ರಾಜ್ಯದಲ್ಲಿ ಎಲ್ಲ ಪ್ರದೇಶದಲ್ಲು ನಿರುದ್ಯೋಗ ಸಮಸ್ಯೆ ಎಂಬುದು ಇದ್ದೆ ಇರುತ್ತದೆ ಅದನ್ನು ಕಡಿಮೆ ಮಾಡಲು ಹೊರಟಿರುವ ಸರ್ಕಾರ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NEKRTC)ಯಲ್ಲಿ 1619 ಚಾಲಕ ಮತ್ತು ಚಾಲಕ ಕಂ-ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 6 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಫೆಬ್ರವರಿ 5 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. 857 ಚಾಲಕರು, 621 ಚಾಲಕ ಕಂ-ನಿರ್ವಾಹಕ ಹುದ್ದೆಗಳು, 68 ಹಿಂಬಾಕಿ ಚಾಲಕರ ಹುದ್ದೆಗಳಿಗೆ ಮತ್ತು 73 ಹಿಂಬಾಕಿ ಚಾಲಕ ಕಂ-ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ 1295 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಎಸ್.ಎಸ್.ಎಲ್.ಸಿ.ಯಲ್ಲಿ ಪಾಸಾದ ಭಾರಿ ಸರಕು ಸಾಗಾಣಿಕೆ ವಾಹನ ಚಾಲನಾ ಪರವಾನಿಗೆ ಹೊಂದಿ ಕನಿಷ್ಠ ಎರಡು ವರ್ಷ ಅನುಭವ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ ನಿರುದ್ಯೋಗ ಸಮಸ್ಯೆ ಕಮ್ಮಿ ಆಗಬೇಕು ಎಂಬ ಕಾರಣಕ್ಕೆ ಉದ್ದೆಯನ್ನು ರೂಪಿಸವುದಾಗಿ ಸರ್ಕಾರ ತಿಳಿಸಿದೆ.