ಈ ವಾರವೂ ಟಿವಿ9 ಕನ್ನಡವೇ ಬಾದ್​ ಷಾ..!

Date:

ಕನ್ನಡ ನ್ಯೂಸ್ ಚಾನಲ್​ಗಳ​ ಟಿಆರ್​ಪಿ ಸಮರದಲ್ಲಿ ಈ ವಾರವೂ ಟಿವಿ9 ಕನ್ನಡ ಮತ್ತೆ ಬಾದ್​ ಷಾ ಆಗಿ ಹೊರಹೊಮ್ಮಿದೆ. 39ನೇ ವಾರದ ಬಾರ್ಕ್​ ರೇಟಿಂಗ್ಸ್​ ಪ್ರಕಾರ ಈ ವಾರ 127 ಜಿಆರ್​ಪಿಯೊಂದಿಗೆ ಟಿವಿ9 ಕನ್ನಡ ರಾಜ್ಯದ ನಂಬರ್​ ಒನ್ ನ್ಯೂಸ್​ ಚಾನಲ್​ ಎನಿಸಿಕೊಂಡಿದೆ. ಟಿವಿ9 ಹೊರತಾಗಿ ಬೇರೆ ಯಾವ ವಾಹಿನಿಯೂ ಮೂರಂಕಿ ದಾಟುತ್ತಿಲ್ಲ ಎನ್ನುವುದೇ ವಿಶೇಷ. 69 ಜಿಆರ್​​ಪಿಯೊಂದಿಗೆ ಪಬ್ಲಿಕ್​ಟಿವಿ ಎರಡನೇ ಸ್ಥಾನದಲ್ಲಿದ್ದು, 53 ಅಂಕಿಯೊಂದಿಗೆ ಸುವರ್ಣ ನ್ಯೂಸ್​ ಮೂರನೇ ಸ್ಥಾನಕ್ಕೆ ತೃಪ್ತಿ. ಇನ್ನು ಬಲಿಷ್ಠ ತಂಡವನ್ನ ಕಟ್ಟಿಕೊಂಡಿರೋ ನ್ಯೂಸ್​18 ಕನ್ನಡ 37ಕ್ಕೆ ಸಮಾಧಾನ ಪಟ್ಟುಕೊಂಡಿದೆ. 24 ಜಿಆರ್​ಪಿಯೊಂದಿಗೆ ದಿಗ್ವಿಜಯ ವಾಹಿನಿ ಐದನೇ ಸ್ಥಾನದಲ್ಲಿದೆ. ಉಳಿದಂತೆ ಬಿಟಿವಿ-18, ಟಿವಿ5-14 , ಪ್ರಜಾ ಟಿವಿ -12, ಕಸ್ತೂರಿ ನ್ಯೂಸ್​- 9 ಹಾಗೂ ರಾಜ್​ ನ್ಯೂಸ್​ – 8 ಜಿಆರ್​ಪಿ ಪಡೆದಿವೆ. ಇತ್ತೀಚೆಗಷ್ಟೇ ಆರಂಭವಾದ ನ್ಯೂಸ್ ಎಕ್ಸ್​-4 ಹಾಗೂ ಟಿವಿ1 – 5 ಜಿಆರ್​ಪಿ ಪಡೆದುಕೊಂಡಿವೆ.

Share post:

Subscribe

spot_imgspot_img

Popular

More like this
Related

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...