ಕರ್ನಾಟಕ ಸರ್ಕಾರವು ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂ ವರೆಗಿನ ರಸ್ತೆಗಳಲ್ಲಿ ತೆರಳುವ ಐಟಿ ಕಂಪನಿ ಉದ್ಯೋಗಿಗಳಿಗೆ 2022ರ ಡಿಸೆಂಬರ್ ವರೆಗೂ ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಕೇಳಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಮಾತನಾಡಿ, ಆ ಮಾರ್ಗದಲ್ಲಿ ಸರ್ಕಾರ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಕಾರಣ ಈ ಭಾಗದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಅಗತ್ಯವಿದ್ದು, ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಸೂಚಿಸಲಾಗಿದೆ.
ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಆರ್ ಪುರಂವರೆಗೆ ಹೊರ ವರ್ತುಲ ರಸ್ತೆಯಲ್ಲಿ ಬಿಎಂಆರ್‌ಸಿಎಲ್ ಮೆಟ್ರೋ ನಿರ್ಮಾಣ ಕಾರ್ಯಗಳನ್ನು ಆರಂಭಿಸುತ್ತಿದೆ. ಇದರ ನಿರ್ಮಾಣ ಕಾರ್ಯ ಮುಗಿಯಲು ಕನಿಷ್ಠ 1.5ರಿಂದ 2 ವರ್ಷ ಹಿಡಿಯಬಹುದು. ಈ ಭಾಗಗಳಲ್ಲಿ ದೊಡ್ಡ ಟೆಕ್ ಪಾರ್ಕ್ ಮತ್ತು ಐಟಿ ಕಂಪನಿಗಳು ಕ್ಯಾಂಪಸ್‌ಗಳನ್ನು ಹೊಂದಿವೆ. ಹಾಗೂ ದಿನವಿಡೀ ಹೆಚ್ಚಿನ ಪ್ರಮಾಣದ ಟ್ರಾಫಿಕ್ ಕೂಡ ಈ ಭಾಗದಲ್ಲಿ ಇರುತ್ತದೆ.
ಓಆರ್‌ಆರ್ 6 ಲೈನ್‌ಗಳನ್ನು ಹೊಂದಿದ್ದರೂ ಕೂಡ ಸರ್ವೀಸ್ ರಸ್ತೆಗಳಲ್ಲಿ ನಿತ್ಯ ಸಾಕಷ್ಟು ಸಂಚಾರ ದಟ್ಟಣೆ ಇರುತ್ತದೆ. ಹೀಗಾಗಿ ಐಟಿ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದರಿಂದ ಸಂಚಾರ ದಟ್ಟಣೆ ಕೊಂಚ ಕಡಿಮೆಯಾಗಲಿದೆ.