ರಾಜ್ಯದಲ್ಲಿಯೇ ಕೆಲವು ದಿನಗಳ ಹಿಂದೆಯಿಂದ ಈರುಳ್ಳಿಯ ಬೆಲೆ ಹೆಚ್ಚಾಗಿದ್ದು ಅದರಿಂದ ರೈತರು ಬೆಳೆಗೆ ತಕ್ಕಂತೆ ಬೆಲೆಯನ್ನು ಪಡೆದುಕೊಳ್ಳಲಿಲ್ಲ ಮಧ್ಯವರ್ತಿಗಳಿಂದ ಹೆಚ್ಚಿನ ರೀತಿಯಲ್ಲಿ ಈರುಳ್ಳಿಯ ಬೆಲೆ ಏರಿಕೆಯಾಗಿ ಜನರಿಗೂ ಕೂಡ ಈರುಳ್ಳಿ ಸಿಗದಂತಾಗಿತ್ತು . ಇದ್ದಕ್ಕಿದಂತೆ ಈರುಳ್ಳಿ ಬೆಲೆ ಗಗನಕ್ಕೇರಿ ಜನರು ಈರುಳ್ಳಿಯನ್ನು ಖರೀದಿಸಲು ಕಷ್ಟವಾಗುವಂತೆ ಆಗಿತ್ತು ಆದರೆ ಇದೀಗ ಈಜಿಪ್ಟ್ ಈರುಳ್ಳಿ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಬಂದಿದೆ. ಈ ಈರುಳ್ಳಿ ಬೆಲೆ ಒಂದು ಕೆ.ಜಿ.ಗೆ ಸುಮಾರು 140 ರಿಂದ 150 ರೂಪಾಯಿ ಇದೆ ಎನ್ನಲಾಗಿದೆ.
ಇನ್ನು ಈಜಿಪ್ಟ್ ಈರುಳ್ಳಿ ನೋಡುವುದಕ್ಕೂ ದೊಡ್ಡದಾಗಿರುವುದರಿಂದ ಒಂದು ಕೆ.ಜಿ.ಗೆ ಎರಡು ಮೂರು ಮಾತ್ರ ತೂಕಕ್ಕೆ ಬರುತ್ತಿವೆ. ಇನ್ನು ಜನ ಈರುಳ್ಳಿಯನ್ನು ಹೇಗೆ ಬೆಳೆಸಬೇಕು ಹಾಗೂ ರಾಜ್ಯದ ಈರುಳ್ಳಿಗೆ ಬೇರೆ ದೇಶದ ಈರುಳ್ಳಿಗೂ ವ್ಯತ್ಯಾಸವೇನಿದೆ ಎಂದು ಜನರಲ್ಲಿ ಗೊಂದಲ ವ್ಯಕ್ತವಾಗಿದೆ ಇನ್ನು ಇದು ಹೈಬ್ರಿಡ್ ಈರುಳ್ಳಿ ಎಂದು ಹೇಳಲಾಗ್ತಿದೆ .