ಈ ಯುವ ಜೋಡಿಯನ್ನು ..ಇವರಿಬ್ಬರ ಪ್ರೀತಿ ಅಮರವಾದುದು. ಇವರ ಹೆಸರು ಪಿ. ಜಯಪ್ರಕಾಶ್ ಮತ್ತು ಸುನೀತಾ ನಾಯರ್ ಎಂದು. ಇತ್ತೀಚೆಗೆ ಇವರು ಜಯ್ – ಸುನೀತಾ ಎಂದೇ ಎಲ್ಲೆಡೆ ಖ್ಯಾತಿ. ಸಾಗರಾದಚೆಗೂ ಇವರ ಪ್ರೀತಿ ಆದರ್ಶ ವೆಂದು ಅಪಾರ ಜನ ಮೆಚ್ಚುಗೆ ಪಡೆದಿದೆ. ಪ್ರೀತಿ ಮಾಡಿದರೆ ಇವರಂತೆ ಇರಬೇಕು ಎನ್ನುವಷ್ಟು ಮಟ್ಟಿಗೆ ಸ್ಫೂರ್ತಿಯಾಗಿದೆ.
ಜಯಪ್ರಕಾಶ್ ಮತ್ತು ಸುನೀತಾ ನಾಯರ್ ಮೂಲತಃ ನಮ್ಮ ಬೆಂಗಳೂರಿನವರು. 2004ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಜಯ್ ಮತ್ತು ಸುನೀತಾ ಎನ್ನುವವರು ಒಂದೇ ಕ್ಲಾಸಿನಲ್ಲಿ ಓದುತ್ತಿರುತ್ತಾರೆ. ಜಯ್ ಅವರಿಗೆ ಮುದ್ದು ಮುಖದ ಸುನೀತಾ ಅವರ ಮೇಲೆ ಪ್ರೀತಿ ಹುಟ್ಟುತ್ತೆ. ಆದರೆ, ಜಯ್ ಅವರಿಗೆ ಧೈರ್ಯವಿಲ್ಲದೆ ಇದನ್ನು ಸುನಿತಾ ಮುಂದೆ ಹೇಳಲು ಅವರಿಗೆ ಸಾಧ್ಯವಾಗುವುದಿಲ್ಲ. ಅಂದರೆ, ಪರಿಸ್ಥಿತಿ ಹೇಗಿರುತ್ತೆ ನೋಡಿ.
ಜಯ್ ಮತ್ತು ಸುನೀತಾ ದ್ವಿತೀಯ ಪಿಯುಸಿ ಮುಗಿಯುತ್ತಿದ್ದ ಹಾಗೆ ಅವರು ಬೇರೆ ಬೇರೆ ಆಗುತ್ತಾರೆ. ಅಂದರೆ ಇವರು ಬೇರೆ ಬೇರೆ ಆಗಿ ಸುಮಾರು ಎರಡೂವರೆ ವರ್ಷಗಳ ಆಗುತ್ತದೆ. ಅನಂತರದಲ್ಲಿ ಜಯ್ ಹುಟ್ಟಿದ ಹಬ್ಬಕ್ಕೆ ಸುನೀತಾ ಅವರ ಕಡೆಯಿಂದ ಫೋನ್ ಬರುತ್ತೆ. ಜಯ್ ಅವರಿಗೆ ಸುನಿತಾ ಹುಟ್ಟು ಹಬ್ಬದ ಶುಭಾಶಯಗಳನ್ನ ಕೋರುತ್ತಾರೆ. ಇನ್ನೇನು ಬೇಕು ಜಯ್ ಅವರಿಗೆ ಹೇಳಿ. ಅವರಿಗೆ ಆ ಸಮಯದಲ್ಲಿ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ತುಂಬಾ ಸಂತೋಷ ಗೊಳ್ಳುತ್ತಾರೆ.
ಆದರೆ, ದುರಾದೃಷ್ಟವೆಂದರೆ 2014ರಲ್ಲಿ ಈ ಸಮಯದಲ್ಲಿ ಸುನೀತಾ ಅವರಿಗೆ ಅಪಘಾತವಾಗಿ ಮುಖ ವಿರೂಪವಾಗಿರುತ್ತೆ. ಅಂದರೆ ಸುನೀತಾ ಮುಖ ಎಷ್ಟು ವಿರೂಪವಾಗಿತ್ತು ಎಂದ್ರೆ ಅವರ ಧ್ವನಿಯಿಂದ ಮಾತ್ರ ಸುನಿತಾ ಅವರನ್ನು ಜಯ್ ಅವರು ಗುರುತಿಸಬೇಕಾಗಿ ಬರುತ್ತೆ. ಏಕೆಂದರೆ ಅಪಘಾತವಾದಾಗ ಸುನೀತಾ ಅವರ ಮುಖ ಗುರುತಿಸಲಾಗದಷ್ಟು ವಿರೂಪವಾಗಿ ಹೋಗಿರುತ್ತೆ. ಆದರೆ, ನೋಡಿ, ಸುನೀತಾ ಮುಖವನ್ನು ನೋಡಿದ ಜಯ್ ಅವರಿಗೆ ಪ್ರೀತಿಯೇನು ಕಡಿಮೆಯಾಗುವುದಿಲ್ಲ.
ಆಗ ಜಯ್ ಅವರು ದೊಡ್ಡ ಕೆಲಸದಲ್ಲಿ ಇರುತ್ತಾರೆ. ಕೈ ತುಂಬಾ ಸಂಬಳ, ಮತ್ತೆ ಮನೆಯಲ್ಲೂ ಅತ್ಯಂತ ಸ್ಥಿತಿವಂತರೂ, ಆದರೂ ವಿರೂಪಳಾದ ಗೆಳತಿ ಸುನೀತಾ ಅವರಿಗೆ ತನ್ನ ಮನಸಿನಲ್ಲಿದ್ದ ಪ್ರೀತಿಯನ್ನು ತಿಳಿಸುತ್ತಾರೆ. ಅದಕ್ಕೆ ಒಲ್ಲೆ ಎನ್ನದ ಸುನಿತಾ, 2014ರಲ್ಲಿ ಗೆಳೆಯ ಜಯ್ ಅವರ ದೊಡ್ಡ ಗುಣವನ್ನು ಒಪ್ಪಿಕೊಂಡು ಇಬ್ಬರು ಮದುವೆಯಾಗುತ್ತಾರೆ. ಈಗ ಜಯ್ ಮತ್ತು ಸುನೀತಾ ದಂಪತಿ ಸುಖವಾಗಿ ಸಂಸಾರ ಮಾಡುತ್ತಿದೆ. ಈ ದಂಪತಿಗೆ ಮತ್ತೊಂದು ಖುಷಿ ಎಂದರೆ ಇಬ್ಬರು ಮುದ್ದು ಮುದ್ದಾದ ಮಕ್ಕಳಿವೆ.
ನೋಡಿ, ನಿಮಗೂ ತಿಳಿದಿರುವಂತೆ ಮದುವೆಯಾದ ಮರುದಿನವೇ ಡೈವೋರ್ಸ್ ಕೇಳುವ ಇಂದಿನ ದಿನಮಾನಗಳಲ್ಲಿ ಜಯ್ ಮತ್ತು ಸುನೀತಾ ಅವರದು ಆಲ್ವಾ ನಿಜವಾದ ಪ್ರೀತಿ ಅಂದ್ರೆ..ಬೇಡದ ಕಾರಣಗಳಿಗೆ ಬೇರೆಯಾಗುವೆ ಎಷ್ಟೋ ಜೋಡಿಗಳಿಗೆ ನಿಜವಾಗಲು ಇವರ ಜೈ ರವರ ಟ್ರೂ ಲವ್ ಸ್ಪೂರ್ತಿ ಅಲ್ಲವೇ. ನಾವು ಕೂಡ ಆ ಜೋಡಿಗೆ ಒಳ್ಳೆಯದಾಗಲಿ ಹೇಳುವ.ಅಲ್ಲವೇ..?
ಈ ಅಪರೂಪದ ಲವ್ಸ್ಟೋರಿಯನ್ನು ಮಿಸ್ ಮಾಡ್ದೇ ಓದಿ
Date: