ಈ ವರ್ಷ ಶಾಲೆ ಆರಂಭಿಸದಿರಲು ಸರ್ಕಾರ ನಿರ್ಧಾರ..!
ಶಾಲೆ ಆರಂಭ ಯಾವಾಗ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿದೆ. ಈ ವರ್ಷ ವಂತೂ ಶಾಲೆ ಆರಂಭವಾಗಲ್ಲ..! ಇಂತಹದ್ದೊಂದು ಮಹತ್ವದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ.
ಶಾಲೆ ಆರಂಭಿಸುವ ಕುರಿತು ಚರ್ಚೆ ನಡೆಸಲು ಇಂದು ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಹಲವು ಇಲಾಖೆಗಳ ಪ್ರಮುಖರು ಹಾಗೂ ತಜ್ಞರ ಅಭಿಪ್ರಾಯ ಪಡೆದು, ಡಿಸೆಂಬರ್ ಅಂತ್ಯದ ವರೆಗೆ ಶಾಲೆ ಆರಂಭ ಮಾಡುವುದು ಬೇಡ ಎಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಡಿಸೆಂಬರ್ ಕೊನೆಯ ವಾರದಲ್ಲಿ ಶಾಲೆ ಆರಂಭದ ಕುರಿತಾಗಿ ಚರ್ಚೆ ನಡೆಸಿ ಬಳಿಕ ಶಾಲೆ ಆರಂಭದ ಬಗ್ಗೆ ಮಾಹಿತಿ ನೀಡಲಾಗುವುದುದೆಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ 8 ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಗಳು ಭಾಗಿಯಾಗಿದ್ದರು. ಶಿಕ್ಷಣ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ನಿಮ್ಗೆ ಯಾರಾಗ್ತಾರೆ ಸೂಪರ್ ಜೋಡಿ?
ಒಬ್ಬೊಬ್ಬರದ್ದು ಒಂದೊಂದು ಗುಣ , ನಡೆತ, ವ್ಯಕ್ತಿತ್ವ. ಇವುಗಳ ಆಧಾರದಲ್ಲೇ ಸಂಬಂಧಗಳು ನಿಂತಿವೆ. ನಮ್ಮ ರಾಶಿಗೂ ವ್ಯಕ್ತಿತ್ವಕ್ಕೂ ಸಂಬಂಧವಿದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಅದಕ್ಕನುಗುಣವಾಗಿಯೇ ವಿವಾಹ ಸಂಬಂಧ ಏರ್ಪಡಿಸೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿ ಯಾವ ರಾಶಿಯವರಿಗೆ ಎಂಥಾ ಗುಣ ಸ್ವಭಾವದವರು ಸರಿಯಾದ ಜೋಡಿ ಆಗುತ್ತಾರೆ ಮಾಹಿತಿ ಇದೆ.
ಮೇಷ: ಈ ರಾಶಿಯವರು ಗಟ್ಟಿ ಮನಸ್ಸಿನವರು ಕಠೋರ ಹೃದಯಿಗಳು. ಆದರೆ , ಇವರನ್ನು ಪ್ರೀತಿಸುವವರು ಮಾತ್ರ ಹಾಗಿರುವುದಿಲ್ಲ. ಬಹಳ ಲೆಕ್ಕಾಚಾರದ ವ್ಯಕ್ತಿಗಳಾಗಿರುತ್ತಾರೆ. ಪ್ರತಿ ಖರ್ಚಿನಿಂದ ಲಾಭ ಎಷ್ಟಿದೆ ಎಂಬ ಲೆಕ್ಕಹಾಕುತ್ತಾರೆ. ಇಂಥವರಿಂದ ಮಾತ್ರ ನಿಮ್ಮೊಡನೆ ಬಾಳ್ವೆ ಮಾಡಲು ಸಾಧ್ಯ.
ವೃಷಭ : ಈ ರಾಶಿಯವರು ಬೇರೆಯವರನ್ನು ಪ್ರೀತಿಸುವುದಕ್ಕಿಂತ ಇವರನ್ನು ಪ್ರೀತಿಸೋ ಮಂದಿಯೇ ಹೆಚ್ಚು. ಈ ರಾಶಿಯ ಹುಡುಗಿಯರನ್ನ ಪ್ರೀತಿಸುವವರ ಸಂಖ್ಯೆ ಎಷ್ಟಿದೆ ಅನ್ನೋದು ಕೆಲವೊಮ್ಮೆ ಊಹೆಗೂ ನಿಲುಕದು. ಆದರೆ, ಇವರನ್ನು ಮದುವೆ ಆಗೋ ಹುಡುಗ ಸಿನಿಮಾ, ಕಲೆ, ಸಂಗೀತ , ಮನರಂಜನೆಯಲ್ಲಿ ಆಸಕ್ತಿ ಇಲ್ಲದವನೇ ಆಗಿರುತ್ತಾನೆ. ಇವರ ಬಾಳಸಂಗಾತಿಗೆ ಸಿಕ್ಕಾಪಟ್ಟೆ ಸಿಟ್ಟು ಇರುತ್ತೆ…!
ಮಿಥುನ : ಈ ರಾಶಿಯವರ ಜೊತೆ ಧೀರ್ಘಕಾಲ ಸಂಬಂಧ ಉಳಿಸಿಕೊಳ್ಳೋದೇ ಗ್ರೇಟ್. ಇವರಂಥ ಪ್ರೆಯಸಿ, ಪ್ರಿಯತಮ ಲಭಿಸಿದರೆ ಅದೃಷ್ಟವೇ ಎನ್ನಬಹುದು.ಇವರ ಜೊತೆ ಧೀರ್ಘಸಂಬಂಧ ಇಟ್ಟುಕೊಳ್ಳಲು ಅದೃಷ್ಟ ಮಾಡಿರಬೇಕು. ಇವರು ಯಾವ ಸಂಬಂಧವನ್ನೂ , ಪ್ರೀತಿಯನ್ನು ಗಂಭೀರವಾಗಿ ನೋಡುವವರಲ್ಲ.
ಕಟಕ: ಇವರ ಸಿಟ್ಟನ್ನು ತಾಳಿಕೊಂಡು ಹೊಗಳುತ್ತಾ ಜೀವನ ಸಾಗಿಸುವವರು ಬೇಕು. ಈ ರಾಶಿಯವರ ಜೀವನ ಪದ್ಧತಿಯನ್ನು ಅನುಸರಿಸುವವರೇ ಇವರ ಜೀವನ ಸಂಗಾತಿ ಆಗ್ಬೇಕು.
ಸಿಂಹ : ಈ ರಾಶಿಯವರು ಶಿಸ್ತಿನ ಸಿಪಾಯಿಗಳು. ಆದರೆ , ಇವರನ್ನು ಪ್ರೀತಿಸುವವರ ತದ್ವಿರುದ್ಧವಾಗಿಯೇ ಇರುತ್ತಾರೆ. ಈ ರಾಶಿಯವರು ಒಂದು ವಸ್ತು ಆಗಲಿ ಅಥವಾ ಏನೇ ಆಗಲಿ ಹೀಗೇ ಇರಬೇಕು, ಹಾಗೇ ಇರಬೇಕು ಎಂದು ಬಯಸುತ್ತಾರೆ. ಇವರ ಸಂಗಾತಿ ಹೀಗಿರಲ್ಲ.
ಕನ್ಯಾ: ಈ ರಾಶಿಯವರಿಗೆ ತಾವು ಮಾಡುವ ಎಡವಟ್ಟುಗಳನ್ನು ತಿದ್ದುತ್ತಾ ಜೀವನ ಸಾಗಿಸೋ ಸಂಗಾತಿ ಬೇಕು. ಅತಿಯಾದ ಬುದ್ಧಿವಂತಿಕೆ , ಅಹಂನಿಂದ ಮಾತಾಡೋ ಮಾತುಗನ್ನು ತಿದ್ದಿ, ಆಗಾಗ ಬುದ್ಧಿ ಹೇಳುತ್ತಾ ಸಾಗೋ ಜೋಡಿ ಇವರಿಗೆ ಬೇಕು.
ತುಲಾ : ಪ್ರತಿ ವಿಚಾರದಲ್ಲಿ ಲಾಭದ ಬಗ್ಗೆ ಚಿಂತಿಸುವ , ಜಗಳ ಆಡದೆ ಹೊಂದಿಕೊಂಡು ಹೋಗುವ ಸ್ವಭಾವದವರು ಈ ರಾಶಿಯವರಿಗೆ ಬೇಕು.
ವೃಶ್ಚಿಕ : ಈ ರಾಶಿಯವರು ಹೆಚ್ಚಾಗಿ ಅಳಿವ, ಚಿಕ್ಕಪುಟ್ಟ ವಿಚಾರಗಳಿಗೂ ತಲೆಕೆಡಿಸಿಕೊಳ್ಳುವ ವ್ಯಕ್ತಿಗಳು. ಆದ್ದರಿಂದ ಇವರ ಜೋಡಿ ಆಗುವವರು ಯಾವ ವಿಚಾರ ಹೇಳಬೇಕು, ಯಾವುದನ್ನು ಹೇಳಬಾರದು ಎಂಬ ವಿವೇಚನೆ ಇಟ್ಟುಕೊಂಡಿರಬೇಕು.
ಧನು : ಇವರ ಮುಗ್ಧತೆ , ಸರಳತೆಯನ್ನು ದುರುಪಯೋಗ ಮಾಡಿಕೊಳ್ಳದೇ ಇರುವವರು ಬೇಕು. ಇವರು ಮೌನಿಗಳು, ಇವರನ್ನು ಪ್ರೀತಿಸುವವರು ಮಾತುಗಾರರು. ಈ ರಾಶಿಗೆ ಸಿಗುವ ಸಂಗಾತಿ ಪ್ರಪಂಚ ಅರಿತವರು.
ಮಕರ : ಈ ರಾಶಿಯವರಿಗೆ ಅವರನ್ನು ಪ್ರೀತಿಸುವವರ ಗುಣ ಇಷ್ಟ ಆಗಲ್ಲ. ಕೆಲವೊಮ್ಮೆ ಇವರಿಗೆ ಅವರು ಅರ್ಥ ಆಗಲ್ಲ. ನಿಮ್ಮಲ್ಲಿ ನಿಮ್ಮವರಿಗೆ ಹೆಚ್ಚು ಪ್ರೀತಿ ಬರಲೆಂದು ನೀವು ಕಾಯಬೇಕು.
ಕುಂಭ : ಇವರು ಕುಟುಂಬದ ಮುದ್ದಿನ ಮಗ/ಮಗಳು. ಸಾಮಾನ್ಯವಾಗಿ ಆಲಸಿಗಳು. ಆದರೆ, ಇವರ ಜೋಡಿ ಆಗುವವರು ತುಂಬಾ ಚುರುಕು.
ಮೀನ : ಇವರ ಜೋಡಿಯಲ್ಲಿ ತಪ್ಪು ಯಾರಿದ್ದಾಗಿದ್ದು ಎಂಬ ವಾದ ಯಾವಾಗಲೂ ನಡೀತಾ ಇರುತ್ತೆ.ಇಬ್ಬರ ನಡುವೆ ಇಬ್ಬರ ಬುದ್ದಿವಂತಿಕೆ ಪರೀಕ್ಷೆ ಯಾವಾಗಲೂ ನಡೀತಿರುತ್ತೆ.