ಈ ಆಸ್ಪತ್ರೆಯಲ್ಲಿ 5 ರೂಪಾಯಿ ಸಾಕು : ಕೊವಿಡ್ ರೋಗಿಯ ಮಾತು

0
42

ದಕ್ಷಿಣ ಬೆಂಗಳೂರಿನ ನಿವಾಸಿ ಅರವಿಂದ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಒಂದೊಳ್ಳೆ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅರವಿಂದ್ ಅವರಿಗೆ ಕೆಲ ದಿನಗಳ ಹಿಂದೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಸಿಟಿ ಸ್ಕ್ಯಾನ್ ಮಾಡಿಸುವ ಅಗತ್ಯತೆ ಎದುರಾದ್ದರಿಂದ ಸಿಟಿ ಸ್ಕ್ಯಾನ್ ಮಾಡುವ ಹಲವಾರು ಕೇಂದ್ರಗಳಿಗೆ ಅರವಿಂದ್ ಅವರು ಭೇಟಿ ನೀಡಿದ್ದಾರೆ. ಆದರೆ ಎಲ್ಲಾ ಕೇಂದ್ರಗಳಲ್ಲಿಯೂ ಸಿಟಿ ಸ್ಕ್ಯಾನ್ ಮಾಡಿ ಕೊಡಲು 6000, 7000 ಹಾಗೂ 8000 ರೂಪಾಯಿಗಳನ್ನು ಶುಲ್ಕವಾಗಿ ತೆಗೆದುಕೊಳ್ಳಲಾಗುತ್ತಿದೆ.

 

 

ಅಷ್ಟೇ ಅಲ್ಲದೆ ಅರವಿಂದ್ ಅವರಿಗೆ ಸಿಟಿಸ್ಕ್ಯಾನ್ ವರದಿಯನ್ನು ನೀಡಲು 2 ಗಂಟೆಗಳ ಕಾಲ ಆಗುತ್ತದೆ ಎಂದು ಈ ಸಿಟಿ ಸ್ಕ್ಯಾನ್ ಕೇಂದ್ರಗಳಲ್ಲಿ ಹೇಳಲಾಗಿದೆ. ಆದರೆ ಅರವಿಂದ್ ಅವರಿಗೆ ಅಷ್ಟು ಹೊತ್ತು ಕಾಯುವ ಸಮಯ ಇಲ್ಲದೇ ಇದ್ದ ಕಾರಣ ಆ ಕೇಂದ್ರಗಳಲ್ಲಿ ಸಿಟಿಸ್ಕ್ಯಾನ್ ಮಾಡಿಸದೆ ಬೇರೆ ಆಯ್ಕೆಯ ಮೊರೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅರವಿಂದ್ ಅವರ ಸ್ನೇಹಿತರೊಬ್ಬರು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಟಿ ಸ್ಕ್ಯಾನ್ ಮಾಡಲಾಗುತ್ತಿದೆ ಒಂದೊಮ್ಮೆ ಪ್ರಯತ್ನಿಸು ಎಂದು ಸಲಹೆಯನ್ನು ನೀಡಿದ್ದಾರೆ.

 

 

 

ಸ್ನೇಹಿತನ ಸಲಹೆ ಮೇರೆಗೆ ಸಂಜಯ್ ಗಾಂಧಿ ಆಸ್ಪತ್ರೆಗೆ ಅರವಿಂದ್ ಭೇಟಿ ನೀಡಿದ್ದಾರೆ ಆಶ್ಚರ್ಯವೇನೆಂದರೆ ಈ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ಸ್ವಚ್ಚಂದವಾದ ಸಲಕರಣೆ ಹಾಗೂ ವಾತಾವರಣ ಇರುವುದು. ಸರಕಾರಿ ಆಸ್ಪತ್ರೆಯೊಂದು ಇಷ್ಟು ಸ್ವಚ್ಛವಾಗಿ ಇರುವುದನ್ನು ಕಂಡು ಅರವಿಂದ್ ಅವರಿಗೆ ನಿಜವಾಗಿಯೂ ಆಶ್ಚರ್ಯವಾಯಿತಂತೆ. ಅಷ್ಟು ಮಾತ್ರವಲ್ಲದೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕೇವಲ 5 ರೂಪಾಯಿಗೆ ಒಪಿಡಿ ಕಾರ್ಡನ್ನು ಪಡೆದು ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬಹುದಾಗಿದೆ.

 

 

ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿ ಸಂಪೂರ್ಣವಾಗಿ ವರದಿಯನ್ನು ಕೈಗೆ ಪಡೆಯುವಷ್ಟರಲ್ಲಿ ಆಗುವ ಮೊತ್ತ ಕೇವಲ 155 ( ಒಪಿಡಿ 5 + ವರದಿ ಶುಲ್ಕ 150) ರೂಪಾಯಿ. ಹೌದು ಕೇವಲ 155 ರೂಪಾಯಿಗಳಲ್ಲಿ ಅದುವೆ ಅರ್ಧ ಗಂಟೆಯಲ್ಲಿಯೇ ಅರವಿಂದ್ ಅವರು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ತಮ್ಮ ಸಿಟಿಸ್ಕ್ಯಾನ್ ವರದಿಯನ್ನು ಪಡೆದುಕೊಂಡಿದ್ದಾರೆ. ಕೊರೊನಾ ರೋಗಿಗಳ ಬಳಿ ಸಿಟಿ ಸ್ಕ್ಯಾನ್ ವರದಿಗಾಗಿ ಕೆಲ ಕೇಂದ್ರಗಳು ಸಾವಿರಾರು ರೂಪಾಯಿಗಳನ್ನು ವಸೂಲಿ ಮಾಡುತ್ತಿವೆ ಅದರ ಬದಲು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕೇವಲ 155 ರೂಪಾಯಿಗಳಲ್ಲಿ ವರದಿಯನ್ನು ಪಡೆದುಕೊಳ್ಳಬಹುದು ಎಂದು ಅರವಿಂದ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ. ಕೊರೊನಾ ಪಾಸಿಟಿವ್ ಇರುವ ವ್ಯಕ್ತಿಗಳು ಬೇರೆ ಕಡೆ ಹೋಗಿ ಸಾವಿರಾರು₹ಖರ್ಚು ಮಾಡುವ ಬದಲು ಇಲ್ಲಿ ಇರುವ ಸೌಲತ್ತನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಅರವಿಂದ್ ಅವರು ಇತರರಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here