No menu items!
17.7 C
Munich
Friday, May 1, 2026

ಕಮ್ಮಿ ಕೆಲಸ ಮಾಡಿ ಜಾಸ್ತಿ ಸಂಬಳ ಪಡಿಬೇಕೆ?

Must read

ಕೆಲಸ ಕೆಲಸ ಕೆಲಸ.. ಮೂರು ಹೊತ್ತೂ ಕೆಲಸ. ರಾತ್ರಿಯಾದರೂ, ಬೆಳಕು ಬಂದರೂ ಕೆಲಸ.. ಈ ಮಾತು ನಮ್ಮ ದೇಶದಲ್ಲಿ ಕಾಮನ್. ಈ ಕೆಲಸ ಎಷ್ಟೊಂದು ಬೇಸರವಾಗಿರುತ್ತದೆ ಎಂದರೆ, ಕೆಲ ನಿರ್ದೇಶಕರು ಇಂಥದ್ದೇ ಸ್ಟೋರಿಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಅಚ್ಚರಿಯೆಂಬಂತೆ ಅವು ಸೂಪರ್ ಡೂಪರ್ ಹಿಟ್ ಆಗಿಬಿಟ್ಟಿವೆ. ಆದರೆ ಕೆಲವು ದೇಶಗಳಲ್ಲಿ ಮಾತ್ರ ಕೆಲಸ ಎಂದರೆ ಬೇಸರವಿಲ್ಲದೇ ಮಾಡುವ ಮಂದಿ ತುಂಬಾನೇ ಇದ್ದಾರೆ. ಆ ದೇಶಗಳಲ್ಲಿ ಕೆಲಸದ ಬಗ್ಗೆ ಇರುವ ಅತ್ಯಂತ ಸುಲಭ ನಿಬಂಧನೆಗಳೇ ಅದಕ್ಕೆ ಕಾರಣ. ಇಷ್ಟಕ್ಕೂ ಯಾವ್ಯಾವ ದೇಶದಲ್ಲಿ ಜನರು ಎಷ್ಟು ಹೊತ್ತು ಕೆಲಸ ಮಾಡುತ್ತಾರೆ ಗೊತ್ತಾ..? ನೀವೇ ನೋಡಿ.

1. ನೆದರ್ ಲ್ಯಾಂಡ್

Netherlands_it-is-easy

ಒಂದು ಕಾಲದಲ್ಲಿ ಭಾರತದ ಮೇಲೆ ದಾಳಿ ಮಾಡಿ ಆಂಗ್ಲರ ವಿರುದ್ಧ ಹೋರಾಡಿ, ಕೊನೆಗೊಮ್ಮೆ ಸೋಲನುಭವಿಸಿದ ದೇಶವಿದು. ಈ ದೇಶದ ಜನರು ವಾರಕ್ಕೆ ಕೇವಲ 27.6 ಗಂಟೆ ಮಾತ್ರ ಕೆಲಸ ಮಾಡುತ್ತಾರೆ. ಅಲ್ಲದೇ ಒಂದು ವಾರದಲ್ಲಿ ಅಲ್ಲಿನ ಜನರಿಗೆ ಬರೋಬ್ಬರಿ ನಾಲ್ಕು ದಿನ ರಜೆ ಸಿಗುತ್ತದಂತೆ. ಆದರೂ ಡಚ್ಚರ ನಾಡಿನ ಜಿಡಿಪಿ ಉತ್ತಮವಾಗಿದ್ದು, ಅಲ್ಲಿನ ಜನಜೀವನ ಸುಖಕರವಾಗಿದೆ.

2. ಬೆಲ್ಜಿಯಂ

Belgium_reddit

ಓಇಸಿಡಿ ಎಂಬ ಸಂಸ್ಥೆ ನಡೆಸಿದ ಸರ್ವೇ ಪ್ರಕಾರ, ಬೆಲ್ಜಿಯಂ ದೇಶದ ನೌಕರರು 8 ಗಂಟೆ ಮಾತ್ರ ಕೆಲಸ ಮಾಡಬಹುದು. ಅದಕ್ಕಿಂತ ಹೆಚ್ಚಿನ ಕೆಲಸ ಅಲ್ಲಿ ಮಾಡುವಂತಿಲ್ಲ. ಆದ್ದರಿಂದ ಒಬ್ಬ ಬೆಲ್ಜಿಯಂ ದೇಶದ ಪ್ರಜೆ ಸುಮಾರು 16.61 ಗಂಟೆಗಳ ಕಾಲ ವಿರಾಮ ತೆಗೆದುಕೊಳ್ಳುತ್ತಾರೆ.

3. ಫ್ರಾನ್ಸ್

france_ismegawall-blogspot

ವಿಶ್ವದ ಅಗ್ರಗಣ್ಯ ದೇಶ ಎನಿಸಿಕೊಂಡಿರುವ ಫ್ರಾನ್ಸ್ ಕೂಡಾ ಕೆಲಸ ಮಾಡಲು ಅತ್ಯಂತ ಉತ್ತಮ ದೇಶ ಎಂದು ಖ್ಯಾತಿ ಪಡೆದಿದೆ. ಈ ದೇಶದಲ್ಲಿ ಜನರು ಸುಮಾರು 40 ದಿನ ರಜೆಯನ್ನು ಪಡೆಯಬಹುದು. ಅಲ್ಲದೇ ಯಾವುದೇ ರೀತಿಯ ತಪಾಸಣೆ ಮತ್ತು ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.

4. ಬಲ್ಗೇರಿಯಾ

bulgaria_budnaera

ಈ ದೇಶ ಕೆಲಸದ ಜೊತೆ ಮಕ್ಕಳೊಂದಿಗೆ ಜೀವನ ನಡೆಸಲು ಅನುಕೂಲಕರವಾಗಿದೆ. ಅಲ್ಲದೇ ಮಾತೃತ್ವ ರಜೆ ಎಂದು ಸುಮಾರು 410 ದಿನಗಳವರೆಗೆ ಧೀರ್ಘ ರಜೆಯನ್ನು ನೀಡಲಾಗುತ್ತದೆ. ಅಲ್ಲದೇ ಶೇಕಡಾ 90ರಷ್ಟು ಸಂಬಳವನ್ನು ನೀಡಲಾಗುತ್ತದೆ. ಅಲ್ಲದೇ ಪತ್ನಿ ಗರ್ಭಿಣಿಯಾಗಿದ್ದರೆ ಪತಿ ಹಾಗೂ ಮನೆ ಹಿರಿಯ ಎನಿಸಿಕೊಂಡವರಿಗೂ ರಜೆ ಸಿಗುತ್ತದೆ.

5. ಡೆನ್ಮಾರ್ಕ್

phosee_denmark

ಈ ದೇಶ ಮಹಿಳೆಯರು ಕೆಲಸ ಮಾಡಲು ಅತ್ಯಂತ ಅನುಕೂಲಕರವಾಗಿದೆ. ಏಕೆಂದರೆ ಇಲ್ಲಿ ಮಹಿಳೆಯರು ಒಂದು ವರ್ಷದವರೆಗೂ ರಜೆ ತೆಗೆದುಕೊಳ್ಳಲು ಅವಕಾಶವಿದೆ. ಅಲ್ಲದೇ ಈ ದೇಶದಲ್ಲಿ ವಾರಕ್ಕೆ ಕೇವಲ 50 ಗಂಟೆಗಳವರೆಗೆ ಮಾತ್ರ ಕೆಲಸ ಮಾಡಬೇಕು.

6. ಬ್ರೆಜಿಲ್

brazil_prasannaholidays

ಈ ದೇಶದಲ್ಲಿ ಸಿಗುವಷ್ಟು ರಜೆಗಳು ಇನ್ಯಾವ ದೇಶಗಳಲ್ಲೂ ಸಿಗುವುದಿಲ್ಲ. ಏಕೆಂದರೆ ಬ್ರೆಜಿಲ್ ನಲ್ಲಿ 41 ದಿನ ಸಾಮಾನ್ಯ ರಜೆ ಸಿಗುತ್ತದೆ. ಅಗತ್ಯ ಬಿದ್ದರೆ 30 ದಿನಗಳವರೆಗೆ ರಜೆ ಪಡೆಯಬಹುದು. ಇದರ ಜೊತೆ 11 ದಿನ ಸರ್ಕಾರಿ ರಜೆಗಳು ಬ್ರೆಜಿಲ್ ದೇಶದಲ್ಲಿ ಸಿಗುತ್ತವೆ.

7. ಲಿಥುವೇನಿಯಾ

lithuania_lithuaniaforyou

ಈ ದೇಶದಲ್ಲಿನ ಪತಿ ಪತ್ನಿಯರು ಅತ್ಯಂತ ಪುಣ್ಯವಂತರು. ಏಕೆಂದರೆ ಪತ್ನಿ ಗರ್ಭಿಣಿಯಾದರೆ ಆಕೆ ಹಾಗೂ ಆಕೆಯ ಪತಿಗೆ ರಜೆ ದೊರೆಯುತ್ತದೆ. ಅದರ ಜೊತೆಗೆ ಮೊದಲ ವರ್ಷ ಸುಮಾರು 70% ಸಂಬಳ ನೀಡಲಾಗುತ್ತದೆ. ಎರಡನೇ ವರ್ಷ 40%ರಷ್ಟು ಸಂಬಳವನ್ನು ಸರ್ಕಾರ ನೀಡುತ್ತದೆ.

8. ಸ್ವೀಡನ್

Sweden_thelistbuzz

ಈ ದೇಶ ಕೂಡಾ ಗರ್ಭಿಣೀಯರಿಗೆ ಹೇಳಿ ಮಾಡಿಸಿದ್ದಂತಹ ಕೆಲಸಗಳನ್ನು ಹೊಂದಿದೆ. ಏಕೆಂದರೆ ಗರ್ಭಿಣಿ ಮಹಿಳೆಯರಿಗೆ ಇಲ್ಲಿ ಸುಮಾರು 480 ದಿನಗಳು ಅಥವಾ 16 ತಿಂಗಳವರೆಗೆ ರಜೆ ಸೌಲಭ್ಯ ನೀಡುತ್ತದೆ. ಅಲ್ಲದೇ ಈ ದೇಶದಲ್ಲಿ ಅಬ್ಬಬ್ಬಾ ಎಂದರೆ 6 ಗಂಟೆವರೆಗೆ ಮಾತ್ರ ಕೆಲಸ ಮಾಡಬಹುದಂತೆ..!

9. ಜರ್ಮನಿ

germany_blog-crownrelo

ಜರ್ಮನ್ನರು ಒಂದು ವಾರಕ್ಕೆ ಕೇವಲ 27 ಗಂಟೆ ಮಾತ್ರ ಕೆಲಸ ಮಾಡುತ್ತಾರಂತೆ. ಅರ್ಥಾತ್ ದಿನಕ್ಕೆ ಕೇವಲ 4 ಗಂಟೆ ಕೆಲಸ ಮಾಡುವ ಭಾಗ್ಯ ಜರ್ಮನ್ನರಿಗೆ ಸಿಗುತ್ತದೆ. ಅಲ್ಲದೇ ಈ ದೇಶದ ಜಿಡಿಪಿಯೂ ಕೂಡಾ ಉನ್ನತ ಮಟ್ಟದಲ್ಲಿದ್ದು, ಮುಂದುವರೆದ ದೇಶಗಳ ಪಟ್ಟಿಯಲ್ಲಿ ಈ ದೇಶ ಸ್ಥಾನ ಪಡೆದಿದೆ.

10. ನಾರ್ವೆ

norway_homeaway

ಈ ದೇಶವು ಅತಿ ಹೆಚ್ಚು ರಜೆ ನೀಡುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿದೆ. ಏಕಂದರೆ ಇಲ್ಲಿ 47 ವಾರ ರಜೆ ನೀಡಲಾಗುತ್ತದೆ. ಅಗತ್ಯ ಬಿದ್ದರೆ 57 ದಿನಗಳವರೆಗೆ ರಜೆ ಪಡೆಯುವ ಅವಕಾಶವಿದೆ. ಅಲ್ಲದೇ ಎಲ್ಲಾ ರವಿವಾರಗಳಂದು ಸಾಮಾನ್ಯ ರಜೆ ದೊರೆಯುತ್ತದೆ. ಇಷ್ಟೆಲ್ಲಾ ರಜೆಗಳನ್ನು ನೀಡುವ ನಾರ್ವೆ ದೇಶ ಜಿಡಿಪಿ ಪ್ರಗತಿಯಲ್ಲಿ ಉನ್ನತ ಮಟ್ಟದಲ್ಲಿದೆ ಎಂಬುದನ್ನು ನಂಬಲೇಬೇಕು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article