ಮೈಸೂರಿನಲ್ಲಿ ಮಾತನಾಡಿದ ಅವರು ಸಿಎಂ ಈಶ್ವರಪ್ಪ ಅವರು ಆರೋಪ ಮಾಡಿದಂತೆ ನಾನು ಆ ರೀತಿ ಹೇಳಿಕೆ ನೀಡಿರಲು ಸಾಧ್ಯವೇ ಇಲ್ಲ, ಒಂದು ವೇಳೆ ನಾನು ಹಾಗೆ ಹೇಳಿದ್ದರೆ ಅವರು ಯಾಕೆ ನನ್ನನ್ನು ಪ್ರಶ್ನೆ ಮಾಡಲಿಲ್ಲ..? ಪ್ರತಿಪಕ್ಷದಲ್ಲಿ ಯಾಕೆ ಸುಮ್ಮನೆ ಕುಳಿತಿದ್ದರು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈಶ್ವರಪ್ಪ ಅವರು ಕುಂದಗೋಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವಾದಾಗ ಸಿದ್ದರಾಮಯ್ಯಗೆ ಕ್ರಮ ಕೈಗೊಳ್ಳುವಂತೆ ಪ್ರಶ್ನೆ ಮಾಡಿದ್ದೆ.ಆದರೆ ಸಿದ್ದರಾಮಯ್ಯ ಏನ್ ಮಾಡಬೇಕು ಅಂದಿದ್ದ. ನಿನ್ನ ಮೊಮ್ಮಗಳ ಮೇಲೆ ಅತ್ಯಾಚಾರೆ ಆದ್ರೆ ಏನ್ಮಾಡ್ತೀಯಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆ.ಎಸ್. ಈಶ್ವರಪ್ಪ ವಾಗ್ಧಾಳಿ ನಡೆಸಿದ್ದರು.