ಇವು ಮುಟ್ಟಿನ ನೋವು ಹೆಚ್ಚಿಸುತ್ತವೆ…ಇವುಗಳಿಂದ ದೂರವೇ ಇದ್ದು ಬಿಡಿ..!

Date:

ಮುಟ್ಟಿನ ಸಮಯದಲ್ಲಿ ತುಂಬಾ ಹೊಟ್ಟೆ ನೋವು ಕಾಡುತ್ತದೆ. ಈ ವೇಳೆ ಕೆಲವರು ಆಹಾರದ ಬಗ್ಗೆ ಗಮನ ಹರಿಸದೆ ಮಾಮೂಲಿಯಂತೆ ತಿನ್ನುತ್ತಾರೆ. ಇದು ಒಳ್ಳೆಯದಲ್ಲ.‌ಕೆಲವು ಪಾನೀಯ‌ ಮತ್ತು ತಿನಿಸುಗಳು ಹೊಟ್ಟೆ ನೋವನ್ನು ಹೆಚ್ಚಿಸುತ್ತವೆ. ಆದ್ದರಿಂದ ಮುಟ್ಟಿನ ವೇಳೆ ಇವುಗಳಿಂದ ದೂರ ಇರಿ.

1)ಕಾಫಿ ಸಹವಾಸ ಬೇಡ : ಕಾಫಿ ಹೊಟ್ಟೆ ನೋವನ್ನು ಹೆಚ್ಚಿಸುತ್ತದೆ ‌. ಆದ್ದರಿಂದ ಮುಟ್ಟಿನ ವೇಳೆ ಕಾಫಿ ಕುಡಿಯದೇ ಇದ್ದರೇ ಒಳ್ಳೆಯದು. ತೀರಾ ಅಭ್ಯಾಸ ಇದ್ದರೆ ಕೇವಲ 1 ಲೋಟ ಮಾತ್ರ ಕುಡಿಯಿರಿ. ಜಾಸ್ತಿ ಕುಡಿಯಲು ಹೋಗಬೇಡಿ.

2) ಸಕ್ಕರೆ ಮತ್ತು ಸಿಹಿ ತಿನಿಸುಗಳನ್ನು ಮುಟ್ಟಿನ ವೇಳೆ ಜಾಸ್ತಿ ತಿನ್ನ ಬೇಡಿ. ಇದರಿಂದ ಹೊಟ್ಟೆ ನೋವು ಜಾಸ್ತಿ ಆಗುತ್ತದೆ.
3)ಹಾಲಿನ ಉತ್ಪನ್ನ : ಹಾಲಿನ ಉತ್ಪನ್ನಗಳು ಕಿಬ್ಬೊಟ್ಟೆ ಸೆಳೆತವನ್ನು ಹೆಚ್ಚು ಮಾಡುವುದರಿಂದ ಮುಟ್ಟಿನ ವೇಳೆ ಹಾಲಿನ ಉತ್ಪನ್ನಗಳನ್ನು ಜಾಸ್ತಿ ತಿನ್ನಬೇಡಿ.

4) ಅದೇ ರೀತಿಯಾಗಿ ಅಧಿಕ ಕೊಬ್ಬಿನಾಂಶ ಇರುವ ಆಹಾರ ಮುಟ್ಟಿನ ಸಂದರ್ಭದಲ್ಲಿ ಬೇಡ. ಅದರಿಂದ ಹೊಟ್ಟೆ ನೋವು ಹೆಚ್ಚಾಗುತ್ತದೆ.
5) ಇವೆಲ್ಲದರ ಜೊತೆಗೆ ಹೆಚ್ಚು ಉಪ್ಪಿನಾಂಶ ಇರುವ ಆಹಾರ ಸೇವನೆ ಹೊಟ್ಟೆ ನೋವನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ಇದರಿಂದ ದೂರ ಇರಿ.
ಮುಟ್ಟಿನ ಸಂದರ್ಭದಲ್ಲಿ ಕೆಲವರಿಗಂತೂ ತುಂಬಾ ಹೊಟ್ಟೆ ನೋವು ಕಾಡುತ್ತದೆ. ಹಾಗೆ ನೋವು ಬಾಧಿಸುವವರಂತೂ ಇವುಗಳಿಂದ ದೂರ ಇದ್ದರೆ ಭಾರಿ ಒಳ್ಳೆಯದು.

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...