ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟ್ರೋಫಿಗಳಲ್ಲಿ ಟಿ20 ವಿಶ್ವಕಪ್ ಒಂದನ್ನೇ ಆಸ್ಟ್ರೇಲಿಯಾ ಗೆದ್ದಿಲ್ಲ. ಉಳಿದೆಲ್ಲಾ ಪ್ರಮುಖ ಟ್ರೋಫಿಗಳನ್ನು ಐಸಿಸಿ ಜಯಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಐದು ಬಾರಿ ವಿಶ್ವ ಚಾಂಪಿಯನ್ಸ್ ಎನಿಸಿದೆ. 2009ರಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ಗೆದ್ದಿತ್ತು. ಆದರೆ ಟಿ20 ವಿಶ್ವಕಪ್ ಮಾತ್ರ ಕಾಂಗರೂ ನಾಡಿಗೆ ಒಲಿದಿಲ್ಲ. 2007ರಲ್ಲಿ ಟಿ20 ವಿಶ್ವಕಪ್ ಆರಂಭಗೊಂಡು ಇಷ್ಟು ದಿನಗಳಾಗಿದ್ದರೂ ಆಸೀಸ್‌ಗೆ ಟಿ20 ವಿಶ್ವಕಪ್ ಒಲಿಯದಿರುವುದು ಬೇಸರ ತಂದಿದೆ.
ಮುಂದೆ ಅಕ್ಟೋಬರ್-ನವೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ಸ್ ಆಗಲಿದೆ ಎಂದು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ. ವಿಶ್ವಕಪ್‌ಗೆ ಸಂಬಂಧಿಸಿ ಆಸ್ಟ್ರೇಲಿಯಾ ತಂಡ ಪ್ರಕಟಗೊಂಡಿದ್ದು ಇದರ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.