ಈ ಇಂಜಿನಿಯರ್ ಗೆ ಸಮಾಜಸೇವೆಯೇ ಉಸಿರು..!

Date:

ಈ ಇಂಜಿನಿಯರ್ ಗೆ ಸಮಾಜಸೇವೆಯೇ ಉಸಿರು..!

ದೇಶದಲ್ಲಿ ಇಂದಿಗೂ ಬಡತನ ತಾಂಡವ ಆಡುತ್ತಿದೆ. ನಿತ್ಯವೂ ಒಪ್ಪೊತ್ತಿಗೂ ಒಂದು ತುತ್ತು ಇಲ್ಲದೆ ಸಾವಿರಾರು ಮಂದಿ ಸಾಯುತ್ತಿದ್ದಾರೆ. ಇನ್ನು ಹೆತ್ತು ಹೊತ್ತು ಸಾಕಿದ ತಂದೆ ತಾಯಿಯನ್ನೇ ಬೀದಿಗೆ ತಳ್ಳಿದ ಅದೆಷ್ಟೋ ಮಹನೀಯರೂ ಈ ಸಮಾಜದಲ್ಲಿ ಬದುಕುತ್ತಿದ್ದಾರೆ. ಹೀಗೆ ಸಾವಿರಾರು ಜನರು ಭಿಕ್ಷೆ ಬೇಡುತ್ತಾ ಬದುಕುತ್ತಿದ್ದಾರೆ. ಇನ್ನು ವಯಸ್ಸಾದವರ ಸ್ಥಿತಿಯಂತೂ ಶೋಚನೀಯ.ಆದ್ರೆ ಇಂತಹವರ ರಕ್ಷಣೆಗಾಗಿಯೇ ಇವ್ರು ಜನಿಸಿದ್ದಾರೆ ಅನ್ನಿಸುತ್ತೆ. ಬಡವರ ಬಗ್ಗೆ, ರೋಗಿಗಳ ಬಗ್ಗೆ, ಆಶಕ್ತರ ಬಗ್ಗೆ ಹೆಚ್ಚು ಕನಿಕರ ಹೊಂದಿರುವ ಇವ್ರ ಹೆಸ್ರು ಗೌತಮ್. ಹುಟ್ಟಿದಾಗಿನಿಂದಲೂ ಬಡತನದ ನೋವನ್ನು ಅನುಭವಿಸಿಕೊಂಡು ಬಂದಿದ್ದ ಗೌತಮ್ ಸಾಫ್ಟ್​ವೇರ್​ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಲಕ್ಷಾಂತರ ರೂಪಾಯಿ ಸಂಬಳ, ಓಡಾಡೋದಕ್ಕೆ ಕಾರು ಯಾವುದಕ್ಕೂ ಕೊರತೆ ಇಲ್ಲದಂತೆ ಜೀವನ ನಡೆಸುತ್ತಿದ್ರು.ಆದ್ರೆ ಅಂತಹ ಐಷಾರಾಮಿ ಜೀವನ ನಡೆಸಿದ್ದು, ಕೆಲವು ತಿಂಗಳುಗಳಷ್ಟೆ. ಇವರ ಮನಸ್ಸು ಪೂರ್ತಿ ಸಮಾಜ ಸೇವೆ ಕಡೆಗೆ ವಾಲಿಬಿಟ್ಟಿತ್ತು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು, ಯಾರಿಗೆ ಯಾರೂ ಇಲ್ಲದವರಿಗೆ ನನ್ನ ಜೀವನ ಮುಡಿಪಾಗಿರಬೇಕು, ಅಂತಹವರಿಗಾಗಿ ನಾನು ಸೇವೆ ಮಾಡಬೇಕು ಎಂದುಕೊಂಡು ಮಾಡಿದ್ದ ದೃಢ ನಿರ್ಧಾರದಿಂದ ಇಂದು ನೂರಾರು ಜನರಿಗೆ ದಾರಿ ದೀಪವಾಗಿದ್ದಾರೆ.ಗೌತಮ್ ಮೂಲತಃ ಹೈದರಾಬಾದ್​​ನವರು. ಸಾಫ್ಟ್​ವೇರ್​ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡ್ತಿದ್ರು. 2014 ರಲ್ಲಿ ಉದ್ಯೋಗವನ್ನು ಬಿಟ್ಟು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸ್ವಂತ ಖರ್ಚಿನಿಂದ “Serve Needy” ಎನ್​ಜಿಒ ಸ್ಥಾಪಿಸಿದ್ದಾರೆ.ಪ್ರಸ್ತುತ 22 ಮಕ್ಕಳಿಗೆ ಗೌತಮ್ ಅವರ NGO ಆಶ್ರಯ ತಾಣವಾಗಿದೆ.

ಗೌತಮ್​​ ಜೊತೆಗೆ ತಂದೆ ತಾಯಿ, ನಾಲ್ಕಾರು ಜನ ಕೆಲಸಗಾರರು ಹಾಗೂ 100 ಕ್ಕೂ ಹೆಚ್ಚು ಸ್ವಯಂ ಸೇವಕರ ತಂಡ ಕೈ ಜೋಡಿಸಿದೆ. ಸಂಸ್ಥೆಯಲ್ಲಿರೋ ಮಕ್ಕಳ ಹೊರತಾಗಿ ನಿತ್ಯವೂ ನೂರಾರು ಹಸಿದ ಮಕ್ಕಳಿಗೆ ಊಟ ನೀಡಲಾಗ್ತಿದೆ. ಮಕ್ಕಳಿಗೆ ಮಾತ್ರವಲ್ಲದೆ ಆಹಾರವನ್ನು ಮನೆಯಿಲ್ಲದವರಿಗೆ, ಕಡು ಬಡವರಿಗೆ, ಹಸಿವಿನಲ್ಲಿರುವವರಿಗೆ ತಲುಪಿಸುವ ಮಹೋನ್ನತ ಕಾರ್ಯವನ್ನು ಗೌತಮ್ ಅವರ ತಂಡ ಮಾಡ್ತಿದೆ.ಗೌತಮ್ ನಿಸ್ವಾರ್ಥ ಸೇವೆ ಅನಾಥ ಮಕ್ಕಳಿಗೆ ಮಾತ್ರ ಮೀಸಲಾಗಿಲ್ಲ. ಮನೆ ಇಲ್ಲದ ನಿರ್ಗತಿಕರಿಗೆ, ಭಿಕ್ಷುಕ ದಂಧೆಯಲ್ಲಿ ಸಿಲುಕಿದವರಿಗೆ, ತಂದೆ- ತಾಯಿ ಇಲ್ಲದವರಿಗೆ, ಮನೆಯಿಂದ ತಪ್ಪಿಸಿ ಕೊಂಡು ಬಂದಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ಮಾಡ್ತಿದ್ದಾರೆ. ಇನ್ನು ಗೌತಮ್ ಅವ್ರ ಬಗ್ಗೆ ವಿಶೇಷವಾಗಿ ಹೇಳಬೇಕು ಅಂದ್ರೆ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಎಂತಹದ್ದೇ ಮಾರಕ ಕಾಯಿಲೆ ಇರೋರು ಕಂಡು ಬಂದ್ರೂ ಗೌತಮ್ ಅವ್ರು ಒಂಚೂರು ಅಸಹ್ಯ ಪಟ್ಟುಕೊಳ್ಳದೇ ಮಕ್ಕಳಂತೆ ಆರೈಕೆ ಮಾಡುತ್ತಾರೆ. ಬೀದಿಯಲ್ಲಿ ರೋಗಿಗಳು ಕಂಡ್ರೆ ಅಥವಾ ಅವರಿಗೆ ಗಾಯಗಳು ಏನಾದ್ರು ಆಗಿದ್ರೆ ತಾವೇ ಸ್ವತಃ ಶುಚಿ ಮಾಡ್ತಾರೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತಾರೆ.

ಅನಾಥರು ಯಾರಾದ್ರೂ ಮೃತಪಟ್ರೆ ಅವರ ಅಂತ್ಯ ಸಂಸ್ಕಾರವನ್ನು ಸಹ ಗೌತಮ್ ಮಾಡ್ತಾರೆ. ವಿಧಿ ವಿಧಾನದಂತೆ ಅಂತ್ಯ ಸಂಸ್ಕಾರ ಮಾಡುವುದಲ್ಲದೆ ಪುಣ್ಯತಿಥಿಯನ್ನು ಮಾಡಿ ಹತ್ತಾರು ಜನರಿಗೆ ಊಟ ಹಾಕಿಸುತ್ತಾರೆ.ಇದಷ್ಟೆ ಮಾತ್ರವಲ್ಲದೆ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವುದು ಅನಾಥ ಮಕ್ಕಳ ಹುಟ್ಟು ಹಬ್ಬದ ಆಚರಣೆ ಸೇರಿದಂತೆ ಇನ್ನೂ ಅನೇಕ ಕಾರ್ಯಗಳು ಗೌತಮ್ ನೇತೃತ್ವದಲ್ಲಿ ನಡೆಯುತ್ತಿವೆ.ಅನ್ನದ ಮೇಲೆ ಎಲ್ಲರಿಗೂ ಹಕ್ಕಿದೆ. ಯಾರೂ ಕೂಡ ನಾವು ಬದುಕಿರುವಾಗ ಇನ್ನೊಬ್ಬರನ್ನು ಬೇಡಿ ಬದುಕುವ ಸ್ಥಿತಿ ಬರಬಾರದು ಎಂಬುದು ಇವರ ಧ್ಯೇಯ. ಆದ್ರೆ ಇಂತಹ ಒಬ್ಬ ಸಮಾಜ ಸೇವಕನಿಂದ ನೂರಾರು ಜನರಿಗೆ ಸಹಾಯವಾಗ್ತಿರೋದಂತೂ ಸತ್ಯ.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...