ಈ ವಾರದ TRP.. ನೂರರ ಗಡಿಯತ್ತ ಪಬ್ಲಿಕ್ ಟಿವಿ..!
ಪ್ರತಿ ವಾರದಂತೆ ಈ ವಾರವು ಚಾನೆಲ್ ಗಳ ವಾರದ ಹಣೆ ಬರಹವಾದ ಟಿಆರ್ಪಿ ಬಿಡುಗಡೆಗೊಂಡಿದೆ.. ಎರಡು ವಾರಗಳ ಹಿಂದೆಗೆ ಹೋಲಿಸಿದ್ರೆ ಕಳೆದ ವಾರವು ಚಾನೆಲ್ ಗಳ ರೇಟಿಂಗ್ ನಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ.. ಇದರ ಪ್ರಕಾರ ಟಿವಿ 9 ಎಂದಿನಂತೆ ನಂಬರ್ 1 ಸ್ಥಾನವನ್ನ ಉಳಿಸಿಕೊಂಡಿದ್ದು 149 ರೇಟಿಂಗ್ ಅನ್ನ ಪಡೆದುಕೊಂಡಿದೆ…
ಇನ್ನು ಕಳೆದ ವಾರ ಪಬ್ಲಿಕ್ ಟಿವಿಯತ್ತ ಪ್ರೇಕ್ಷಕರು ಹೆಚ್ಚಿನ ಒಲವನ್ನ ತೋರಿದಂತಿದ್ದು, 90 ರೇಟಿಂಗ್ ನ ಜೊತೆಗೆ ಮತ್ತೆ ನೂರಾರ ಗಡಿಯತ್ತ ದಾಪುಗಾಲಿಟ್ಟಿದೆ.. ಇದರ ಜೊತೆಗೆ ಉಳಿದ ಚಾನೆಲ್ ಗಳ ಪೈಕಿ ಸುವರ್ಣ ನ್ಯೂಸ್ ಸಹ ತನ್ನ ಟಿಆರ್ ಪಿಯನ್ನ ಕಳೆದವಾರ ಹೆಚ್ಚಿಸಿಕೊಂಡಿದ್ದು 61 ರೇಟಿಂಗ್ ಗಳಿಸಿದೆ…
ಉಳಿದಂತೆ 4ನೇ ಸ್ಥಾನದಲ್ಲಿರುವ ನ್ಯೂಸ್ 18 ಕನ್ನಡ 52, ದಿಗ್ವಿಜಯ ನ್ಯೂಸ್ 24, ಬಿಟಿವಿ- 18, ಟಿವಿ5-16, ಪ್ರಜಾ ಟಿವಿ 12, ಉದಯ ನ್ಯೂಸ್ 11, ಕಸ್ತೂರಿ ನ್ಯೂಸ್ 9, ರಾಜ್ ನ್ಯೂಸ್ 7, ನ್ಯೂಸ್ ಎಕ್ಸ್ ಕನ್ನಡ 4 ಹಾಗು ಟಿವಿ 1 ನ್ಯೂಸ್ 2 ರೇಟಿಂಗ್ ನ ಜೊತೆಗೆ ಕೊನೆ ಸ್ಥಾನದಲ್ಲಿದೆ..