ಇಶಾನ್ ಕಿಶಾನ್ ಮೊದಲು ಬ್ಯಾಟಿಂಗ್ ಗೆ ಇಳಿದ್ದಕ್ಕೆ ಕಾರಣ ತಿಳಿಸಿದ ಸೂರ್ಯಕುಮಾರ್

Date:

ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್ ವಿರುದ್ಧ 9 ವಿಕೆಟ್‌ಗಳಿಂದ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌, ಮುಂದಿನ ಪಂದ್ಯದಲ್ಲಿ ನಾವು ಕಮ್‌ಬ್ಯಾಕ್‌ ಮಾಡುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ನಾಯಕ ರೋಹಿತ್‌ ಶರ್ಮಾ ಜೊತೆಗೆ ಸೂರ್ಯಕುಮಾರ್‌ ಸ್ಥಿರ ಪ್ರದರ್ಶನ ತೋರುತ್ತಿರುವ ಆಟಗಾರರಾಗಿದ್ದಾರೆ. ಆದರೆ, ತಂಡದ ಇನ್ನುಳಿದ ಆಟಗಾರರ ಸಹಕಾರದ ಕೊರತೆಯಿಂದ ಇವರಿಬ್ಬರ ಪ್ರದರ್ಶನ ತಂಡದ ಗೆಲುವಿಗೆ ನೆರವಾಗುತ್ತಿಲ್ಲ ಎಂದರೆ ತಪ್ಪಾಗಲಾರದು.

“ಎಲ್ಲವೂ ಚೆನ್ನಾಗಿ ಹೋಗುತ್ತಿದೆ ಹಾಗೂ ಎಲ್ಲರ ಮನಸ್ಸು ಅತ್ಯುತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಪೂರ್ಯತಯಾರಿ ಅತ್ಯುತ್ತಮವಾಗಿಯೇ ನಡೆಯುತ್ತಿದೆ ಆದರೆ, ನಾವು ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸುವ ಅಗತ್ಯವಿದೆ. ತಂಡದಲ್ಲಿ ಎಲ್ಲರ ನಡುವೆ ಅತ್ಯುತ್ತಮ ಹೊಂದಾಣಿಕೆ ಇದೆ. ಎಲ್ಲರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದಾರೆ,” ಎಂದು ಸೂರ್ಯಕುಮಾರ್ ಯಾದವ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

“ನಮಗೆ ಬೇಕಾಗಿರುವುದು ಒಂದೇ ಒಂದು ಪಂದ್ಯ ಎಂದು ನಾನು ಭಾವಿಸುತ್ತೇನೆ. ಮುಂಬೈನಲ್ಲಿ ಆಡುತ್ತಿದ್ದೇವೆ ಎಂಬ ಭಾವನೆಯೊಂದಿಗೆ ನಾವು ಎಲ್ಲ ಸ್ಥಳಗಳಲ್ಲಿ ಆಡಬೇಕು. ಒಂದು ಸ್ಥಳದಲ್ಲಿ ನಮ್ಮ ಆಟವನ್ನು ಮುಗಿಸಿದ್ದೇವೆ ಹಾಗೂ ಮುಂದಿನ ಸ್ಥಳದಲ್ಲಿ ಆಡಲು ಸಜ್ಜಾಗುತ್ತಿದ್ದೇವೆ. ನಾವು ಟೂರ್ನಿಯಲ್ಲಿ ಕಠಿಣವಾಗಿ ಕಮ್‌ಬ್ಯಾಕ್‌ ಮಾಡುತ್ತೇವೆ,” ಎಂದು ಸೂರ್ಯ ಭರವಸೆ ನೀಡಿದರು.

ಮುಂಬೈ ಇಂಡಿಯನ್ಸ್ ಆಲ್‌ರೌಂಡರ್‌ಗಳಾದ ಹಾರ್ದಿಕ್‌ ಪಂಡ್ಯ, ಕೃಣಾಲ್‌ ಪಾಂಡ್ಯ ಹಾಗೂ ಕೈರೊನ್‌ ಪೊಲಾರ್ಡ್ ವೈಫಲ್ಯ ಅನುಭವಿಸಿದ್ದಾರೆ. ಈ ಒಂದೇ ಒಂದು ಕಾರಣದಿಂದಲೇ ಮುಂಬೈ ಪಂದ್ಯದಲ್ಲಿ 170 ರಿಂದ 180 ರನ್‌ ಗಳಿಸಲು ಸಾಧ್ಯವಾಗಿತ್ತಿಲ್ಲ. ಈ ಮೂವರು ಆಲ್‌ರೌಂಡರ್‌ಗಳನ್ನು ಸಮರ್ಥಿಸಿಕೊಂಡ ಸೂರ್ಯಕುಮಾರ್‌, ಇವರು ನೆಟ್ಸ್‌ನಲ್ಲಿ ಕಠಿಣ ಪರಿಶ್ರಮ ಪಡುತ್ತಿದ್ದಾರೆಂದು ಹೇಳಿದ್ದಾರೆ.

ನಿಮಗಿಂತಲೂ ಮೊದಲೇ ಇಶಾನ್‌ ಕಿಶನ್‌ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ” ಇದು ಟೀಮ್‌ ಮ್ಯಾನೇಜ್‌ಮೆಂಟ್‌ ಕರೆಯಾಗಿದೆ. ಎಡಗೈ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ ವಿಕೆಟ್‌ ಒಪ್ಪಿಸಿದರೆ, ಇಶಾನ್‌ ಕಿಶನ್‌ ಮೂರನೇ ಕ್ರಮಾಂಕದಲ್ಲಿ ಆಡಬೇಕೆಂದು ನಾವು ಮೊದಲೇ ನಿರ್ಧರಿಸಿದ್ದೆವು. ಈ ಹಿಂದೆಯೂ ನಾವಿಬ್ಬರೂ ಈ ರೀತಿ ಆಡಿದ್ದೇವೆ. ಹಾಗಾಗಿ ಇದರಿಂದ ನಮಗೆ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ಆದರೆ, ನಮ್ಮ ಯೋಜನೆಗಳು ನಮಗೆ ಸ್ಪಷ್ಟವಾಗಿದೆ,” ಎಂದು ಮುಂಬೈ ಬ್ಯಾಟ್ಸ್‌ಮನ್ ತಿಳಿಸಿದರು.

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...