ಕೆ ಬಿ ಕೋಳಿವಾಡ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇ ವಿ ಎಂ ಹ್ಯಾಕ್ ಮಾಡುವ ಮೂಲಕ ಏಕಚಕ್ರಾಧಿಪತ್ಯ ಸ್ಥಾಪನೆ ಮಾಡಲು ಹೊರಟಿದ್ದಾರೆ. ಅನರ್ಹರೆಲ್ಲರೂ ಇ ವಿ ಎಂ ಹ್ಯಾಕ್ ಮಾಡಿ ಗೆದ್ದಿರುವುದು. ಬಿಜೆಪಿ ಇ ವಿ ಎಂ ಹ್ಯಾಕ್ ಮಾಡಿಯೇ ಗೆಲ್ಲುತ್ತಿರುವುದು ಎಂದು ಆರೋಪಿಸಿದರು.
ಉಪ ಚುನಾವಣೆ ಬಳಿಕ ಸಿದ್ದರಾಮಯ್ಯ ಮನೆಗೆ ಹೋದಾಗ ಇಂಜಿನಿಯರ್ ಕರೆಸಿ ಇ ವಿ ಎಂ ಚೆಕ್ ಮಾಡಿಸಿದರು. ಸಿದ್ದರಾಮಯ್ಯ ೭ ಕಾಂಗ್ರೆಸ್ ಮತ್ತು ೩ ಬಿಜೆಪಿಗೆ ಬರಲಿ ಎಂದು ಬಟನ್ ಒತ್ತಿದರು. ಆಗ ಅಲ್ಲಿ ಅದೇ ಫಲಿತಾಂಶ ಬಂದಿತು. ಆಗ ಬಿಜೆಪಿ ಇ ವಿ ಎಂ ಹ್ಯಾಕ್ ಮಾಡಿ ಗೆದ್ದಿದ್ದಾರೆಂದು ಸಿದ್ದರಾಮಯ್ಯನವರೇ ಶಂಕಿಸಿದರು ಎಂದು ಹೇಳಿದರು.
ಏಕ ಚಕ್ರಾಧಿಪತ್ಯ ಸ್ಥಾಪಿಸಬೇಕು ಅಂತಾ ಮೋದಿ ಮತ್ತು ಅಮಿತ್ ಶಾ ಈ ರೀತಿ ಇವಿಎಂ ಹ್ಯಾಕ್ ಮಾಡಿ ಗೆಲ್ಲುತ್ತಿದ್ದಾರೆ. ದೇಶಾದ್ಯಂತ ಇವಿಎಂ ವ್ಯವಸ್ಥೆ ಕೊನೆಯಾಗಬೇಕು. ಬ್ಯಾಲೆಡ್ ಪೇಪರ್ ಜಾರಿಗೆ ಬರಬೇಕು. ಇವಿಎಂ ಹ್ಯಾಕ್ ಆಗಿದೆ ಅಂತಾ ಇಡಿ ಕಾಂಗ್ರೆಸ್ ಪಕ್ಷವೇ ಹೇಳ್ತಿದೆ. ಇದರ ವಿರುದ್ಧ ಜನಾಂದೋಲನ ಆರಂಭಿಸುತ್ತೇವೆ ಎಂದು ತಿಳಿಸಿದರು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...