ಒಳ್ಳೆಯ ಕೆಲಸಕ್ಕೆ ಎಂದಿಗೂ ಬೆಲೆ ಇದೆ. ಜನ ಎಂದೂ ಒಳ್ಳೆಯ ಕೆಲಸಗಳನ್ನು ಗೌರವಿಸುತ್ತಾರೆ, ಪ್ರೀತಿಸುತ್ತಾರೆ. ರಾಜ್ಯದ ದಕ್ಷ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾದ ರೋಹಿಣಿ ಸಿಂಧೂರಿ ಅವರು ಕೂಡ ಒಬ್ಬರು. ಅವರ ಕೆಲಸ, ಕಾರ್ಯವೈಖರಿ, ದಕ್ಷತೆ, ಪ್ರಾಮಾಣಿಕತೆಯನ್ನು ಪ್ರತಿಯೊಬ್ಬರೂ ಮೆಚ್ಚುತ್ತಾರೆ.
ಹಾಸನದ ಜಿಲ್ಲಾಧಿಕಾರಿ ಆಗಿರುವ ಇವರ ಹೆಸರಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ ನೆರವೇರುತ್ತದೆ.
ಹೌದು, ಇಲ್ಲಿನ ಪುರಾತನ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತಿ ಸೋಮವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೆಸರಲ್ಲಿ ಪೂಜೆ ನಡೆಯುತ್ತದೆ.
ಈ ದೇವಸ್ಥಾನ ಶಿಥಿಲಾವಸ್ಥೆಗೆ ತಲುಪಿದ್ದರೂ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿರಲಿಲ್ಲ. ಆದರೆ, 2017ರಲ್ಲಿ ಜಿಲ್ಲಾಧಿಕಾರಿಯಾಗಿ ಜಿಲ್ಲೆಗೆ ಬಂದ ರೋಹಿಣಿ ಸಿಂಧೂರಿಯವರು ದೇವಸ್ಥಾನದ ಜೀರ್ಣೋದ್ಧಾರಕ್ಕೆ 30 ಲಕ್ಷ ರೂ ಹಣವನ್ನು ಬಿಡುಗಡೆ ಮಾಡಿಸಿದ್ದರು. ಇದೇ ಕಾರಣಕ್ಕೆ ಅಂದಿನಿಂದ ಈ ದೇವಸ್ಥಾನದಲ್ಲಿ ರೋಹಿಣಿ ಸಿಂಧೂರಿ ಹೆಸರಲ್ಲಿ ಸೋಮವಾರ ಅರ್ಚನೆ ಮಾಡಲಾಗುತ್ತಿದೆ.
ಬರೀ ಪೂಜೆ ಮಾತ್ರವಲ್ಲದೆ ರೋಹಿಣಿ ಸಿಂಧೂರಿ ಅವರ ಹೆಸರಲ್ಲಿ ಮರವನ್ನು ಬೆಳೆಸಲಾಗುತ್ತಿದೆ. ನಿತ್ಯ ಈ ಮರಕ್ಕೆ ಜಲಾಭಿಷೇಕ ಕೂಡ ನಡೆಯುತ್ತದೆ. ಜಿಲ್ಲಾದಿಕಾರಿಯಾಗಿ ತಮ್ಮ ವ್ಯಾಪ್ತಿಯಲ್ಲಿ ರೋಹಿಣಿ ಮಾಡಿದ ಕೆಲಸ ಈ ರೀತಿ ಸ್ಮರಿಸುವಂತೆ ಮಾಡಿದೆ.
ನೆಚ್ಚಿನ ಜಿಲ್ಲಾಧಿಕಾರಿಗಳಿಗೆ ಒಳ್ಳೆಯದಾಗಬೇಕೆಂದು ಜನ ಹೀಗೆ ಪೂಜೆ ಮಾಡಿಸುತ್ತಿರುವುದು ರೋಹಿಣಿ ಜನಪರ ಕಾಳಜಿ, ಪ್ರೀತಿಗೆ ಸಾಕ್ಷಿ.