ಬೆಂಗಳೂರು: ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಿರುವ ಕನ್ನಡದ ಬಿಗ್‍ಬಾಸ್ ಸೀಸನ್ 8ರ ಈ ವಾರದ ಎಪಿಸೋಡ್‍ನಿಂದಲೂ ಕೂಡ ಕಿಚ್ಚ ಹೊರಗುಳಿಯುದಾಗಿ ಟ್ಟಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕಳೆದ ವಾರದ ಎಪಿಸೋಡ್‍ನಲ್ಲಿ ಆರೋಗ್ಯ ಸರಿಯಿಲ್ಲ ಹಾಗಾಗಿ ಈ ವಾರ ಪಾಲ್ಗೊಳ್ಳುವುದಿಲ್ಲ ಎಂದಿದ್ದರು. ಇದೀಗ ಈ ವಾರ ವೈದ್ಯರ ಸಲಹೆ ಮೇರೆಗೆ ರೆಸ್ಟ್ ಮಾಡುತ್ತಿರುವುದರಿಂದ ವೀಕೆಂಡ್ ಎಪಿಸೋಡ್‍ನಲ್ಲಿ ಭಾಗವಹಿಸುವದಿಲ್ಲ ಎಂದಿದ್ದಾರೆ.
ಈ ಕುರಿತು ಸ್ವತಃ ಕಿಚ್ಚ ಟ್ವೀಟ್ ಮಾಡಿದ್ದು, ನಾನು ಈ ವಾರದ ಬಿಗ್‍ಬಾಸ್ ವೀಕೆಂಡ್ ಎಪಿಸೋಡ್ ಮಿಸ್ ಮಾಡಿಕೊಳ್ಳುತ್ತಿದ್ದು, ನನಗೆ ಆರೋಗ್ಯ ಸರಿಯಿಲ್ಲದ ಕಾರಣ ರೆಸ್ಟ್ ಬೇಕಾಗಿದೆ. ಆದರೂ ಕೂಡ ನಾನು ವೇದಿಕೆಯಲ್ಲಿ ಕೆಲಗಂಟೆಗಳನ್ನು ಕಳೆದು ಎಲ್ಲಾ ಸ್ಪರ್ಧಿಗಳಿಗೆ ನ್ಯಾಯ ಒದಗಿಸಿಕೊಡಬಹುದು. ಆದರೆ ಇದು ಕಷ್ಟಕರವಾದ ನಿರ್ಧಾರ. ಹಾಗಾಗಿ ವಾಹಿನಿ ಈ ವಾರವು ವೀಕೆಂಡ್ ಎಪಿಸೋಡ್‍ನಿಂದ ನನಗೆ ದೂರವಿರಲು ಅವಕಾಶ ಮಾಡಿಕೊಟ್ಟಿದೆ. ಬಿಗ್‍ಬಾಸ್ ತಂಡಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ನನಗಾಗಿ ಪ್ರಾರ್ಥಿಸಿದ ಅಭಿಮಾನಿಗಳೆಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಕಳೆದ ವಾರ ಕೂಡ ಸುದೀಪ್ ವಿಕೇಂಡ್ ಎಪಿಸೋಡ್‍ನಿಂದ ದೂರ ಉಳಿದಿದ್ದರು. ಈ ಸಂದರ್ಭ ವಾರದ ಕತೆ ಕಿಚ್ಚನ ಜೊತೆ ಬದಲಾಗಿ ವಿಶೇಷವಾಗಿ ಪ್ಲಾನ್ ಮಾಡಿಕೊಂಡು ವಾರ ಕಳೆದಿದ್ದ ಬಿಗ್‍ಬಾಸ್ ಮನೆ. ಈ ವಾರವು ಮತ್ತೆ ಅದೇ ರೀತಿ ನಡೆಯಲಿದ್ಯಾ ಅಥವಾ ಹೊಸ ರೀತಿಯ ಸಂಚಿಕೆ ಮೂಡಿ ಬರಲಿದ್ಯಾ ಎಂದು ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.
ಈ ನಡುವೆ ಕಿಚ್ಚ ಅನಾರೋಗ್ಯಕ್ಕೀಡಾಗಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಅತಂಕ ಉಂಟುಮಾಡಿದೆ. ಅಭಿಮಾನಿಗಳು ಬೇಗ ಗುಣಮುಖರಾಗಿ ಬನ್ನಿ ಎಂಬುದಾಗಿ ಮನವಿ ಮಾಡಿಕೊಳ್ಳುತ್ತಿದ್ದು, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದು, ಆದಷ್ಟು ಬೇಗ ಮರಳಿ ಬನ್ನಿ ಎಂದು ಹಾರೈಸಿದ್ದಾರೆ.
ಕಳೆದವಾರ ಬಿಗ್‍ಬಾಸ್ ಮನೆಯಲ್ಲಿ ಎಂದಿನಂತೆ ಎಲಿಮಿನೇಷನ್ ಪ್ರಕ್ರಿಯೆ ನಡೆದು ಒಬ್ಬ ಸ್ಪರ್ಧಿ ಹೊರಹೋಗಿದ್ದರು. ಈ ವಾರ ಮತ್ತೆ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದ್ಯಾ ಅಥವಾ ಬೇರೆ ರೀತಿಯಲ್ಲಿ ಈ ವಾರದ ವೀಕೆಂಡ್ ಕಾರ್ಯಕ್ರಮ ನಡೆದು ಎಲ್ಲರನ್ನು ನಿಬ್ಬೆರಗಾಗಿಸಲಿದ್ಯಾ ಎಂಬುದನ್ನು ಕಾದುನೋಡಬೇಕಾಗಿದೆ.